Published on: October 25, 2022
ಸಂವಹನ ಉಪಗ್ರಹಗಳು
ಸಂವಹನ ಉಪಗ್ರಹಗಳು
ಸುದ್ದಿಯಲ್ಲಿ ಏಕಿದೆ?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ LVM3 M2 ಉಡಾವಣೆಯಶಸ್ವಿಯಾಗಿದೆ. ಇದು ವಾಣಿಜ್ಯ ಉದ್ದೇಶದ ಮೊದಲ ಉಡಾವಣೆಯಾಗಿದ್ದು, ಬ್ರಿಟನ್‌ನ ಮೂಲದ ಒನ್‌ವೆಬ್ ಲಿಮಿಟೆಡ್‌ನ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಒಟ್ಟಿಗೆ ನಭಕ್ಕೆ ಕಳುಹಿಸಲಾಗಿದೆ.
ಮುಖ್ಯಾಂಶಗಳು
- 5 ಮೀಟರ್ ಎತ್ತರದ, 644 ಟನ್ ತೂಕದ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿತು.
- ಪ್ರಮುಖ ಹೂಡಿಕೆದಾರ: ಇದರಲ್ಲಿ ಸಾಗಿಸಲಾದ ಉಪಗ್ರಹಗಳು ಲಂಡನ್ ಮೂಲದ ಸಂವಹನ ಸಂಸ್ಥೆ ಒನ್‌ವೆಬ್ ಗೆ ಸೇರಿವೆ. ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರರಾಗಿದ್ದಾರೆ.
- ಒನ್ ವೆಬ್ ಒಂದು ಖಾಸಗಿ ಉಪಗ್ರಹ ಸಂವಹನ ಕಂಪನಿಯಾಗಿದ್ದು, ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಪ್ರಮುಖ ಹೂಡಿಕೆದಾರ ಮತ್ತು ಷೇರುದಾರ. LVM3-M2 ರಾಕೆಟ್ 8,000 ಕೆ.ಜಿ.ವರೆಗಿನ ಉಪಗ್ರಹ ಸಾಗಿಸುವ ಸಾಮರ್ಥ್ಯ ಹೊಂದಿದೆ.
- ಒನ್ ವೆಬ್‌ನ ಇನ್ನೂ 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮತ್ತೊಂದು ಕಾರ್ಯಾಚರಣೆ 2023ರ ಜನವರಿಯಲ್ಲಿ ನಿಗದಿಯಾಗಿದೆ.
ಉದ್ದೇಶ
- ಇಸ್ರೋ ಅತ್ಯಂತ ಭಾರವಾದ ರಾಕೆಟ್ LVM3 ಅನ್ನು ವಾಣಿಜ್ಯದ ಉದ್ದೇಶಕ್ಕೆ ಉಡಾವಣೆ ಮಾಡಲಾಗಿದೆ. ಬ್ರಿಟನ್ ಮೂಲದ ಒನ್‌ವೆಬ್ ಲಿಮಿಟೆಡ್ ಎಂಬ ಕಂಪನಿಗೆ ಸೇರಿದ ಈ ಸಂವಹನ ಉಪಗ್ರಹಗಳನ್ನು ಬ್ರಾಡ್‌ಬ್ಯಾಂಡ್ ಸೇವೆಗಾಗಿ ಬಳಸಲಾಗುತ್ತದೆ.
ಒಬ್‌ವೆಬ್ ಲಿಮಿಟೆಡ್
- ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್ಐಎಲ್) ಗ್ರಾಹಕ ಸಂಸ್ಥೆಯಾಗಿದೆ. ಭಾರ್ತಿ ಎಂಟರ್‌ಪ್ರೈಸಸ್ ಈ ಒಬ್‌ವೆಬ್ ಕಂಪನಿಯಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಹೊಂದಿದೆ.