Published on: August 11, 2022

ಕ್ವಿಟ್ ಇಂಡಿಯಾ ಚಳವಳಿ

ಕ್ವಿಟ್ ಇಂಡಿಯಾ ಚಳವಳಿ

ಸುದ್ದಿಯಲ್ಲಿ ಏಕಿದೆ?

ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಒತ್ತಾಯಿಸಿದ ಕ್ವಿಟ್ ಇಂಡಿಯಾ ಚಳವಳಿ ಆಗಸ್ಟ್ 8 ರಂದು 80ನೇ ವರ್ಷಾಚರಣೆ ಹಾಗೂ ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ ಭಾಗವಾಗಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಬೆಂಗಳೂರಿನಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿ ಅವರನ್ನು ಗೌರವಿಸಿದರು. 

ಮುಖ್ಯಾಂಶಗಳು

  • ರಾಜ್ಯಪಾಲರು ಸ್ವಾತಂತ್ರ್ಯ ಹೋರಾಟಗಾರರಾದ ಆರ್.ನಾರಾಯಣಪ್ಪ, ಶಂಕರನಾರಾಯಣ ರಾವ್ ಮತ್ತು ನಾಗಭೂಷಣ ರಾವ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಅವರು ಬ್ರಿಟಿಷ್ ರಾಜ್ ವಿರುದ್ಧದ ಅಸಹಕಾರ ಚಳವಳಿಯ ಭಾಗವಾಗಿದ್ದರು. ರಸ್ತೆಗಳನ್ನು ಅಗೆದು, ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಸ್ವಾತಂತ್ರ್ಯ ಚಳವಳಿಗೆ ಜನರನ್ನು ಪ್ರೋತ್ಸಾಹಿಸಿದ್ದರು.
  • ನಾಗಭೂಷಣ್ ರಾವ್ ಎರಡು ಬಾರಿ ಜೈಲುವಾಸ ಅನುಭವಿಸಿದರು — 1942 ರಲ್ಲಿ ಒಮ್ಮೆ ಶಿವಮೊಗ್ಗ ಜೈಲಿನಲ್ಲಿ ಮತ್ತು ಮುಂದಿನ ಬಾರಿ 1945 ರಲ್ಲಿ ಮತ್ತು ಬೆಂಗಳೂರು ಜೈಲಿನಲ್ಲಿ ಬಂಧಿಯಾದರು. ರಾಜ್ಯಪಾಲರು ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಹೋಗಿ ಸನ್ಮಾನಿಸಿದ್ದು, ಇದುವರೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜಭವನಕ್ಕೆ ಆಹ್ವಾನಿಸಿ ಚಹಾಕೂಟ ಏರ್ಪಡಿಸುತ್ತಿದ್ದರು.

ಭಾರತ ಬಿಟ್ಟು ತೊಲಗಿ ಚಳುವಳಿ (ಆಗಸ್ಟ್ ಕ್ರಾಂತಿ ) ಬಗ್ಗೆ

  • ಭಾರತ ಬಿಟ್ಟು ತೊಲಗಿ ಚಳುವಳಿ (ಆಗಸ್ಟ್ ಕ್ರಾಂತಿ )ಯು ಒಂದು ಅಸಹಕಾರ ಚಳುವಳಿಯಾಗಿದ್ದು ಆಗಸ್ಟ್ 1942ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು.
  • ಮುಂಬೈನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ ಕಮ್ಯುನಿಸ್ಟ್ ಮತ್ತು ಕಾರ್ಮಿಕ ಸಂಘಟನೆಯ ಯೂಸುಫ್ ಮೆಹೆರಾಲಿ ಅವರು “ಕ್ವಿಟ್ ಇಂಡಿಯಾ” ಎಂಬ ಘೋಷಣೆಯನ್ನು ನೀಡಿದರು.
  • ಆಗಸ್ಟ್ 8ರಂದು ಮುಂಬಯಿಯ ಗೊವಾಳಿಯ ಮೈದಾನ(ಇಂದಿನ ಹೆಸರು – ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು.
  • ಆದರೆ ಕೊನೆಗೆ ಬ್ರಿಟಿಷರು ಗಾಂಧೀಜಿಯವರನ್ನು ಬಂಧಿಸಿ ಅಗಾಖಾನ್‌ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು. ಈ ಘೋಷಣೆಯ ೨೪ ಗಂಟೆಗಳೊಳಗೆ ಬಹುತೇಕ ಕಾಂಗ್ರೆಸ್ ನಾಯಕರು ಬಂಧಿತರಾಗಿ ಆ ವರ್ಷವನ್ನು ಕಾರಾಗೃಹದಲ್ಲಿ ಕಳೆಯಬೇಕಾಯಿತು.

