Published on: August 20, 2022
ವಿಜ್ಞಾನಿ ಡಾ.ನಲ್ಲತಂಬಿ ಕಲೈಸೆಲ್ವಿ
ವಿಜ್ಞಾನಿ ಡಾ.ನಲ್ಲತಂಬಿ ಕಲೈಸೆಲ್ವಿ
ಸುದ್ದಿಯಲ್ಲಿ ಏಕಿದೆ?
80 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ’ಯ (ಸಿಎಸ್‌ಐಆರ್) ಮಹಾನಿರ್ದೇಶಕ ಹುದ್ದೆಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಅವರೆ ವಿಜ್ಞಾನಿ ಡಾ.ನಲ್ಲತಂಬಿ ಕಲೈಸೆಲ್ವಿ.
ಮುಖ್ಯಾಂಶಗಳು
- ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವಾಗ ಇಂಥ ಮಹೋನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಕಲೈಸೆಲ್ವಿ.
- ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಅಂಬಸಮುದ್ರಂ ಎಂಬ ಸಣ್ಣ ಪಟ್ಟಣದ ಕಲೈಸೆಲ್ವಿ. ತಮಿಳು ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಈಗ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ‘ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಿದ್ದು, ಮುಂದೆ ವಿಜ್ಞಾನದ ಪರಿಕಲ್ಪನೆಗಳನ್ನು ಅರಿತುಕೊಳ್ಳಲು ಸುಲಭವಾಯಿತು‘ ಎಂದು ಸೆಲ್ವಿ ಹೇಳಿದ್ದಾರೆ.
- ಇವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
- ಲಿಥಿಯಮ್ ಅಯಾನ್ ಬ್ಯಾಟರಿಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಎಲೆಕ್ಟ್ರೋಡ್‌ಗಳನ್ನು ನವೀನ ವಿಧಾನವನ್ನು ಅಭಿವೃದ್ಧಿಪಡಿಸಿದ್ದು ಕಲೈಸೆಲ್ವಿ ಅವರಿಗೆ ಗರಿ ಮೂಡಿಸಿದೆ.
- ಕಿರಿಯ ವಿಜ್ಞಾನಿಯಾಗಿ 25 ವರ್ಷಗಳ ಸಂಶೋಧನಾ ಪಯಣದಲ್ಲಿ ಎಲೆಕ್ಟ್ರೋಕೆಮಿಕಲ್ ಪವರ್ ಸಿಸ್ಟಂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ.
- ಸೋಡಿಯಂ ಅಯಾನ್/ಲಿಥಿಯಂ ಸಲ್ಫರ್ ಬ್ಯಾಟರಿಗಳು ಮತ್ತು ಸೂಪರ್ ಕೆಪಾಸಿಟರ್‌ಗಳ ಅಭಿವೃದ್ಧಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. 125 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಿಸಿದ್ದು, ಆರಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಕುರಿತು:
- CSIR ಅನ್ನು ಸೆಪ್ಟೆಂಬರ್ 1942 ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಅಂದಿನಿಂದ, ಇದು ದೇಶದ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಧನಸಹಾಯ ಪಡೆದಿದೆ. ಇದನ್ನು ಸೊಸೈಟಿಗಳ ನೋಂದಣಿ ಕಾಯಿದೆ, 1860 ರ ಅಡಿಯಲ್ಲಿ ನೋಂದಾಯಿಸಲಾಗಿದೆ.
- CSIR ನ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು- ಸಾಗರ ವಿಜ್ಞಾನಗಳು, ಏರೋಸ್ಪೇಸ್ ಎಂಜಿನಿಯರಿಂಗ್, ಜೀವ ವಿಜ್ಞಾನಗಳು, ಗಣಿಗಾರಿಕೆ, ಆಹಾರ, ಪೆಟ್ರೋಲಿಯಂ, ಪರಿಸರ ವಿಜ್ಞಾನ ಮತ್ತು ರಾಸಾಯನಿಕಗಳು.
- ಸಿಎಸ್‌ಐಆರ್ ದೇಶದ ವೈಜ್ಞಾನಿಕ ಆದ್ಯತೆಯ ವಲಯಕ್ಕೆ ಸೇರಿದ ಅತ್ಯಂತ ಮಹತ್ವದ ಸಂಶೋಧನಾ ಪ್ರಯೋಗಾಲಯ ಸಂಸ್ಥೆಗಳ ಜಾಲವನ್ನು ಹೊಂದಿರುವ ಸಂಸ್ಥೆ ಇದು. ಸಿಎಸ್‌ಐಆರ್ ಅಡಿ 38 ಸಂಶೋಧನಾ ಸಂಸ್ಥೆಗಳಿವೆ.