Published on: October 25, 2022
ಸುದ್ಧಿ ಸಮಾಚಾರ – 25 ಅಕ್ಟೋಬರ್ 2022
ಸುದ್ಧಿ ಸಮಾಚಾರ – 25 ಅಕ್ಟೋಬರ್ 2022
- ಕರ್ನಾಟಕದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆ ಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಲು ಏಳು ತಜ್ಞರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಕೃಷಿ ಸಚಿವಾಲಯ ರಚಿಸಿದೆ.
- 1824ರ ಅಕ್ಟೋಬರ್ 23ರಂದು ಕಿತ್ತೂರು ಕಲಿಗಳು ಬ್ರಿಟಿಷ್ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದರಿಂದ ವೈಭವ ಇಮ್ಮಡಿಗೊಂಡಿತು. ಇದು 198ನೇ ಕಿತ್ತೂರು ಉತ್ಸವವಾಗಿದೆ.
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ LVM3-M2 ಉಡಾವಣೆ ಯಶಸ್ವಿಯಾಗಿದೆ. ಇದು ವಾಣಿಜ್ಯ ಉದ್ದೇಶದ ಮೊದಲ ಉಡಾವಣೆಯಾಗಿದ್ದು, ಬ್ರಿಟನ್ನ ಮೂಲದ ಒನ್ವೆಬ್ ಲಿಮಿಟೆಡ್ನ 36 ಬ್ರಾಡ್ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಒಟ್ಟಿಗೆ ನಭಕ್ಕೆ ಕಳುಹಿಸಲಾಗಿದೆ.
- ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.
- ಈ ವರ್ಷ(2022) ಪ್ರಕಟಗೊಂಡ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮ ಭೂಷಣ, ಪದ್ಮ ಪ್ರಶಸ್ತಿ ಪುರಸ್ಕೃತ 17 ಮಂದಿಯಲ್ಲಿ ಮೈಕ್ರೋಸಾಫ್ಟ್ನ 55 ವರ್ಷ ವಯಸ್ಸಿನ ಸಿಇಒ ಸತ್ಯ ನಡೆಲ್ಲಾ ಒಬ್ಬರಾಗಿದ್ದಾರೆ.