    ಮಹಾತ್ಮ ಗಾಂಧೀಜಿ ಅವರನ್ನ ಬ್ರಿಟಿಷರ ಬಂಧನ ಮಾಡಿದ ನಂತರ, ಜೆ.ಪಿ. ನಾರಾಯಣ್‌, ಲೋಹಿಯಾ, ಅರುಣಾ ಆಸಿಫ್‌ ಅಲಿ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದರು.

  • 1942ರಿಂದ 1947ರ ಕೇವಲ 5 ವರ್ಷದ ಅವಧಿಯಲ್ಲಿ ಭಾರತವು ಸ್ವಾತಂತ್ರ ಪಡೆಯಿತು. 1944ರಲ್ಲಿ ಮಹಾತ್ಮ ಗಾಂಧಿ ತಮ್ಮ ಹೋರಾಟವನ್ನು ಮುಂದುವರೆಸಿದರು ಮತ್ತು 21 ದಿನಗಳ ಉಪವಾಸವನ್ನು ಆರಂಭಿಸಿದರು. ಭಾರತ್ ಚೋಡೋ ಆಂದೋಲನ ಅಥವ 1942ರ ಆಗಸ್ಟ್ ಕ್ರಾಂತಿ ಭಾರತದಲ್ಲಿನ ಬ್ರಿಟಿಷರ ಆಡಳಿತ ಕೊನೆಗೊಳಿಸಲು ಕೊಟ್ಟ ಕರೆಯಾಗಿತ್ತು.
  • ಜುಲೈ ತಿಂಗಳಿನಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕು ಎಂಬ ನಿರ್ಣಯವನ್ನು ಮಂಡನೆ ಮಾಡಿತು. ಆಗಸ್ಟ್ 8ರಂದು ಈ ಕುರಿತು ಕರೆಯನ್ನು ಗಾಂಧೀಜಿ ನೀಡಿದರು.

ಕರ್ನಾಟಕದ ಈಸೂರು ಗ್ರಾಮ

  • ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಆಗಸ್ಟ್ 9 ರಂದು ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಪ್ರತಿಧ್ವನಿಸಿತು. ಬ್ರಿಟಿಷರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವೆ ಘರ್ಷೆಣೆ ನಡೆಯಿತು. ಈ ಹೋರಟ ವಿಕೋಪಕ್ಕೆ ತಿರುಗಿ ಹೋರಾಟದಲ್ಲಿ ಭಾಗಿಯಾಗಿದ್ದ ಹಲವು ನಾಯಕರನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು.
  • 1942 ಸೆಪ್ಟಂಬರ್ 27ರಂದು ಈಸೂರಿನ ವೀರಭದ್ರೆಶ್ವೇರ ದೇವಾಲಯದ ಮೇಲೆ ಪ್ರತ್ಯೇಕ ಧ್ವಜವನ್ನು ಹಾರಿಸಲಾಯಿತು. ಈಸೂರು ಸ್ವತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಲಾಯಿತು. “ಮಾಡು ಇಲ್ಲವೆ ಮಡಿ” ಎಂಬ ಗಾಂಧೀಜಿಯವರ ಕರೆಗೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ, ಭಾರತದ ಮೂಲೆ ಮೂಲೆಯಿಂದ ಹಲವು ಮಂದಿ ಈ ಹೋರಾಟಕ್ಕೆ ಬೆಂಬಲ ನೀಡಿದರು. ಬ್ರಿಟಿಷರ ವಿರುದ್ಧದ ಈ ಹೋರಾಟದಲ್ಲಿ ಹಲವು ಮಂದಿ ಹುತಾತ್ಮರಾದರು.