Published on: October 28, 2022
ಸಿತ್ರಾಂಗ್ ಚಂಡಮಾರುತ
ಸಿತ್ರಾಂಗ್ ಚಂಡಮಾರುತ
ಸುದ್ದಿಯಲ್ಲಿ ಏಕಿದೆ?
ಬಾಂಗ್ಲಾದೇಶಕ್ಕೆ ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 16 ಮಂದಿ ಸಾವಿಗೀಡಾಗಿದ್ದು, ಸುಮಾರು ಒಂದು ಮಿಲಿಯನ್ ಜನರನ್ನು ಅವರ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮುಖ್ಯಾಂಶಗಳು
- ಅಟ್ಲಾಂಟಿಕ್‌ನಲ್ಲಿನ ಚಂಡಮಾರುತಗಳು ಅಥವಾ ಪೆಸಿಫಿಕ್‌ನಲ್ಲಿ ಟೈಫೂನ್‌ಗಳಿಂದಾಗುವ ಚಂಡಮಾರುತ ಸಾಮಾನ್ಯ. ಆದರೆ, ಹವಾಮಾನ ಬದಲಾವಣೆಯು ಅವುಗಳನ್ನು ಹೆಚ್ಚು ತೀವ್ರವಾಗಿ ಮತ್ತು ಆಗಾಗ್ಗೆ ಉಂಟುಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
- ಸಿತ್ರಾಂಗ್ ಚಂಡಮಾರುತದಿಂದಾಗಿ ದಕ್ಷಿಣ ಬಾಂಗ್ಲಾದೇಶದಲ್ಲಿ ಭೂಕುಸಿತ ಉಂಟಾಯಿತು. ಆದರೆ, ಇದಕ್ಕೂ
- ಮೊದಲೇ ಆ ಪ್ರದೇಶದಲ್ಲಿನ ಸುಮಾರು 1 ಮಿಲಿಯನ್ ಜನರನ್ನು ಅಧಿಕಾರಿಗಳು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
- ದ್ವೀಪಗಳು ಮತ್ತು ನದಿ ತಟದಂತಹ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತವಾಗಿ ಸೈಕ್ಲೋನ್ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲಾಗಿದೆ.
ಚಂಡಮಾರುತಗಳು ಹೇಗೆ ರೂಪುಗೊಳ್ಳುತ್ತವೆ?
- ಉಷ್ಣವಲಯದ ಚಂಡಮಾರುತಗಳು ಸಮಭಾಜಕದ ಬಳಿ ಸಮುದ್ರದ ಬೆಚ್ಚಗಿನ ನೀರಿನ ಮೇಲೆ ಮಾತ್ರ ರಚನೆಯಾಗುತ್ತವೆ.
- ಸಮುದ್ರದ ಮೇಲೆ ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಸಮುದ್ರದ ಮೇಲ್ಮೈಯಿಂದ ಮೇಲಕ್ಕೆ ಏರಿದಾಗ, ಚಂಡಮಾರುತವು ರೂಪುಗೊಳ್ಳುತ್ತದೆ.
- ಗಾಳಿಯು ಸಮುದ್ರದ ಮೇಲ್ಮೈಯಿಂದ ಮೇಲಕ್ಕೆ ಮತ್ತು ಎತ್ತರಕ್ಕೆ ಏರಿದಾಗ, ಅದು ಕೆಳಗಿರುವ ಕಡಿಮೆ ಗಾಳಿಯ ಒತ್ತಡದ ಪ್ರದೇಶವನ್ನು ಸೃಷ್ಟಿಸುತ್ತದೆ. ಇದು ಹೆಚ್ಚಿನ ಒತ್ತಡವನ್ನು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳಿಂದ ಗಾಳಿಯು ಕಡಿಮೆ ಒತ್ತಡದ ಪ್ರದೇಶದ ಕಡೆಗೆ ಚಲಿಸುವಂತೆ ಮಾಡುತ್ತದೆ, ಇದು ಗಾಳಿಯ ಬಿಸಿಯಾಗುವಿಕೆಗೆ ಕಾರಣವಾಗುತ್ತದೆ ಮತ್ತು ಮೇಲಕ್ಕೆ ಏರಲು ಕಾರಣವಾಗುತ್ತದೆ.
- ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಮೇಲಕ್ಕೆ ಏರುತ್ತದೆ ಮತ್ತು ಗಾಳಿಯಲ್ಲಿರುವ ನೀರಿನ ಅಂಶವು ತಂಪಾಗುತ್ತದೆ, ಅದು ಮೋಡಗಳನ್ನು ರೂಪಿಸುತ್ತದೆ. ಮೋಡಗಳು ಮತ್ತು ಗಾಳಿಯ ಸಂಪೂರ್ಣ ವ್ಯವಸ್ಥೆಯು ಸಮುದ್ರದ ಶಾಖ ಮತ್ತು ಸಮುದ್ರದ ಮೇಲ್ಮೈಯಿಂದ ಆವಿಯಾಗುವ ನೀರಿನೊಂದಿಗೆ ಸುರುಳಿಯಾಗಿ ತಿರುಗುತ್ತದೆ ಮತ್ತು ಮೇಲಕ್ಕೇರುತ್ತದೆ.
- ಗಾಳಿಯ ವೇಗವು 39 mph (63 kmph) ಇದ್ದಾಗ, ಚಂಡಮಾರುತವನ್ನು ಉಷ್ಣವಲಯದ ಬಿರುಗಾಳಿ ಎಂದು ಕರೆಯಲಾಗುತ್ತದೆ.
- ಗಾಳಿಯ ವೇಗವು 74 mph (119 kmph) ತಲುಪಿದಾಗ, ಅದು ಅಧಿಕೃತವಾಗಿ ಉಷ್ಣವಲಯದ ಬಿರುಗಾಳಿ ಅಥವಾ ಚಂಡಮಾರುತವಾಗಿದೆ.
- ಚಂಡಮಾರುತವನ್ನು ಸೈಕ್ಲೋನ್, ಹರಿಕೇನ್, ಟೈಫೂನ್ (ತೂಫಾನು) ಎಂದೆಲ್ಲ ಕರೆಯಲಾಗುತ್ತದೆ. ವಾಸ್ತವದಲ್ಲಿ ಮೂರು ಪದಗಳ ಅರ್ಥ ಒಂದೇ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್ ಪ್ರದೇಶದಲ್ಲಿ ಹರಿಕೇನ್ ಎಂದೂ, ಪೆಸಿಫಿಕ್ ತೀರದಲ್ಲಿ ಟೈಫೂನ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್ ಎಂದೂ ಕರೆಯುವ ಪದ್ಧತಿ ಇದೆ