Published on: November 7, 2022
ಏರ್ ಆಂಬ್ಯುಲೆನ್ಸ್ ಸೇವೆ
ಏರ್ ಆಂಬ್ಯುಲೆನ್ಸ್ ಸೇವೆ
ಸುದ್ದಿಯಲ್ಲಿ ಏಕಿದೆ?
ರಾಜ್ಯ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಐಕ್ಯಾಟ್(ಇಂಟರ್ನ್ಯಾಷನಲ್ ಕ್ರಿಟಿಕಲ್-ಕೇರ್ ಏರ್ ಟ್ರಾನ್ಸ್‌ಫರ್ ಟೀಮ್) ಫೌಂಡೇಶನ್ ರಾಜ್ಯ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಉಚಿತವಾಗಿ ಏರ್ ಆಂಬ್ಯುಲೆನ್ಸ್ ಸೇವೆ ನೀಡಲಿದೆ.
ಮುಖ್ಯಾಂಶಗಳು
- ಈ ಮೊದಲು 108 ಆಂಬ್ಯುಲೆನ್ಸ್ ಸೇವೆಯೊಂದಿಗೆ ಈ ಸೇವೆ ನೀಡುವ ಯೋಜನೆ ಇತ್ತು. ಆದರೆ ಅದರ ಒಪ್ಪಂದದಲ್ಲಿ ಸಮಸ್ಯೆಗಳಾದಗ ಈ ಆಲೋಚನೆಯನ್ನು ಕೈಬಿಡಲಾಯಿತು ಮತ್ತು ನೇರವಾಗಿ ಸರ್ಕಾರದೊಂದಿಗೆ ಪಾಲುದಾರಿಕೆಯ ನಿರ್ಧಾರ ತೆಗೆದುಕೊಳ್ಳಲಾಯಿತು.
- ಐಕ್ಯಾಟ್ ಕಂಪನಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ(GIM)ದಲ್ಲಿ ಭಾಗವಹಿಸಿದ ಕಂಪನಿಗಳಲ್ಲಿ ಒಂದಾಗಿದ್ದು, ಹೆಚ್ಚಿನ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ.
- ಈಗಾಗಲೇ ಇರುವ ಮೂಲಸೌಕರ್ಯಗಳೊಂದಿಗೆ ಸರ್ಕಾರದೊಂದಿಗೆ ಏರ್ ಆಂಬ್ಯುಲೆನ್ಸ್ ಸೇವೆ ನೀಡುವ ದಿಕ್ಕಿನಲ್ಲಿ ಕೆಲಸ ಮಾಡಲಾಗುತ್ತಿದೆ ಮತ್ತು ಒಂದು ವಾರದೊಳಗೆ 2-3 ಏರ್‌ಲಿಫ್ಟ್‌ಗಳನ್ನು ಮಾಡಲಾಗುತ್ತದೆ.
- ”ರಾಜ್ಯ ಸರ್ಕಾರ ಉಚಿತವಾಗಿ ಈ ಸೇವೆ ನೀಡಲಿದ್ದು, ಇದಕ್ಕಾಗಿ ಸುಮಾರು 100 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರತಿ ಸೇವೆಗೆ ಸದ್ಯಕ್ಕೆ ಸುಮಾರು 2 ರಿಂದ 2.5 ಲಕ್ಷ ರೂ. ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.