Published on: October 10, 2022
ಟ್ರ್ಯಾವನ್ಕೋರ್ ಅಳಿಲು ಪತ್ತೆ
ಟ್ರ್ಯಾವನ್ಕೋರ್ ಅಳಿಲು ಪತ್ತೆ
ಸುದ್ದಿಯಲ್ಲಿ ಏಕಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಅಪರೂಪದ ಟ್ರ್ಯಾವನ್ಕೋರ್ ಹಾರುವ ಅಳಿಲು ಪತ್ತೆಯಾಗಿದೆ.
ಈ ಅಳಿಲಿನ ಸಂಕ್ಷಿಪ್ತ ಮಾಹಿತಿ
- ಇವು ನಿಶಾಚರಿ ಪ್ರಾಣಿ ಆಗಿರುವುದರಿಂದ ಕಾಣಸಿಗುವುದು ಅಪರೂಪ.
- ಸ್ಥಳೀಯವಾಗಿ ಇದನ್ನು ‘ದರಗು ಪಾಂಜ, ಚಿಕ್ಕ ಪಾಂಜ್’ ಎಂದು ಕರೆಯುತ್ತಾರೆ.
- ಪಶ್ಚಿಮಘಟ್ಟದಲ್ಲಿರುವ ಟ್ರ್ಯಾವನ್ ಕೋರ್ ಹಾರುವ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ.
- ಇದು ಕೇವಲ 32 ಸೆಂ.ಮೀ ಉದ್ದ ಇರುತ್ತದೆ.
- ರಾಜ್ಯದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರ್ಯಾವನ್ಕೋರ್ ಹಾರುವ ಅಳಿಲು ಎಂಬ ಎರಡು ಜಾತಿಗಳಿವೆ.
- ಒಂದು ಕಾಲದಲ್ಲಿ ನಾಶವಾಗಿವೆ ಎಂದು ನಂಬಲಾಗಿದ್ದ ಈ ಟ್ರ್ಯಾವನ್ಕೋರ್, ನೂರು ವರ್ಷಗಳ ನಂತರ ಕೇರಳದ ಪಶ್ಚಿಮಘಟ್ಟದಲ್ಲಿ ಕಾಣಿಸಿತ್ತು