Published on: November 10, 2022
ಸುದ್ಧಿ ಸಮಾಚಾರ – 10 ನವೆಂಬರ್ 2022
ಸುದ್ಧಿ ಸಮಾಚಾರ – 10 ನವೆಂಬರ್ 2022
- ಹಳ್ಳಿಗರ ಆರೋಗ್ಯ ಸುರಕ್ಷತೆಯ ಕಾರಣಕ್ಕೆ ಸೋಂಕು ರಹಿತ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದಕ್ಕೆ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಯೋಜನೆಯನ್ನು ಈ ವರ್ಷಾಂತ್ಯದೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಜನತೆಯ ಆರೋಗ್ಯವಂತ ಜೀವನ ಶೈಲಿಗೆ ಒತ್ತು ನೀಡುವ ಮತ್ತು ಗ್ರಾಮೀಣ ಜನರ ರೋಗದ ಹೊರೆ ತಗ್ಗಿಸುವ ಉದ್ದೇಶವನ್ನು ಹೊಂದಿದೆ.
- ಭಾರತೀಯ ಕಪ್ಪು ಜೇನುಹುಳು (ಅಪಿಸ್ ಕರಿಂಜೋಡಿಯನ್) ಎಂದು ನಾಮಕರಣಗೊಂಡ ಜೇನುನೊಣದ ಹೊಸ ಸ್ಥಳೀಯ ಪ್ರಭೇದವನ್ನು ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಗಿದೆ. ಇದರ ಆವಾಸಸ್ಥಾನವು ಮಧ್ಯ ಪಶ್ಚಿಮ ಘಟ್ಟಗಳು ಮತ್ತು ನೀಲಗಿರಿಯಿಂದ ದಕ್ಷಿಣದ ಪಶ್ಚಿಮ ಘಟ್ಟಗಳವರೆಗೆ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳನ್ನು ವ್ಯಾಪಿಸಿದೆ. IUCN ಈ ಜಾತಿಯನ್ನು ಸಮೀಪ ಬೆದರಿಕೆ ಒಳಗಾಗಿವೆ ಎಂದು ಕೆಂಪು ಪಟ್ಟಿಯಲ್ಲಿ ವರ್ಗೀಕರಿಸಲಾಗಿದೆ.
- 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟ (ಅದರಲ್ಲಿ 27 ದೇಶಗಳಿವೆ) ಒಳಗೊಂಡ ವಿಶ್ವದ ಅತ್ಯಂತ ಪ್ರಭಾವಿ ಕೂಟ ‘ಜಿ 20’ಯ ಅಧ್ಯಕ್ಷತೆಯನ್ನು ಡಿ.1, 2022 ರಿಂದ ವಹಿಸಿಕೊಳ್ಳುತ್ತಿರುವ ಭಾರತ ಈ ಐತಿಹಾಸಿಕ ಜವಾಬ್ದಾರಿಯ ಸಂಭ್ರಮಕ್ಕಾಗಿ ಲಾಂಛನ, ಧ್ಯೇಯ ಹಾಗೂ ವೆಬ್ಸೈಟ್ಗಳನ್ನು ಲೋಕಾರ್ಪಣೆ ಮಾಡಿದೆ.
- ಧ್ಯೇಯ : “ವಸುಧೈವ ಕುಟುಂಬಕಮ್” (ಭಾರತದ ಕರುಣೆಯ ಸಂಕೇತ). ಅಥವಾ “ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ” -ಇದನ್ನು ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ. ಲಾಂಛನದಲ್ಲಿರುವ ಕಮಲದ ಏಳು ದಳಗಳು (seven petals)ವಿಶ್ವದ 7 ಖಂಡಗಳನ್ನು, ಸಂಗೀತ 7 ಸ್ವರಗಳನ್ನು ಪ್ರತಿನಿಧಿಸುತ್ತದೆ.