1. ಫಾರ್ಚೂನ್ 500 ಗ್ಲೋಬಲ್ ಲಿಸ್ಟ್ 2022ರಲ್ಲಿ ಭಾರತದ ಅತ್ಯುನ್ನತ ಶ್ರೇಣಿಯ ಕಂಪನಿ ಯಾವುದು?
A. ರಿಲಯನ್ಸ್ ಇಂಡಿಯಾ ಲಿಮಿಟೆಡ್
B. ಎಲ್ಐಸಿ
C. ಐಒಸಿಎಲ್
D. ಒಎನ್ಜಿಸಿ
2. ಹೊಸದಾಗಿ ಗೊತ್ತುಪಡಿಸಿದ ರಾಮ್ಸರ್ ಸೈಟ್(Ramsar site), ಕೂಂತನ್ಕುಲಂ ಪಕ್ಷಿಧಾಮವು ಯಾವ ರಾಜ್ಯದಲ್ಲಿದೆ?
A. ಗೋವಾ
B. ಕರ್ನಾಟಕ
C. ತಮಿಳುನಾಡು
D. ಮಧ್ಯಪ್ರದೇಶ
3.ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಎತ್ತರ ಜಿಗಿತದಲ್ಲಿ ಭಾರತದ ಮೊದಲ ಪದಕವನ್ನು ಗೆದ್ದವರು ಯಾರು..?
A. ದ್ಯುತಿ ಚಂದ್
B. ಹಿಮಾ ದಾಸ್
C. ಎಂ ಶ್ರೀಶಂಕರ್
D. ತೇಜಸ್ವಿನ್ ಶಂಕರ್
4. ‘ಯುದ್ಧ್ ಅಭ್ಯಾಸ್’ ಭಾರತ ಮತ್ತು ಯಾವ ದೇಶದ ನಡುವೆ ನಡೆದ ಮಿಲಿಟರಿ ವ್ಯಾಯಾಮ..?
A. ಜಪಾನ್
B. ಯುಎಸ್ಎ
C. ಆಸ್ಟ್ರೇಲಿಯಾ
D. ಫ್ರಾನ್ಸ್
5. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮೊದಲ ಬಾರಿಗೆ ಈ ಕೆಳಗಿನ ಯಾವ ಕ್ರೀಡೆಗಳಲ್ಲಿ ಭಾರತವು ಐತಿಹಾಸಿಕ ಚಿನ್ನವನ್ನು ಗೆದ್ದಿದೆ..?
A. ಲಾನ್ ಬೌಲ್
B. ವಾಟರ್ ಪೋಲೋ
C. ರೋಯಿಂಗ್
D. ಫೆನ್ಸಿಂಗ್
6.ನ್ಯಾನ್ಸಿ ಪೆಲೋಸಿ (Nancy Pelosi) ಯಾರು..?
A. ಶ್ವೇತಭವನದ ಮುಖ್ಯಸ್ಥರು
B. US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್
C. ರಾಜ್ಯ ಕಾರ್ಯದರ್ಶಿ
D. ರಕ್ಷಣಾ ಕಾರ್ಯದರ್ಶಿ
7. ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಯಾವುದರ ಸ್ಮರಣಾರ್ಥ ‘ರೇಡಿಯೊ ಜಯಘೋಷ್’ ಚಾನಲ್ಗೆ ಉತ್ತರ ಪ್ರದೇಶದಲ್ಲಿ ಚಾಲನೆ ದೊರೆತಿತು?
A. ಕ್ವಿಟ್ ಇಂಡಿಯಾ ಚಳುವಳಿ
B. ಸ್ವಾತಂತ್ರ್ಯ ದಿನ
C. ಕಾಕೋರಿ ರೈಲು ಪ್ರಕರಣ
D. ಅಸಹಕಾರ ಚಳುವಳಿ
8. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ
1. ಕ್ವಿಟ್ ಇಂಡಿಯಾ ಚಳುವಳಿಯನ್ನು ಆಗಸ್ಟ್ ಕ್ರಾಂತಿ ಎಂದು ಕರೆಯಲಾಗುತ್ತದೆ
2. ಯೂಸುಫ್ ಖಾನ್ ಕ್ವಿಟ್ ಇಂಡಿಯಾ ಘೋಷಣೆಯನ್ನು ಕೊಟ್ಟರು.
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು2 ಎರಡೂ ಸರಿ
D. 1 ಮತ್ತು2 ಎರಡೂ ತಪ್ಪು