Published on: August 11, 2022
ಭಾರತದ ಅತಿ ಎತ್ತರದ ಧ್ವಜಸ್ತಂಭ
ಭಾರತದ ಅತಿ ಎತ್ತರದ ಧ್ವಜಸ್ತಂಭ
ಸುದ್ದಿಯಲ್ಲಿ ಏಕಿದೆ?
ಹೊಸ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನವಾದ ಹೊಸಪೇಟೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಅತಿ ಎತ್ತರದ ಧ್ವಜಸ್ತಂಭ(123 ಮೀಟರ್ )ವನ್ನು ಅನಾವರಣಗೊಳಿಸಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮುಖ್ಯಾಂಶಗಳು
- ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ಕೂಡ ರಾಜ್ಯದಲ್ಲಿದ್ದು, ಅದು ಬೆಳಗಾವಿಯ ಕೋಟೆ ಕೆರೆಯಲ್ಲಿ 110 ಮೀಟರ್ ಎತ್ತರವನ್ನು ಹೊಂದಿದೆ.
- ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಈ ಯೋಜನೆಗೆ 6 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ಪುನೀತ್ ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ಈ ಧ್ವಜಸ್ತಂಭವನ್ನು ಅಳವಡಿಸುವ ಕಾರ್ಯವನ್ನು ಖಾಸಗಿ ಪ್ರಾಯೋಜಕರು ಕೈಗೊಂಡಿದ್ದಾರೆ.
- ಮಹಾರಾಷ್ಟ್ರ ಮೂಲದ ಕಂಪನಿಯೊಂದು ಧ್ವಜಸ್ತಂಭವನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದು, ಅದರ ಮೇಲೆ 120×80 ಅಡಿ ಆಯಾಮದ ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
-
‘ಹಂಪಿ ಮತ್ತು ತುಂಗಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಹೊಸ ಧ್ವಜಸ್ತಂಭವು ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಜಿಲ್ಲೆಯು ಈಗಾಗಲೇ ಪ್ರಪಂಚದಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೊಸಪೇಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿಯಾದರೂ ನಿಂತು ನೋಡಿದರೂ ಈ ಧ್ವಜಸ್ತಂಭ ಕಾಣಿಸುವಂತೆ ಅನಾವರಣಗೊಳಿಸಲಾಗುವುದು’ .