Published on: August 6, 2022

ಸುದ್ಧಿ ಸಮಾಚಾರ – 06 ಆಗಸ್ಟ್ 2022

ಸುದ್ಧಿ ಸಮಾಚಾರ – 06 ಆಗಸ್ಟ್ 2022

  • ಚೆಸ್ ಒಲಂಪಿಯಾಡ್ ನಿಂದ ಪ್ರೇರಣೆ ಪಡೆದು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಲ್ಲಿ ಚೆಸ್ ಕಲಿಕೆಯನ್ನು ಉತ್ತೇಜಿಸಲು ಮುಂದಾಗಿದೆ. ಗ್ರಂಥಾಲಯಗಳಲ್ಲಿ ಒಳಾಂಗಣ ಬೋರ್ಡ್ ಗೇಮ್ ಗಳನ್ನು ಪರಿಚಯಿಸಲು ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದ್ದು, ಜಿಲ್ಲೆಯಾದ್ಯಂತ ಡಿಜಿಟಲ್ ಗ್ರಂಥಾಲಯಗಳಲ್ಲಿ ಪರಿಚಯವಾಗಿರುವ ಚದುರಂಗವನ್ನು ಕೊಡಗು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈಗ ಕಲಿಯುತ್ತಿದ್ದಾರೆ.

  • ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ‘ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾದರ್ನ್‌ ಕ್ಯಾಲಿಫೋರ್ನಿಯಾ’ ಇವರು ಆಯೋಜಿಸುವ ‘ಫೆಸ್ಟಿವಲ್ ಆಫ್ ಗ್ಲೋಬ್’(FOG)ನ ಪ್ರಶಸ್ತಿಗೆ ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ ಪಾತ್ರರಾಗಿದ್ದಾರೆ.
  • ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ ‘ಆಜಾದಿಸ್ಯಾಟ್’ ಇಸ್ರೋದ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ (ಎಸ್‌ಎಸ್‌ಎಲ್‌ವಿ) ಉಡಾವಣೆಗೆ ಸಿದ್ಧವಾಗಿದೆ.
  • ಅಪರೂಪದ ಕಪ್ಪು ಹುಲಿ ಭಾರತದ ಒಡಿಶಾದ ಕಾಡಿನಲ್ಲಿ ಇದೆ. ಒಡಿಶಾದ ‘ಸಿಮ್ಲಿಪಾಲ್ ನ್ಯಾಷನಲ್ ಪಾರ್ಕ್‌’ನಲ್ಲಿ ಈ ಕಪ್ಪು ಹುಲಿಯ ಚಲನವಲನಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
  • ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಫಾರ್ಚೂನ್ ನಿಯತಕಾಲಿಕ ಪ್ರಕಟಿಸಿರುವ ಜಗತ್ತಿನ ಪ್ರಮುಖ 500 ಕಂಪನಿಗಳ ಪಟ್ಟಿಯಲ್ಲಿ 98ನೇ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ವಾಲ್‌ಮಾರ್ಟ್‌ ಮೊದಲ ಸ್ಥಾನದಲ್ಲಿದೆ. ಅಮೆಜಾನ್‌ ಎರಡನೇ ಸ್ಥಾನ ಪಡೆದುಕೊಂಡಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯು 104ನೇ ಸ್ಥಾನಕ್ಕೆ ತಲುಪಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (142), ಒಎನ್‌ಜಿಸಿ (190), ಟಾಟಾ ಸಮೂಹದ ಟಾಟಾ ಮೋಟರ್ಸ್‌ (370) ಮತ್ತು ಟಾಟಾ ಸ್ಟೀಲ್‌ (435) ಹಾಗೂ ರಾಜೇಶ್‌ ಎಕ್ಸ್‌ಪೋರ್ಟ್ಸ್‌ (437) ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಎಸ್‌ಬಿಐ 236 ಮತ್ತು ಬಿಪಿಸಿಎಲ್‌ 295ನೇ ಸ್ಥಾನದಲ್ಲಿವೆ.

