Published on: September 27, 2022

ತಾರಾಗಿರಿ

ತಾರಾಗಿರಿ

ಸುದ್ದಿಯಲ್ಲಿ ಏಕಿದೆ?

ರೇಡಾರ್‌ಗಳ ಕಣ್ತಪ್ಪಿಸಿ ಸಂಚರಿಸುವ ಸಾಮರ್ಥ್ಯದ, ಭಾರತೀಯ ನೌಕಾಪಡೆಯ ಪ್ರಾಜೆಕ್ಟ್–17 ಯೋಜನೆಯ ಮೂರನೇ ನೌಕೆ ‘ತಾರಾಗಿರಿ’ ಅರಬ್ಬಿ ಸಮುದ್ರಕ್ಕೆ ಇಳಿಯಿತು. ‘ನೀಲಗಿರಿ ಶ್ರೇಣಿ’ಯ ನೌಕೆಗಳಲ್ಲಿ ಈ ನೌಕೆ ಮೂರನೆಯದ್ದಾಗಿದ್ದು, ಇದು ರಕ್ಷಣಾ ಸ್ವಾವಲಂಬನೆಯಲ್ಲಿ ಭಾರತದ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ. 

ಮುಖ್ಯಾಂಶಗಳು

  • ಯೋಜನೆಯ ಮೊದಲ ನೌಕೆ ‘ನೀಲಗಿರಿ’ 2019ರ ಸೆ. 28ರಂದು ಉದ್ಘಾಟನೆಗೊಂಡಿತ್ತು. 2024ರ ಆರಂಭದಲ್ಲಿ ಸಮುದ್ರದಲ್ಲಿ ಇದರ ಪರೀಕ್ಷೆ ಆರಂಭಗೊಳ್ಳುವ ನಿರೀಕ್ಷೆಯಿದೆ.
  • ಎರಡನೇ ನೌಕೆ ‘ಉದಯಗಿರಿ’ 2022ರ ಮೇ 17ರಂದು ಉದ್ಘಾಟನೆಗೊಂಡಿತ್ತು. ಇದು 2024ರ ಕೊನೆಯ ಹೊತ್ತಿಗೆ ಪರೀಕ್ಷೆಗೆ ಒಳಪಡಲಿದೆ.
  • ತಾರಾಗಿರಿ ನೌಕೆಯನ್ನು 2025ರಲ್ಲಿ ನೌಕಾಪಡೆಗೆ ಹಸ್ತಾಂತರಿಸುವ ಸಾಧ್ಯತೆಯಿದೆ.  ನೌಕೆಯ ಭಾಗಗಳನ್ನು ಪ್ರತ್ಯೇಕವಾಗಿ ತಯಾರಿಸಿ, ನಂತರ ಅವುಗಳನ್ನು ಒಟ್ಟುಗೂಡಿಸಿ ನೌಕೆ ನಿರ್ಮಾಣ ಮಾಡುವ ತಂತ್ರಜ್ಞಾನವನ್ನು (ಹಲ್ ಬ್ಲಾಕ್) ಇಲ್ಲಿ ಅನುಸರಿಸಲಾಗಿದೆ.
  • ಎರಡು ಗ್ಯಾಸ್ ಟರ್ಬೈನ್‌ಗಳು, 2 ಮುಖ್ಯ ಡೀಸೆಲ್ ಎಂಜಿನ್‌ಗಳ ಸಹಾಯದಿಂದ ನೌಕೆ ಸಂಚರಿಸುತ್ತದೆ. ಇದರ ನಿರ್ಮಾಣಕ್ಕೆ ಬಳಸಿರುವ ಉಕ್ಕನ್ನು ಸರ್ಕಾರಿ ಸ್ವಾಮ್ಯದ ಸೈಲ್ ಸಂಸ್ಥೆ ಪೂರೈಸಿದೆ.
  • ನೌಕೆಯ ನಿರ್ಮಾಣ : ಮುಂಬೈನ ಮಡಗಾಂವ್ ಡಾಕ್ ಶಿಪ್‌ಬಿಲ್ಡರ್ಸ್‌ (ಎಂಡಿಎಲ್) ಸಂಸ್ಥೆಯು ಈ ಸರಣಿಯ ನೌಕೆಗಳನ್ನು ನಿರ್ಮಿಸುತ್ತಿದೆ.
  • ನೌಕೆಯ ವಿನ್ಯಾಸ: ಭಾರತೀಯ ನೌಕಾಪಡೆಯ ‘ಬ್ಯೂರೊ ಆಫ್ ನೇವಲ್ ಡಿಸೈನ್’ ಘಟಕವು ತಾರಾಗಿರಿ ನೌಕೆಯನ್ನು ವಿನ್ಯಾಸ ಮಾಡಿದೆ.

