Published on: September 14, 2022
ಕರಾವಳಿ ಕರ್ನಾಟಕ ಅಭಿವೃದ್ಧಿ
ಕರಾವಳಿ ಕರ್ನಾಟಕ ಅಭಿವೃದ್ಧಿ
ಸುದ್ದಿಯಲ್ಲಿ ಏಕಿದೆ?
ಕರಾವಳಿ ಜಿಲ್ಲೆಯ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, 3,800 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.
ಮುಖ್ಯಾಂಶಗಳು
- ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿರುವ ಯೋಜನೆಗಳು ಕರಾವಳಿ ಕರ್ನಾಟಕದ ಬೆಳವಣಿಗೆಗೆ ಉತ್ತೇಜನ ನೀಡಲಿವೆ.
- ಪ್ರಧಾನಮಂತ್ರಿ ಮತ್ಸ್ಯ ಸಂಪದ ಕಾರ್ಯಕ್ರಮದಡಿಯಲ್ಲಿ ಮೋದಿಯವರು 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳನ್ನು ಮಂಜೂರು ಮಾಡಿದ್ದಾರೆ.
- ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಒದಗಿಸಿದ್ದು, ಅವರಿಗೆ ಯಾವುದೇ ತೊಂದರೆಯಿಲ್ಲದೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ.
- ಕ್ರೂಸ್ ಟೂರಿಸಂಗೆ ನವಮಂಗಳೂರು ಬಂದರು ಅತ್ಯಂತ ಮಹತ್ವದ್ದಾಗಿದೆ.
ಯೋಜನೆಗಳ ಮಾಹಿತಿ:
- ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ
- 2,200 ಜನರಿಗೆ ಉದ್ಯೋಗಾವಕಾಶಗಳು , ಸಾಮಥ್ರ್ಯ ಹೆಚ್ಚಳ ಹಾಗೂ ಕಾರ್ಯನಿರ್ವಹಣಾ ಸಮಯದಲ್ಲಿ 35% ಉಳಿತಾಯ , ಬಂದರು ಕಡಲತೀರ ಹಾಗೂ ಪರಿಸರ ವ್ಯವಸ್ಥೆಗಳಿಗೆ ಪರಿಸರ ಸಂರಕ್ಷಣೆಯ ಲಾಭಗಳು ಯೋಜನೆ ವೆಚ್ಚ: ರೂ.281 ಕೋಟಿ
- ಸಾಮರ್ಥ್ಯ : 6.02 ಎಂಟಿಪಿಎರಷ್ಟು
- ಬಿಎಸ್ ಗಿI ಉನ್ನತೀಕರಣ ಯೋಜನೆ
- ಬಿಎಸ್ ಗಿI ಶ್ರೇಣಿ ಇಂಧನಗಳ ಉತ್ಪಾದನೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ
- ಯೋಜನೆ ವೆಚ್ಚ: ರೂ.1,829 ಕೋಟಿ
- ಸಮುದ್ರ ನೀರಿನ ನಿರ್ಲವಣೀಕರಣ ಘಟಕ
- ಶುದ್ಧ ನೀರಿನ ಸಂರಕ್ಷಣೆ, 30 ಎಂಎಲ್ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ ಯೋಜನೆ ವೆಚ್ಚ: ರೂ.677 ಕೋಟಿ
ಶಿಲಾನ್ಯಾಸ ಯೋಜನೆಗಳ ಮಾಹಿತಿ:
- ಎನ್ಎಂಪಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ ಸ್ಥಾಪನೆ
- 2,200 ಜನರಿಗೆ ಉದ್ಯೋಗಾವಕಾಶಗಳು , ದ್ರವರೂಪದ ಸರಕುಗಳ ಅನ್ಲೋಡಿಂಗ್ ಸಮಯದಲ್ಲಿ ಉಳಿತಾಯ , ಎಲ್ಪಿಜಿಯ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ , ಪಿಎಂ ಉಜ್ವಲಾ ಯೋಜನೆಗೆ ನೇರ ಬೆಂಬಲ
- ಯೋಜನೆ ವೆಚ್ಚ: ರೂ.500 ಕೋಟಿ
- ಸಾಮರ್ಥ್ಯ ಹೆಚ್ಚಳ: 200 ಎಂಟಿಪಿಎ
- ಎನ್ಎಂಪಿಯಲ್ಲಿ ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ
- ಖಾದ್ಯ ತೈಲದ ದೋಣಿಗಳ ಓಡಾಟದಲ್ಲಿ ಸುಧಾರಣೆ , ಖಾದ್ಯ ತೈಲದ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ, ದರ-ಸಾಮರ್ಥ್ಯ ಸುಧಾರಣೆ, 700 ಜನರಿಗೆ ಉದ್ಯೋಗಾವಕಾಶಗಳು
- ಯೋಜನೆ ವೆಚ್ಚ: ರೂ.100 ಕೋಟಿ
- ಎಂಟಿಪಿಎ ಸಾಮರ್ಥ್ಯ: 0.30
- ಎನ್ಎಂಪಿಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ
- ಬಿಟುಮೆನ್ ಸಾಗಣೆಯಲ್ಲಿ ಸುಧಾರಣೆ, ಬಿಟುಮೆನ್ನ ಒಟ್ಟಾರೆ ದರದಲ್ಲಿ ಇಳಿಕೆ, ಪಿಎಂ ಗತಿ ಶಕ್ತಿ ಯೋಜನೆಗೆ ನೇರ ಬೆಂಬಲ, 275 ಜನರಿಗೆ ಉದ್ಯೋಗಾವಕಾಶಗಳು
- ಯೋಜನೆ ವೆಚ್ಚ: ರೂ.100 ಕೋಟಿ
- ಎಂಟಿಪಿಎ ಸಾಮರ್ಥ್ಯ: 40,000 ಎಂಟಿ/ ಬಿಟುಮೆನ್ ದ್ರವರೂಪದ ಸರಕು
- ಎನ್ಎಂಪಿಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ
- ಖಾದ್ಯ ತೈಲ ಮತ್ತು ಬಿಟುಮೆನ್ನ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ, ದರ-ಸಾಮರ್ಥ್ಯ ಸುಧಾರಣೆ , 275 ಜನರಿಗೆ ಉದ್ಯೋಗಾವಕಾಶಗಳು, ಯೋಜನೆ ವೆಚ್ಚ: ರೂ.100 ಕೋಟಿ
- ಎಂಟಿಪಿಎ ಸಾಮರ್ಥ್ಯ: ಪ್ರತಿ ಎಕರೆಗೆ ವಾರ್ಷಿಕ 8,000 ಟನ್ಗಳ ಎಂಜಿಟಿ
- ಕುಲೈನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ
- 8,500 ಜನರಿಗೆ ಉದ್ಯೋಗಾವಕಾಶಗಳು ಕರಾವಳಿ ಮೀನುಗಾರಿಕಾ ಸಮುದಾಯದವರಿಗೆ ಸುಮಾರು ರೂ.192 ಕೋಟಿ ವಾರ್ಷಿಕ ಆದಾಯ
- ಯೋಜನೆ ವೆಚ್ಚ: ರೂ.196.51 ಕೋಟಿ
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ
- 2020ರ ಸೆಪ್ಟೆಂಬರ್ 10ರಂದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಬಿಹಾರದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. 2020-2021 ಮತ್ತು 2024-2025 ರ ನಡುವೆ ಈ ಯೋಜನೆಗಾಗಿ ಸರ್ಕಾರವು ಅಂದಾಜು 20,050 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಲ್ಲಿ ಸಮುದ್ರ, ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಫಲಾನುಭವಿ ಆಧಾರಿತ ಚಟುವಟಿಕೆಗಳಿಗೆ 12,340 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೆ, ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ 8,610 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಉದ್ದೇಶಗಳು:
- 2024 – 2025 ರ ವೇಳೆಗೆ ಮೀನು ಉತ್ಪಾದನೆಯನ್ನು ಹೆಚ್ಚುವರಿಯಾಗಿ 70 ಲಕ್ಷ ಟನ್ಗೆ ಹೆಚ್ಚಿಸುವುದು.
- ಮೀನು ರಫ್ತು ಆದಾಯವನ್ನು1 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವುದು
- ಮೀನುಗಾರಿಕೆಯ ಆದಾಯ ಹೆಚ್ಚಿಸುವ ಜತೆಗೆ ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವುದು
- ಮೀನು ನಷ್ಟದ ಪ್ರಮಾಣವನ್ನು ಶೇ.20 ರಿಂದ 25 ರ ಬದಲಾಗಿ ಶೇ.10ಕ್ಕೆ ಇಳಿಸುವುದು.
- ಮೀನುಗಾರಿಕೆ ವಲಯ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ರೈತರಿಗೆ ಮತ್ತು ಮೀನುಗಾರರಿಗೆ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಇ-ಪರಿಹಾರ ಯೋಜನೆಗೆ ಚಾಲನೆ:
-
ಜಾನುವಾರು ಮತ್ತು ಮೀನುಗಾರಿಕೆ ಸಚಿವರು 2021ರ ಆಗಸ್ಟ್ 6ರಂದು ಇ-ಪರಿಹಾರ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಮೂಲಕ ರೈತರು ಸಂವಹನ ಸಾಧನಗಳನ್ನು ಬಳಸುವ ಮೂಲಕ ಮೀನು ಸಾಕಣೆಯ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.