Published on: October 18, 2022

75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು

75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು

ಸುದ್ದಿಯಲ್ಲಿ ಏಕಿದೆ?

ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮಾಧ್ಯಮದ ಮೂಲಕ ನೆರವೇರಿಸಿದರು.

ಮುಖ್ಯಾಂಶಗಳು

  • ಇವು ಹೊಸ ಬ್ಯಾಂಕಗಳಲ್ಲ ಹಾಲಿ ಇರುವ ಬ್ಯಾಂಕಗಳ ಆಯ್ದ ಶಾಖೆಗಳಲ್ಲಿ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿಯೇ ನಡೆಸಲಾಗುತ್ತದೆ.
  • ದಿನದ 24 ಘಂಟೆ ಹಣ ಜಮಾ ಮಾಡುವ ಮತ್ತು ಹಣವನ್ನು ತೆಗೆಯುವ ಸೌಲಭ್ಯ ಇರುತ್ತದೆ.
  • ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಕಾರಣ 75 ಡಿಜಿಟಲ್ ಬ್ಯಾಂಕಗಳನ್ನು ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ನಾಲ್ಕು ಕಡೆ

  • ಕರ್ನಾಟಕದಲ್ಲಿ ನಾಲ್ಕು ಕಡೆ ಈ ಡಿಜಿಟಲ್ ಸೌಲಭವನ್ನು ನೀಡಲಾಗಿದೆ. ಮಂಗಳೂರು, ಮೈಸೂರು, ರಾಯಚೂರು ಮತ್ತು ಬೆಂಗಳೂರು ಬಳಿ ಇರುವ ದೇವನಹಳ್ಳಿ

ಉದ್ದೇಶ

  • ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಹಾಗೂ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರಯೋಜನಗಳು

  • ಉಳಿತಾಯ ಖಾತೆ ತೆರೆಯುವಿಕೆ
  • ಖಾತೆಯ ಬ್ಯಾಲೆನ್ಸ್ ಪರಿಶೀಲನೆ
  • ಪಾಸ್ ಬುಕ್ ಮುದ್ರಣ
  • ನಗದು ವರ್ಗಾವಣೆ
  • ಸಾಲದ ಅರ್ಜಿ
  • ನಿಗದಿತ ಠೇವಣಿ ಹೂಡಿಕೆ
  • ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಗಳಿಗೆ ಅರ್ಜಿ
  • ಬಿಲ್ ಗಳು, ತೆರಿಗೆ ಪಾವತಿಸುವಿಕೆ

ಏನೆಲ್ಲಾ ಸೇವೆ

  • ಸಣ್ಣ ಪ್ರಮಾಣದ ಸಾಲ
  • ಗ್ರಾಹಕರಿಗೆ ನೆರವಾಗಲು ಮಾಹಿತಿ ನೀಡಲು ಸಿಬ್ಬಂದಿ ವ್ಯವಸ್ಥೆ
  • ಸೈಬರಾ ಭದ್ರತೆಯ ಬಗ್ಗೆ ಅರಿವು ಮೂಡಿಸಲು ಶಿಬಿರ ಯೋಜನೆ
  • ಇತರ ಬ್ಯಾಂಕಗಳ ಗ್ರಾಹಕರಿಗೆ ಆನ್ ಲೈನ್ ಬ್ಯಾಂಕ್ ಸೇವೆಗೆ ಶಾಖೆಯಲ್ಲಿ ಟ್ಯಾಬ್ ವ್ಯವಸ್ಥೆ