Published on: October 21, 2022

ನೂತನ ವಾಯುನೆಲೆ

ನೂತನ ವಾಯುನೆಲೆ

ಸುದ್ದಿಯಲ್ಲಿ ಏಕಿದೆ?

ಉತ್ತರ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯ ಡೀಸಾದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಸ್ಥಾಪನೆಯಾಗಲಿರುವ ನೂತನ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ನೆಲೆಗೊಳ್ಳಲಿರುವ ನೂತನ ವಾಯುನೆಲೆ ದೇಶದ ಭದ್ರತೆಗೆ ಅತ್ಯಂತ ಪ್ರಭಾವಶಾಲಿ ಕೇಂದ್ರವಾಗಿ ಹೊರಹೊಮ್ಮಲಿದೆ.

ಮುಖ್ಯಾಂಶಗಳು

  • ಹೊಸ ವಾಯುನೆಲೆಯು ದೇಶದ ಸುರಕ್ಷತೆಯ ವಿಚಾರದಲ್ಲಿ ಪರಿಣಾಮಕಾರಿ ಕೇಂದ್ರವಾಗಿ ರೂಪುಗೊಳ್ಳಲಿದೆ. ಗುಜರಾತ್‌ ಕೂಡ ಭಾರತದ ರಕ್ಷಣಾ ವಿಚಾರದಲ್ಲಿ ಕೇಂದ್ರ ಬಿಂದುವಾಗಿ ಬದಲಾಗಲಿದೆ. ಅಲ್ಲದೆ, ದೇಶದ ಭದ್ರತೆಯ ವಿಚಾರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲಿದೆ.
  • ಈ ಏರ್‌ಫೀಲ್ಡ್ ಪ್ರಮುಖ ಪಾತ್ರ ವಹಿಸುತ್ತದೆ. ದೀಸಾ ಅಂತರಾಷ್ಟ್ರೀಯ ಗಡಿಯಿಂದ ಕೇವಲ 130 ಕಿಮೀ ದೂರದಲ್ಲಿದೆ.

ಉದ್ದೇಶ

  • ವಿಶೇಷವಾಗಿ ನಮ್ಮ ವಾಯುಪಡೆಗಳು ದೀಸಾದಲ್ಲಿ ಇದ್ದರೆ, ಪಾಶ್ಚಿಮಾತ್ಯ ಕಡೆಯಿಂದ ಬರುವ ಯಾವುದೇ ಬೆದರಿಕೆಗೆ ನಾವು ಉತ್ತಮ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಾಗುತ್ತದೆ.