Published on: October 28, 2022

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು

ಸುದ್ದಿಯಲ್ಲಿ ಏಕಿದೆ?

ಮೂರರಿಂದ ಎಂಟು ವರ್ಷದ ಮಕ್ಕಳ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ (ಎನ್ಸಿಎಫ್) ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಚಾಲನೆ ನೀಡಿದರು.

ಮುಖ್ಯಾಂಶಗಳು

  • ಹೊಸ ಶಿಕ್ಷಣ ನೀತಿ -2020 ಅನುಷ್ಠಾನಕ್ಕೆ ಎನ್ಸಿಎಫ್ ಪ್ರಮುಖ ಹೆಜ್ಜೆಯಾಗಿದೆ. ಹೊಸ ಪಠ್ಯಕ್ರಮವು ಮಕ್ಕಳ ಸಮಗ್ರ ಅಭಿವೃದ್ಧಿ ಮತ್ತು ಕೌಶಲಕ್ಕೆ ಒತ್ತು ನೀಡುತ್ತದೆ.
  • ಹೊಸ ಶಿಕ್ಷಣ ನೀತಿ 2020 (ಎನ್‌ಸಿಪಿ) ನಾಲ್ಕು ವಿಭಾಗಗಳನ್ನು ಹೊಂದಿದೆ. ಅವುಗಳೆಂದರೆ
  1. a) ಶಾಲಾ ಶಿಕ್ಷಣಕ್ಕಾ ಗಿ ರಾಷ್ಟ್ರೀಯ ಪಠ್ಯಕ್ರಮದ ಚೌ ಕಟ್ಟು,
  2. b) ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾ ಗಿ ರಾ ಷ್ಟ್ರೀಯ ಪಠ್ಯಕ್ರಮದ ಚೌಕಟ್ಟು,
  3. c) ಶಿಕ್ಷಕರ ಶಿಕ್ಷಣಕ್ಕಾ ಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು
  4. d) ವಯಸ್ಕರ ಶಿಕ್ಷಣಕ್ಕಾ ಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು.

ಪಂಚಕೋಶ ಪರಿಕಲ್ಪನೆ:

  • ಮಗುವಿನ ಜೀವನದ ಮೊದಲ ಎಂಟು ವರ್ಷಗಳಲ್ಲಿನ ಮಿದುಳಿನ ಬೆಳವಣಿಗೆಯು ಅತ್ಯಂತ ವೇಗವಾಗಿರುತ್ತದೆ. ಹಾಗಾಗಿ ಎನ್‌ಸಿಎಫ್‌ನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪಂಚಕೋಶ ಪರಿಕಲ್ಪನೆಯನ್ನು ಪಟ್ಟಿ ಮಾಡಲಾಗಿದೆ. ಇವುಗಳ ಆಧಾರದಡಿ ಮಕ್ಕಳನ್ನು ತಯಾರು ಮಾಡಲಾಗುತ್ತದೆ ಅವುಗಳೆಂದರೆ

i)ದೈಹಿಕ ಬೆಳವಣಿಗೆ ( ಶಾರೀರಿಕ ವಿಕಾಸ)

  1. ii) ಜೀವಶಕ್ತಿಯ ಅಭಿವೃದ್ಧಿ (ಪ್ರಾಣಿಕ ವಿಕಾಸ)

iii) ಭಾವನಾತ್ಮಕ

  1. iv) ಮಾನಸಿಕ ಅಭಿವೃದ್ಧಿ (ಮಾನಸಿಕ ವಿಕಾಸ)
  2. v) ಆಧ್ಯಾತ್ಮಿಕ ಬೆಳವಣಿಗೆ (ಚೈತ್ರಿಕ ವಿಕಾಸ)

ಉದ್ದೇಶ

  • ದಿನಕ್ಕೆ 4 ಗಂಟೆಯಂತೆ 3 ತಿಂಗಳ ಕಾಲ ಮಕ್ಕ ಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಮಕ್ಕ ಳು ಶಾಲಾ ಪರಿಸರಕ್ಕೆ ಹೊಂದಿಕೊಳ್ಳಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಆರಂಭಿಸಿದೆ

ವಿದ್ಯಾ ಪ್ರವೇಶ್:

  • ಒಂದನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗಾಗಿ ಎನ್ಸಿಇಆರ್ಟಿ ‘ವಿದ್ಯಾ ಪ್ರವೇಶ್’ ಕಾರ್ಯಕ್ರಮ ಆರಂಭಿಸಿದೆ.

ಕರಡು ಸಿದ್ಧತೆ ಆಗಿದ್ದು ಹೇಗೆ?

  • ಎನ್ಸಿಆರ್ಎಫ್ ಕರಡನ್ನು ಯುಜಿಸಿ, ಎಐಸಿಟಿಇ, ಎನ್ ಸಿವಿಇಟಿ, ಎನ್ಐಒಎಸ್, ಸಿಬಿಎಸ್ಇ, ಎನ್ ಸಿಇಆರ್ಟಇ, ಶಿಕ್ಷಣ ಸಚಿವಾಲಯ, ಡಿಜಿಟಿ ಮತ್ತು ಕೌಶಲ ಅಭಿವೃದ್ಧಿ ಸಚಿವಾಲಯದ ಸದಸ್ಯರನ್ನು ಒಳಗೊಂಡ ಉನ್ನತಮಟ್ಟದ ಸಮಿತಿ ರಚಿಸಿದೆ.
  • ನ್ಯಾಷನಲ್ ಕ್ರೆಡಿಟ್ ಫ್ರೇಮ್ ವರ್ಕ್‌: ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶಿಕ್ಷಣದ ಮೂಲಕ ಗಳಿಸಿದ ಕ್ರೆಡಿಟ್‌ಗಳನ್ನು ಸಂಯೋಜಿಸುವ ಮೊದಲ ನ್ಯಾಷನಲ್ ಕ್ರೆಡಿಟ್ ಫ್ರೇಮ್‌ವರ್ಕ್‌ (ಎನ್‌ಸಿಆರ್‌ಎಫ್) ಕರಡನ್ನು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಕೋರಿದೆ.
  • ತಾಂತ್ರಿಕ ಮತ್ತು ಉನ್ನತ ಶಿಕ್ಷಣದಲ್ಲಿ ಕ್ರೆಡಿಟ್ ಆಧರಿತ ಚೌಕಟ್ಟು ಈಗಾಗಲೇ ಜಾರಿಯಲ್ಲಿದ್ದರೂ ಶಾಲೆ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಸೇರಿಸಿರುವುದು ಇದೇ ಮೊದಲು. ಎನ್‌ಸಿಆರ್‌ಆಫ್‌ ಎಲ್ಲ ಆಯಾಮಗಳಲ್ಲಿ ಕಲಿಕೆಯನ್ನು ಏಕೀಕರಿಸುವ ಗುರಿ ಹೊಂದಿದೆ. ಅಂದ್ರೆ ಶೈಕ್ಷಣಿಕ, ವೃತ್ತಿಪರ ಕೌಶಲ್ಯಗಳು ಮತ್ತು ಅನುಭವದ ಕಲಿಕೆಯನ್ನು ಒಳಗೊಂಡಿರುತ್ತದೆ.
  • ಮುಂದಿನ 2-3 ವರ್ಷಗಳಲ್ಲಿ 100% ಸಾಕ್ಷರತೆ ಸಾಧಿಸಲು ಜ್ಞಾನ ಸಂಪಾದನೆ, ಪ್ರಾಯೋಗಿಕ ತರಬೇತಿ ಮತ್ತು ಸಕಾರಾತ್ಮಕ ಸಾಮಾಜಿಕ ಫಲಿತಾಂಶಗಳಿಗೆ ಕ್ರೆಡಿಟ್‌ಗಳು ಪ್ರಮುಖ ಹೆಜ್ಜೆಯಾಗಿರುತ್ತವೆ

ಕ್ರೆಡಿಟ್ ಗಳಿಕೆ ಹೇಗೆ?

  • ಕರಡು ಪ್ರಕಾರ ಐದನೇ ತರಗತಿಯಿಂದ ಪಿಹೆಚ್‌ಡಿ ಹಂತದವರೆಗಿನ ಕಲಿಕೆಯ ಸಮಯದ ಆಧಾರದ ಮೇಲೆ ಕ್ರೆಡಿಟ್ ನಿಗದಿಪಡಿಸಲಾಗುತ್ತದೆ. ಎನ್‌ಸಿಆರ್‌ಎಫ್‌ ಅಡಿ ಪ್ರತಿಯೊಂದು ಕಲಿಕೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಕ್ರೆಡಿಟ್ ಪಡೆಯಬಹುದು.
  • ತರಗತಿ ಬೋಧನೆ-ಕಲಿಕೆ, ಪ್ರಯೋಗಾಲಯ ಕೆಲಸ, ನಾವೀನ್ಯತೆ ಲ್ಯಾಬ್‌ಗಳು, ಕ್ರೀಡೆ ಮತ್ತು ಆಟಗಳು, ಯೋಗ ದೈಹಿಕ ಚಟುವಟಿಕೆಗಳು, ಪ್ರದರ್ಶನ ಕಲೆಗಳು, ಸಂಗೀತ, ಕರಕುಶಲ ಕೆಲಸ, ಸಾಮಾಜಿಕ ಕೆಲಸ, ಎನ್‌ಸಿಸಿ, ಬ್ಯಾಗ್ ಕಡಿಮೆ ದಿನಗಳು, ಪರೀಕ್ಷೆಗಳು, ಕ್ಲಾಸ್‌ ಟೆಸ್ಟ್, ತರಬೇತಿ ಕೌಶಲ, ಕೌಶಲ ಶಿಕ್ಷಣದಲ್ಲಿ ಕ್ಷೇತ್ರ ಭೇಟಿ, ಉದ್ಯೋಗ ತರನಬೇತಿ, ಇಂಟರ್ನ್‌ಶಿಪ್‌, ಅಪ್ರೆಂಟಿಸ್‌ಶಿಪ್‌, ಅನುಭವದ ಕಲಿಕೆ ಮೂಲಕ ಕ್ರೆಡಿಟ್‌ ಗಳಿಸಬಹುದಾಗಿದೆ.