Published on: October 22, 2022
ಅಗ್ನಿ ಪ್ರೈಮ್’ ಕ್ಷಿಪಣಿ ಪರೀಕ್ಷೆ ಯಶಸ್ವಿ
ಅಗ್ನಿ ಪ್ರೈಮ್’ ಕ್ಷಿಪಣಿ ಪರೀಕ್ಷೆ ಯಶಸ್ವಿ
ಸುದ್ಧಿಯಲ್ಲಿ ಏಕಿದೆ?
ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಹೊಸ ತಲೆಮಾರಿನ ‘ಅಗ್ನಿ ಪ್ರೈಮ್’ ಮಧ್ಯಮ ಶ್ರೇಣಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್ಡಿಒ) ಮೂಲಗಳು ಹೇಳಿವೆ.
ಮುಖ್ಯಾಂಶಗಳು
- ಎಪಿಜೆ ಅಬ್ದುಲ್ ಕಲಾಂ ದ್ವೀಪದ ಉಡಾವಣಾ ಕೇಂದ್ರದಿಂದ ಕ್ಷಿಪಣೆಯನ್ನು ಉಡಾವಣೆ ಮಾಡಿ ಪರೀಕ್ಷಿಸಲಾಯಿತು.
- ಕ್ಷಿಪಣಿಯು ಸಾವಿರ ಕಿ.ಮೀ. ಮತ್ತು 2ಸಾವಿರ ಕಿ.ಮೀ. ನಡುವಿನ ಗುರಿಯನ್ನು ಭೇದಿಸಲಿದೆ.
- ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ, ಕ್ಷಿಪಣಿಯು ಗರಿಷ್ಠ ವ್ಯಾಪ್ತಿಯನ್ನು ಪ್ರಯಾಣಿಸಿದ್ದು, ಮತ್ತು ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಗ್ನಿ ಪ್ರೈಮ್ ಕ್ಷಿಪಣಿಯ ಈ ಸತತ ಮೂರನೇ ಬಾರಿಗೆ ಯಶಸ್ವಿ ಹಾರಾಟ ಪರೀಕ್ಷೆಯೊಂದಿಗೆ, ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಸ್ಥಾಪಿಸಿದೆ
- ರಾಡಾರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಗಳಂತಹ ಹಲವಾರು ಶ್ರೇಣಿಯ ಉಪಕರಣಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಅಗ್ನಿ ಪ್ರೈಮ್ ಕ್ಷಿಪಣಿಯ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದ್ದು ಸಂಪೂರ್ಣ ಪಥವನ್ನು ಕವರ್ ಮಾಡಲು ಟರ್ಮಿನಲ್ ಪಾಯಿಂಟ್ನಲ್ಲಿ ಎರಡು ಡೌನ್ ರೇಂಜ್ ಹಡಗುಗಳನ್ನು ಒಳಗೊಂಡಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು