Published on: October 10, 2022
ಇಸ್ರೊದ ‘ಮಂಗಳಯಾನ’ ಕಕ್ಷೆಗಾಮಿ
ಇಸ್ರೊದ ‘ಮಂಗಳಯಾನ’ ಕಕ್ಷೆಗಾಮಿ
ಸುದ್ದಿಯಲ್ಲಿ ಏಕಿದೆ?
ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತಿದ್ದ ಇಸ್ರೊದ ‘ಮಂಗಳಯಾನ’ ಕಕ್ಷೆಗಾಮಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಮುಖ್ಯಾಂಶಗಳು
- ಬ್ಯಾಟರಿಗಳು ಬರಿದಾಗಿರುವುದರಿಂದ ಕಕ್ಷೆಗಾಮಿಯು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ.ಸದ್ಯ ಇಂಧನ ಖಾಲಿಯಾಗಿದೆ. ಉಪಗ್ರಹದ ಬ್ಯಾಟರಿಯೂ ಬರಿದಾಗಿದೆ. ಜತೆಗೆ ಸಂಪರ್ಕವೂ ಕಡಿತಗೊಂಡಿದೆ.
- ಮಂಗಳಯಾನದ ಕಕ್ಷೆಗಾಮಿಯು ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ಆರಂಭಿಸಿ ಎಂಟು ವರ್ಷಗಳಾಗಿತ್ತು. ಕೇವಲ ಆರು ತಿಂಗಳ ಅವಧಿಗೆ ಕಾರ್ಯ ನಿರ್ವಹಿಸಲು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅವಧಿ ಮೀರಿ ಈ ಕಕ್ಷೆಗಾಮಿ ಕಾರ್ಯನಿರ್ವಹಿಸಿದೆ. ಇದು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ಪೂರೈಸಿದ್ದು, ಮಹತ್ವದ ವೈಜ್ಞಾನಿಕ ಫಲಿತಾಂಶಗಳನ್ನು ಒದಗಿಸಿದೆ
ಮಂಗಳ ಕಕ್ಷೆಗಾಮಿ ಯೋಜನೆ (ಮಾಮ್):
- 2013 ರ ನವೆಂಬರ್ 5 ರಂದು ರೂ. 450 ಕೋಟಿ ವೆಚ್ಚದ ಮಂಗಳಯಾನ ಯೋಜನೆ ಕಾರ್ಯ ರೂಪಕ್ಕೆ ಬಂದಿತ್ತು.
- ‘ಪಿಎಸ್‌ಎಲ್‌ವಿ–ಸಿ25’ ರಾಕೆಟ್ ಮೂಲಕ 2014ರ ಸೆ.24 ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯಲ್ಲಿ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಲಾಗಿತ್ತು. ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಸೇರಿಸುವ ಮೂಲಕ ಇಸ್ರೊ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿತ್ತು.
- ನೌಕೆಯನ್ನು ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿಸಿರುವ ಸಂದೇಶ ಮೊದಲು ಆಸ್ಟ್ರೇಲಿಯಾದ ಕ್ಯಾನ್ಬೆರಾ ಡೀಪ್ ಸ್ಪೇಸ್ ನೆಟ್‌ವರ್ಕ್ ಕೇಂದ್ರಕ್ಕೆ ರವಾನೆಯಾದ ಮೇಲೆ ಬೆಂಗಳೂರಿನ ಬ್ಯಾಲಾಳು ಕೇಂದ್ರದಲ್ಲೂ ದಾಖಲಾಗಿದೆ
- ತೂಕ: 1350 ಕೆ.ಜಿ.
- ಉಡಾವಣಾ ವಾಹಕ : ‘ಪಿಎಸ್‌ಎಲ್‌ವಿ–ಸಿ25’ ರಾಕೆಟ್
- ಉಡಾವಣಾ ಬಾಹ್ಯಾಕಾಶ ಕೇಂದ್ರ: ಸತೀಶಧವನ್ ಬಾಹ್ಯಾಕಾಶ ಕೇಂದ್ರ ,ಶ್ರೀಹರಿಕೋಟಾ, ಆಂಧ್ರ ಪ್ರದೇಶ
- ತಯಾರಕ ಕೇಂದ್ರ :U R ರಾವ್ ಉಪಗ್ರಹ ಕೇಂದ್ರ (URSC),
U R ರಾವ್ ಉಪಗ್ರಹ ಕೇಂದ್ರ (URSC)
- ಹಿಂದೆ ಇದನ್ನು ISRO ಉಪಗ್ರಹ ಕೇಂದ್ರ ಕರೆಯಲಾಗುತ್ತಿತ್ತು. ಭಾರತೀಯ ಉಪಗ್ರಹಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಿದೆ. ಇದನ್ನು 1972 ರಲ್ಲಿ ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‌ಗಳಲ್ಲಿ ಭಾರತೀಯ ವೈಜ್ಞಾನಿಕ ಉಪಗ್ರಹ ಯೋಜನೆ (ISSP) ಎಂದು ಸ್ಥಾಪಿಸಲಾಯಿತು.
- ISAC ಅನ್ನು 2 ಏಪ್ರಿಲ್ 2018 ರಿಂದ ಜಾರಿಗೆ ಬರುವಂತೆ ಮಾಜಿ ISRO ಅಧ್ಯಕ್ಷ ಮತ್ತು ISAC ಸಂಸ್ಥಾಪಕ ನಿರ್ದೇಶಕ ಡಾ. ಉಡುಪಿ ರಾಮಚಂದ್ರ ರಾವ್ ಅವರ ನಂತರ U. R. ರಾವ್ ಉಪಗ್ರಹ ಕೇಂದ್ರ (URSC) ಎಂದು ಮರುನಾಮಕರಣ ಮಾಡಲಾಗಿದೆ.