ನೌಕೆಯ ವಿಶೇಷತೆಗಳು

  • ತಾರಾಗಿರಿಯಲ್ಲಿ ಸ್ವದೇಶಿ ನಿರ್ಮಿತ ಯುದ್ಧ ಶಸ್ತ್ರಾಸ್ತ್ರಗಳು, ಸೆನ್ಸಾರ್‌ಗಳು, ಅತ್ಯಾಧುನಿಕ ಮಾಹಿತಿ ವ್ಯವಸ್ಥೆ, ಅಡ್ವಾನ್ಸಡ್‌ ಆಕ್ಕಸನ್‌ ಇನ್‌ಫಾರ್ಮೆಷನ್‌ ಸಿಸ್ಟಮ್‌, ಇಂಟಿಗ್ರೇಟೆಡ್‌ ಪ್ಲಾಟ್‌ಫಾರ್ಮ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌, ಮಾಡ್ಯುಲರ್‌ ಲಿವಿಂಗ್‌ ಸ್ಪೇಸ್‌ಗಳು ಸೇರಿದಂತೆ ಹಲವು ಫೀಚರ್‌ಗಳನ್ನು ಈ ಯುದ್ಧ ನೌಕೆ ಹೊಂದಿದೆ.
  • ಮೇಲ್ಮೈನಿಂದ ಮೇಲ್ಮೈಗೆ ಉಡ್ಡಯನ ಮಾಡಬಲ್ಲ ಸಾಮರ್ಥ್ಯದ ಸೂಪರ್‌ಸಾನಿಕ್ ಕ್ಷಿಪಣಿಯನ್ನು ಇದರಲ್ಲಿ ಅಳವಡಿಸಲಾಗುತ್ತದೆ.
  • ಶತ್ರು ಯುದ್ಧವಿಮಾನಗಳು ಹಾಗೂ ಕ್ರೂಸ್ ಕ್ಷಿಪಣಿಗಳ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವ ವಾಯುರಕ್ಷಣಾ ಸಾಮರ್ಥ್ಯವನ್ನೂ ಈ ನೌಕೆ ಹೊಂದಿದೆ.
  • 149 ಮೀಟರ್‌ ಉದ್ದ ಮತ್ತು 17.8 ಮೀಟರ್‌ ಅಗಲದ ಈ ಯುದ್ಧ ನೌಕೆಯು ಎರಡು ಗ್ಯಾಸ್‌ ಟರ್ಬೈನ್‌ ಮತ್ತು ಎರಡು ಮುಖ್ಯ ಡೀಸೆಲ್‌ ಎಂಜಿನ್‌ ಹೊಂದಿದೆ.
  • ಇದರ ನಿರ್ಮಾಣಕ್ಕೆ ಸ್ವದೇಶಿ ನಿರ್ಮಿತ ಡಿಎಂಆರ್‌ 249ಎ ಉಕ್ಕು ಬಳಸಲಾಗಿದೆ. ಈ ಉಕ್ಕನ್ನು ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ ನಿರ್ಮಿಸಿದೆ.
  • ಇದರಲ್ಲಿ 30 ಎಂಎಂ ರಾಪಿಡ್‌ ಫೈರ್‌ ಗನ್‌ ವ್ಯವಸ್ಥೆಯೂ ಇದ್ದು, ಹತ್ತಿರಕ್ಕೆ ಬರುವ ವೈರಿಗಳನ್ನು ಸುಟ್ಟು ಹಾಕಲಿದೆ. ಇದರಲ್ಲಿ ರಾಕೆಟ್‌ ಲಾಂಚರ್‌ಗಳು, ಸಬ್‌ ಮೆರಿನ್‌ಗಳಿಂದ ತೊಂದರೆಯಾಗದಂತಹ ವ್ಯವಸ್ಥೆಗಳೂ ಈ ನೌಕೆಯಲ್ಲಿದೆ.
  • ಮುಂಬೈನ ಮಡಗಾಂವ್ ಡಾಕ್ ಶಿಪ್‌ಬಿಲ್ಡರ್ಸ್‌ (ಎಂಡಿಎಲ್), ಅನ್ನು “ಶಿಪ್ ಬಿಲ್ಡರ್ ಟು ದಿ ನೇಷನ್” ಎಂದು ಕರೆಯಲ್ಪಡುತ್ತದೆ, ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಭಾರತದ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಶಿಪ್‌ಯಾರ್ಡ್‌ಗಳಲ್ಲಿ ಒಂದಾಗಿದೆ. ಮುಂಬೈ ಮತ್ತು ನ್ಹಾವಾದಲ್ಲಿ ನೆಲೆಗೊಂಡಿರುವ ಸೌಲಭ್ಯಗಳೊಂದಿಗೆ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಮುಖ್ಯ ಚಟುವಟಿಕೆಗಳಾಗಿವೆ. 1979 ರಿಂದ ಕಾರ್ಯನಿರ್ವಹಿಸುತ್ತಿದೆ.