Published on: August 15, 2022

‘ಗಾಲ್ ಮೊಬೈಲ್’

‘ಗಾಲ್ ಮೊಬೈಲ್’

ಸುದ್ದಿಯಲ್ಲಿ ಏಕಿದೆ?

ಚರಂಡಿಯ ನೀರನ್ನು ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ಇಸ್ರೇಲ್ ಕಂಪನಿಯ ‘ಗಾಲ್ ಮೊಬೈಲ್’ ನೀರು ಸಂಸ್ಕರಣೆ ಯಂತ್ರವು ನಗರಕ್ಕೆ ಬಂದಿದೆ. ಬೊಮ್ಮನಹಳ್ಳಿಯ ಎಚ್ಎಸ್ಆರ್ ಲೇಔಟ್‌ನಲ್ಲಿ ಇದರ ಮೊದಲ ಪ್ರಾತ್ಯಕ್ಷಿಕೆ ನೀಡಲಾಯಿತು, ಕೊಳವೆಯ ಮೂಲಕ ಚರಂಡಿ ನೀರನ್ನು ಹೀರಿ, ನಾಲ್ಕು ಹಂತಗಳಲ್ಲಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ಕೊಡುತ್ತದೆ.

ಮುಖ್ಯಾಂಶಗಳು

  • ಕಿರಿದಾದ ಪ್ರದೇಶಗಳಿಗೂ ಕೊಂಡೊಯ್ಯಬಹುದಾದ ಚಿಕ್ಕ ವಾಹನ ದಲ್ಲಿ ಯಂತ್ರವನ್ನು ಅಳವಡಿಸಲಾಗಿದೆ. ನಾಲ್ಕು ಶೋಧಕ ಕೊಳಾಯಿಗಳು ತ್ಯಾಜ್ಯ ನೀರಿನ ಸಣ್ಣ ಮತ್ತು ದೊಡ್ಡ ಕಣಗಳನ್ನು ಶೋಧಿಸಿ, ನೀರಿನ ದುರ್ಗಂಧವನ್ನು ತೆಗೆದು, ಅಂತಿಮವಾಗಿ ಕುಡಿಯಲು ಯೋಗ್ಯವಾದ ನೀರನ್ನು ಪ್ರತ್ಯೇಕಿಸುತ್ತವೆ.
  • ‘ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾಗ, ಈ ಯಂತ್ರಗಳನ್ನು ಭಾರತಕ್ಕೆ ತರಲು ಆಸಕ್ತಿ ತೋರಿದ್ದರು. ಇದೀಗ ಗುಜರಾತಿನಲ್ಲಿ 15 ಯಂತ್ರಗಳು ಕೆಲಸ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಬೊಮ್ಮನಹಳ್ಳಿಗೆ ತರಲಾಗಿದೆ.

ಪ್ರಯೋಜನ

  • ‘ನೆರೆ ಸಂದರ್ಭದಲ್ಲಿ ಹಾಗೂ ಫ್ಲೋರೈಡ್‌ಯುಕ್ತ ನೀರು ಇರುವ ಪ್ರದೇಶಗಳಿಗೆ ಇದು ಪ್ರಯೋಜನಕಾರಿ. ಅಪಾರ್ಟ್‌ಮೆಂಟ್‌ನ ಎಸ್‌ಟಿಪಿಗಳಿಗೆ, ಬಡಾವಣೆ, ಶಾಲಾ-ಕಾಲೇಜುಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ಈ ಯಂತ್ರವನ್ನು ಅಳವಡಿಸಿಕೊಳ್ಳಬಹುದು. ಯಂತ್ರಕ್ಕೆ ರೂ. 1.25 ಲಕ್ಷ ಬೆಲೆ ಇದ್ದು, ಕಂಪನಿಯೇ ಇದರ ನಿರ್ವಹಣೆ ಮಾಡುತ್ತದೆ. ಈ ಯಂತ್ರವನ್ನು ‘ಮೇಕ್ ಇನ್ ಕರ್ನಾಟಕ’ ಯೋಜನೆಯ ಅಡಿ ಉತ್ಪಾ ದನೆ ಮಾಡಲು ಯೋಜಿಸಲಾಗಿದೆ.
  • ಈಗಾಗಲೇ ಮಿಲಿಟರಿ, ಎನ್‌ಡಿಆರ್‌ಎಫ್‌ನಲ್ಲಿ ಬಳಸಲಾಗುತ್ತಿದ್ದು, ನಿರ್ವಹಣಾ ವೆಚ್ಚವೂ ಕಡಿಮೆ ಇದೆ. ದಿನಕ್ಕೆ 15 ಸಾವಿರದಿಂದ 20 ಸಾವಿರ ಲೀಟರ್ ನೀರನ್ನು ಸಂಸ್ಕರಿಸುತ್ತದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಕೂಡ ದೊರೆತಿದೆ’.

ಏನಿದು ಗಾಲ್ ಮೊಬೈಲ್?· 

       ಗಾಲ್ ಮೊಬೈಲ್ ವಾಹನ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಯಾವುದೇ ನೀರಿನ ಮೂಲದಿಂದ ಸುರಕ್ಷಿತ ಕುಡಿಯುವ ನೀರಿನ ಸಂಸ್ಕರಣೆ, ಸಂಗ್ರಹಣೆ ಮತ್ತು ವಿತರಣೆಯನ್ನು ಒದಗಿಸುತ್ತದೆ. ವಾಹನವು ಗಂಟೆಗೆ ಸರಿಸುಮಾರು 8,000 ಕಪ್ ನೀರನ್ನು ಉತ್ಪಾದಿಸುತ್ತದೆ.