Published on: August 25, 2022
ಶಿಶುಪಾಲನೆಗೆ: ಮೊಬೈಲ್ ಆ್ಯಪ್ ಬಿಡುಗಡೆ
ಶಿಶುಪಾಲನೆಗೆ: ಮೊಬೈಲ್ ಆ್ಯಪ್ ಬಿಡುಗಡೆ
ಸುದ್ದಿಯಲ್ಲಿ ಏಕಿದೆ?
ಮೊದಲ ಎರಡು ವರ್ಷ ಶಿಶುವಿನ ಚಲನವಲನಗಳಲ್ಲಿ ಆಗುವ ಪ್ರಗತಿ, ಬದಲಾವಣೆಗಳನ್ನು ಗುರುತಿಸಲು ತಂದೆ–ತಾಯಿಗೆ ನೆರವಾಗುವಂತೆ ರೂಪಿಸಿದ ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಬಿಡುಗಡೆಗೊಳಿಸಿದರು.
ಮುಖ್ಯಾಂಶಗಳು
- ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಆರೋಗ್ಯ, ಸಂವೇದನೆ ಕುರಿತಂತೆ ಶಿಶುವಿನ ಸಮಗ್ರ ಬೆಳವಣಿಗೆಯಲ್ಲಿ ಮೊದಲ ಸಾವಿರ ದಿನಗಳು ನಿರ್ಣಾಯಕವಾಗಿವೆ ಆದ್ದರಿಂದ ಈ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಲಾಗಿದೆ.
- ನೂತನ ಅಪ್ಲಿಕೇಷನ್‌ನಲ್ಲಿ ಪಾಲಕರಿಗೆ ಶಿಶುಪಾಲನೆಗೆ ಅನುಸರಿಸಬೇಕಾದ ಕ್ರಮಗಳು ಕುರಿತಂತೆ ಸಲಹೆಗಳು ಇರಲಿವೆ. ನಿತ್ಯ ಅನುಸರಿಸಬೇಕಾದ ಕ್ರಮ, ಪಾಲಕರಲ್ಲಿ ಮೂಡಬಹುದಾದ ಅನುಮಾನಗಳಿಗೆ ಉತ್ತರಗಳನ್ನು ಒದಗಿಸಲಿದೆ.
-
ಶಿಶು ಮರಣ ಪ್ರಮಾಣದ ಅನುಪಾತ 2014ರಲ್ಲಿ 45:1000 ಇದ್ದರೆ, 2019ರಲ್ಲಿ 35:1000ಕ್ಕೆ ಇಳಿದಿತ್ತು. ಈ ಪ್ರಗತಿಗೆ ‘ಪಾಲನ್ 1000’ ರಾಷ್ಟ್ರೀಯ ಅಭಿಯಾನ ಮತ್ತು ಪಾಲಕರಿಗಾಗಿ ಬಿಡುಗಡೆ ಮಾಡಿದ್ದ ಮೊಬೈಲ್ ಅಪ್ಲಿಕೇಷನ್ ಕೂಡಾ ಕಾರಣವಾಗಿತ್ತು ಎಂದು ಆರೋಗ್ಯ ಸಚಿವಾಲಯವು ಹೇಳಿಕೆ ನೀಡಿದೆ.