Published on: October 13, 2022

ಯುವ 2.0 ಯೋಜನೆ

ಯುವ 2.0 ಯೋಜನೆ

ಸುದ್ದಿಯಲ್ಲಿ ಏಕಿದೆ?

ಯುವ 2.0 ಇದು ಯುವ ಯೋಜನೆಯ ಎರಡನೇ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು, ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಆಜಾದಿ ಕಾ ಅಮೃತ್ ಮಹೋತ್ಸವ ಅಥವಾ ಭಾರತ @75 ಯೋಜನೆಯ ಭಾಗವಾಗಿ ಪ್ರಾರಂಭಿಸಿದೆ.

ಮುಖ್ಯಾಂಶಗಳು

  • ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಜ್ಞಾನದ ಪ್ರಚಾರದ ಮೇಲೆ ಕೇಂದ್ರೀಕರಿಸಿದ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಬರೆಯುವ ಸಾಮರ್ಥ್ಯವಿರುವ ಉದಯೋನ್ಮುಖ ಲೇಖಕರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
  • ವಿದೇಶದಲ್ಲಿ ಭಾರತ ಮತ್ತು ಭಾರತೀಯ ಸಾಹಿತ್ಯವನ್ನು ಪ್ರಚಾರ ಮಾಡುವ ಸಲುವಾಗಿ, ಇದು ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ (30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಲೇಖಕರ ಮಾರ್ಗದರ್ಶನ ಕಾರ್ಯಕ್ರಮವಾಗಿದೆ.

ಉದ್ದೇಶ

  • ಭಾರತದಾದ್ಯಂತ ಓದುವ ಮತ್ತು ಬರೆಯುವ ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಅಂತರರಾಷ್ಟ್ರೀಯ

ಮಟ್ಟದಲ್ಲಿ ಭಾರತೀಯ ಬರವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.

  • ಇದು ಪ್ರಜಾಪ್ರಭುತ್ವ (ಸಂಸ್ಥೆಗಳು, ಘಟನೆಗಳು, ಜನರು, ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಸಾಂವಿಧಾನಿಕ ಮೌಲ್ಯಗಳು) ವಿಷಯದ ಮೇಲೆ ಭಾರತೀಯ ಯುವಕರ ದೃಷ್ಟಿಕೋನವನ್ನು ತರುವ ಗುರಿಯನ್ನು ಹೊಂದಿದೆ.

PM-YUVA ಯೋಜನೆಯ ಬಗ್ಗೆ

  • ಪ್ರಧಾನ ಮಂತ್ರಿ – ಯುವ ಬರಹಗಾರರಿಗಾಗಿ (PM-YUVA) ಮೆಂಟರ್‌ಶಿಪ್‌ಗಳ ಯೋಜನೆಯನ್ನು ಮೇ

29, 2021 ರಂದು ಪ್ರಾರಂಭಿಸಲಾಯಿತು. ಇದನ್ನು ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ (NBT)

ಕಾರ್ಯಗತಗೊಳಿಸುತ್ತಿದೆ. ಈ ಉಪಕ್ರಮದ ಅಡಿಯಲ್ಲಿ, ಸಲ್ಲಿಸಿದ ಹಸ್ತಪ್ರತಿಗಳ ಆಧಾರದ ಮೇಲೆ 75 ಯುವ

ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ.

  • ಎನ್‌ಬಿಟಿ ಸ್ಥಾಪಿಸಿದ ಸಮಿತಿ ವತಿಯಿಂದ ಇವರನ್ನು ಆಯ್ಕೆಗಳನ್ನು ಮಾಡಲಾಗುತ್ತದೆ.
  • ಆಯ್ಕೆ ಮಾಡಿದ ಲೇಖಕರು ಮಾರ್ಗದರ್ಶಿಗಳನ್ನು ಪಡೆಯುತ್ತಾರೆ ಮತ್ತು ಅವರು ಆಯ್ಕೆ ಮಾಡಿದ ಪ್ರಸ್ತಾವನೆಗಳನ್ನು ಸಂಪೂರ್ಣ ಪುಸ್ತಕಗಳಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಾರೆ. ಲೇಖಕರಿಗೆ 6 ತಿಂಗಳ ಅವಧಿಗೆ ಪ್ರತಿ ತಿಂಗಳು ರೂ.50,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.