ಕಾಮನ್‌ವೆಲ್ತ್ ಗೇಮ್ಸ್ 2022

  • 20 ವರ್ಷದ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.
  • ಭಾರತದ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಮಣಿಪುರದ ಎಲ್.ಸುಶೀಲಾ ದೇವಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
  • 67ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ 300 ಕೆಜಿ ಭಾರತ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇನ್ನು 300 ಕೆಜಿ ತೂಕ ಎತ್ತುವ ಮೂಲಕ ಗೇಮ್ಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
  • ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದಾಖಲೆಯ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. 116kg ಭಾರ ಎತ್ತುವ ಮೂಲಕ ಬಿಂದ್ಯಾರಾಣಿ ತನ್ನ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕವನ್ನು ಗೆದ್ದುಕೊಂಡಿದ್ದಲ್ಲದೆ, ವೈಯಕ್ತಿಕ ಅತ್ಯುತ್ತಮ, ರಾಷ್ಟ್ರೀಯ ದಾಖಲೆ ಮತ್ತು ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಕ್ಲೀನ್ ಮತ್ತು ಜರ್ಕ್‌ನಲ್ಲಿ ಸಾಧಿಸಿದಳು. 2021 ರಲ್ಲಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಕ್ಲೀನ್ ಮತ್ತು ಜರ್ಕ್ ಸ್ಪರ್ಧೆಯಲ್ಲಿ ಬಿಂದ್ಯಾರಾಣಿ ಚಿನ್ನದ ಪದಕವನ್ನು ಗೆದ್ದಿದ್ದರು. ಅವರು 2019 ಮತ್ತು 2021 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದರು.
  • ಭಾರತದ ವಿಜಯ್‌ ಕುಮಾರ್‌ ಯಾದವ್‌ ಅವರು ಜೂಡೊ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
  • ಭಾರತ ಪುರುಷರ ಟೇಬಲ್ ಟೆನಿಸ್ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದೆ. ಫೈನಲ್‌ ಪಂದ್ಯದಲ್ಲಿ ಅನುಭವಿ ಶರತ್ ಕಮಲ್‌, ಜಿ.ಸತ್ಯನ್‌, ಹರ್ಮೀತ್ ದೇಸಾಯಿ ಒಳಗೊಂಡ ಭಾರತ ತಂಡವು ಸಿಂಗಾಪುರ ತಂಡವನ್ನು 3-1 ಅಂತರದಿಂದ ಮಣಿಸಿತು.
  • ಭಾರತದ ತೂಲಿಕಾ ಮಾನ್ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
  • ಸೌರವ್ ಘೋಷಾಲ್ ಅವರು ಸ್ಕ್ವಾಷ್‌ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕೂಟದ ಇತಿಹಾಸದಲ್ಲಿ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು. ಸೌರವ್ ಅವರಿಗೆ ಕಾಮನ್‌ವೆಲ್ತ್ ಕೂಟದಲ್ಲಿ ಇದು ಎರಡನೇ ಪದಕ. 2018ರ ಗೋಲ್ಡ್‌ಕೋಸ್ಟ್ ಆವೃತ್ತಿಯಲ್ಲಿ ದೀಪಿಕಾ ಪಳ್ಳಿಕಲ್‌ ಜೊತೆಗೂಡಿ ಬೆಳ್ಳಿ ಪದಕ ಜಯಿಸಿದ್ದರು.
  • ವೇಟ್‌ಲಿಫ್ಟರ್‌ ಗುರ್ದೀಪ್ ಸಿಂಗ್ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಅವರು, ತಮ್ಮ ಚೊಚ್ಚಲ ಸಿಡಬ್ಲ್ಯುಜಿ ಅಭಿಯಾನದಲ್ಲಿ ಒಟ್ಟಾರೆ 390 ಕೆಜಿ (167 ಕೆಜಿ + 223 ಕೆಜಿ) ಎತ್ತುವ ಮೂಲಕ ಸಾಧನೆ ಮಾಡಿದರು.
  • ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹೈಜಂಪ್‌ನಲ್ಲಿ ಮೊದಲ ಪದಕ ಪ್ರಾಪ್ತಿಯಾಗಿದೆ.