Published on: September 27, 2022
ನೆಹರೂ ಟ್ರೋಫಿ ದೋಣಿ ಸ್ಪರ್ಧೆ
ನೆಹರೂ ಟ್ರೋಫಿ ದೋಣಿ ಸ್ಪರ್ಧೆ
ಸುದ್ದಿಯಲ್ಲಿ ಏಕಿದೆ?
ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ನೆಹರೂ ಟ್ರೋಫಿ ದೋಣಿ ಸ್ಪರ್ಧೆಗೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇರಳ ಸರ್ಕಾರವು ಆಹ್ವಾನ ನೀಡಿತ್ತು.
ಮುಖ್ಯಾಂಶಗಳು
- ಆಲಪ್ಪುಳದ ಪುನ್ನಮಡ ಹಿನ್ನೀರಿನಲ್ಲಿ ವರ್ಣರಂಜಿತ ದೋಣಿ ಸ್ಪರ್ಧೆಯು ಸೆಪ್ಟೆಂಬರ್ ನಲ್ಲಿ ನಡೆಯಿತು.
- ಈ ಸ್ಪರ್ಧೆಯಲ್ಲಿ ಪಳ್ಳತುರುತಿ ಬೋಟ್ ಕ್ಲಬ್‌ನ ‘ಮಹಾದೇವಿಕಾಡು ಕಟ್ಟಿಲ್ ತೆಕೆತಿಲ್’ ಟ್ರೋಫಿ ಗೆದ್ದರೆ, ಎನ್‌ಸಿಡಿಸಿ ಬೋಟ್ ಕ್ಲಬ್‌ನ ‘ನಾಡುಭಾಗಂ’ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- ಕೇರಳದ ಐತಿಹಾಸಿಕ ಪ್ರಸಿದ್ಧ ದೋಣಿ ಸ್ಪರ್ಧೆಗೆ ‘ಚಾಂಪಿಯನ್ಸ್ ಬೋಟ್ ಲೀಗ್’(ಸಿಬಿಎಲ್) ಎಂದು 2019 ರಲ್ಲಿ ಮರುನಾಮಕರಣ ಮಾಡಲಾಗಿದೆ.
ನೆಹರು ಟ್ರೋಫಿಗೆ ನೆಹರು ಹೆಸರೇಕೆ
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ 1952ರಲ್ಲಿ ಕೇರಳಕ್ಕೆ ತನ್ನ ಮೊದಲ ಭೇಟಿಯ ವೇಳೆ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕುಟ್ಟನಾಡ್‌ಗೆ ಭೇಟಿ ನೀಡಿದ ನೆನಪಿಗಾಗಿ ಈ ದೋಣಿ ಸ್ಪರ್ಧೆಗೆ ನೆಹರೂ ಅವರ ಹೆಸರನ್ನು ಇರಿಸಲಾಗಿದೆ.