Published on: August 20, 2022

ಭಯೋತ್ಪಾದನಾ ನಿಗ್ರಹ ಕವಾಯತ

ಭಯೋತ್ಪಾದನಾ ನಿಗ್ರಹ ಕವಾಯತ

ಸುದ್ದಿಯಲ್ಲಿ ಏಕಿದೆ?

ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಅಡಿಯಲ್ಲಿ ಅಕ್ಟೋಬರ್‌ನಲ್ಲಿ ಭಾರತ ಆಯೋಜಿಸಲಿರುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕಿಸ್ತಾನವು ಭಾಗಿಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮುಖ್ಯಾಂಶಗಳು 

  • ಕವಾಯತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನಾ ತುಕಡಿಗಳು ಒಟ್ಟಿಗೆ ಭಾಗವಹಿಸಲಿವೆ. ಭಾರತದಲ್ಲಿ ನಡೆಯುತ್ತಿರುವ ಇಂಥ ಕವಾಯತಿನಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾಗವಹಿಸುತ್ತಿದೆ. ಭಾರತ ಅಧ್ಯಕ್ಷತೆ ವಹಿಸಿರುವ ಎಸ್‌ಸಿಒದ ಪ್ರಾದೇಶಿಕ ಭಯೋತ್ಪಾದನೆ ನಿಗ್ರಹ ವ್ಯವಸ್ಥೆ (ಆರ್‌ಟಿಎಸ್‌) ಅನ್ವಯ ಇದು ನಡೆಯಲಿದೆ. ಎಸ್‌ಸಿಒ ಸದಸ್ಯ ರಾಷ್ಟ್ರವಾಗಿ ಪಾಕಿಸ್ತಾನವು ಭಾಗವಹಿಸಲಿದೆ.
  • ಹರಿಯಾಣದ ಮಾನೇಸರ್‌ನಲ್ಲಿ ನಡೆಯುವ ಈ ಕವಾಯಿತಿನಲ್ಲಿ ರಷ್ಯಾ, ಚೀನಾ, ಪಾಕಿಸ್ತಾನ, ಇರಾನ್, ಕಜಕಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ ಕೂಡಾ ಭಾಗವಹಿಸಲಿವೆ ಎಂದು ವರದಿ ತಿಳಿಸಿದೆ.
  • ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲೇ ಶ್ರೀಲಂಕಾ ಹಾಗೂ ಪಾಕಿಸ್ತಾನದ ಯುದ್ಧನೌಕೆಗಳು ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಜಂಟಿ ಕವಾಯತು ನಡೆಸಲಿವೆ.

ಪಾಕಿಸ್ತಾನದ ನೌಕಾಪಡೆಗೆ ಸೇರಿದ ‘ಪಿಎನ್‌ಎಸ್‌ ತೈಮೂರ್‌’ ಹಾಗೂ ಶ್ರೀಲಂಕಾ ನೌಕಾಪಡೆಗೆ ಸೇರಿದ ‘ಎಸ್‌ಎಲ್‌ಎನ್‌ಎಸ್‌ ಸಿಂಧೂರಳಾ’ ಯುದ್ಧನೌಕೆಗಳು ಜಂಟಿಯಾಗಿ ಕವಾಯತು ನಡೆಸಲಿವೆ. ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು ಹಾಗೂ ಸಹಕಾರವನ್ನು ಬಲಪಡಿಸುವುದು ಇದರ ಉದ್ದೇಶ’ ಎಂದು ಶ್ರೀಲಂಕಾದ ನೌಕಾಪಡೆ ಹೇಳಿದೆ.

ಶಾಂಘೈ ಸಹಕಾರ ಸಂಸ್ಥೆ (SCO)  

  • ರಚನೆ: 15 ಜೂನ್ 2001
  • ಪ್ರಧಾನ ಕಛೇರಿ: ಬೀಜಿಂಗ್, ಚೀನಾ (ಸೆಕ್ರೆಟರಿಯೇಟ್) ತಾಷ್ಕೆಂಟ್, ಉಜ್ಬೇಕಿಸ್ತಾನ್ (RATS ಕಾರ್ಯಕಾರಿ ಸಮಿತಿ)
  • ಇದು ಶಾಂಘೈ5 ಚೀನಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ ಮತ್ತು ತಜಿಕಿಸ್ತಾನ್ ನಡುವೆ 1996 ರಲ್ಲಿ ರೂಪುಗೊಂಡ ಪರಸ್ಪರ ಭದ್ರತಾ ಒಪ್ಪಂದವಾಗಿದೆ. ಮುಂದೆ ಇದೆ ಶಾಂಘೈ ಸಹಕಾರ ಸಂಘ ಎಂದು ರೂಪುಗೊಂಡಿತು.
  • ಅದರ ಸದಸ್ಯತ್ವವು ಎಂಟು ರಾಜ್ಯಗಳಿಗೆ ವಿಸ್ತರಿಸಿದೆ, ಭಾರತ ಮತ್ತು ಪಾಕಿಸ್ತಾನವು 9 ಜೂನ್ 2017 ರಂದು ಸೇರಿಕೊಂಡವು.
  • ಸದಸ್ಯ ರಾಷ್ಟ್ರಗಳು : ಚೀನಾ, ಭಾರತ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ,ತಜಕಿಸ್ತಾನ,ಉಜ್ಬೇಕಿಸ್ತಾನ್
  • ಯುರೋಪ್ ಮತ್ತು ಏಷ್ಯಾ ದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಸ್ಥೆಯಾಗಿದೆ. ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ, ಇದು ವಿಶ್ವದ ಅತಿದೊಡ್ಡ ಪ್ರಾದೇಶಿಕ ಸಂಸ್ಥೆಯಾಗಿದ್ದು, ಯುರೋಪ್ ಮತ್ತು ಏಷ್ಯಾ ಪ್ರದೇಶದ ಸರಿಸುಮಾರು 60%, ವಿಶ್ವದ ಜನಸಂಖ್ಯೆಯ 40% ಮತ್ತು ಜಾಗತಿಕ GDP ಯ 30% ಕ್ಕಿಂತ ಹೆಚ್ಚು ಆವರಿಸಿದೆ.