Published on: November 12, 2022
ಕೆಐಎ ಟರ್ಮಿನಲ್ 2
ಕೆಐಎ ಟರ್ಮಿನಲ್ 2
ಸುದ್ದಿಯಲ್ಲಿ ಏಕಿದೆ?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಟರ್ಮಿನಲ್ 2ರ ಉದ್ಘಾಟನೆ ಮಾಡಿದರು.
ಮುಖ್ಯಾಂಶಗಳು
- ಥೀಮ್ : ಉದ್ಯಾನದಲ್ಲಿ ಟರ್ಮಿನಲ್
- ಇದು ‘ವಾಕ್ ಇನ್ ದಿ ಗಾರ್ಡನ್’ ಅನುಭವವನ್ನು ನೀಡುತ್ತದೆ.
- ಸ್ವಯಂ ಚೆಕ್-ಇನ್ ಮತ್ತು ಬ್ಯಾಗ್ಡ್ರಾಪ್ ಸೌಲಭ್ಯಗಳಂತಹ ಇತರ ಸೌಲಭ್ಯಗಳೊಂದಿಗೆ ಈ ಸೌಲಭ್ಯವು ಸುಂದರವಾದ ಒಳಾಂಗಣ ಉದ್ಯಾನವನ್ನು ಹೊಂದಿದೆ.
- ಹಸಿರುಬಂಗಾರ ಎಂದೇ ಕರೆಯಲಾಗುವ ಬಿದಿರನ್ನು ಬಳಸಿ ಅತ್ಯಂ ತ ಆಕರ್ಷಕವಾಗಿ ಟರ್ಮಿನಲ್ಅನ್ನು 5 ಸಾವಿರ ರೂ. ವೆಚ್ಚ ದಲ್ಲಿ ವಿನ್ಯಾ ಸಮಾಡಲಾಗಿದೆ.
- ವಿನ್ಯಾಸ: ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್ಮೋರ್, ಓವಿಂಗ್ಸ್ & ಮೆರಿಲ್(SOM) ಅನ್ನು ಆಯ್ಕೆ ಮಾಡಲಾಗಿದೆ. ಬುರ್ಜ್ ಖಲೀಫಾವನ್ನು ವಿನ್ಯಾ ಸಗೊಳಿಸಿದ್ದು ಸಹ ಇದೇಸಂಸ್ಥೆ ಎಂಬುದು ಗಮನಾರ್ಹ.
ಟರ್ಮಿನಲ್- 2 ವಿನ್ಯಾಸದ ಮಾಹಿತಿ
- ಬಿದಿರಿನ ವೆಚ್ಚ ಅಂದಾಜು 200 ಕೋಟಿರೂ.
- 40 ಮತ್ತು 60 ಮತ್ತು 80 ಮಿಮೀವ್ಯಾಸದ ಕ್ಯೂಟಿ 2,40,000 ಆರ್ಎಂಟಿ ಬಿದಿರಿನ ಕಂಬಗಳು ಮತ್ತು 84,000 ಚ ಮೀಟರ್ ಸೀಲಿಂಗ್.
- ಚೀನಾದಿಂದ ಬಿದಿರು ತರಿಸಲಾಗಿದೆ.
- ಬಳಸಿರುವ ಬಿದಿರು ಇಂಜಿನಿಯಾರ್ಡ್ ಬಿದಿರು
- ಬೆಂಗಳೂರಿನ ನವದ್ಯೋಮವಾದ ಬ್ಯಾಂಬೂಸ್ ಫುರ್ನ್ ಬ್ಯಾಂಬುಷ ವಿನ್ಯಾಸ ರೂಪಿಸುವಲ್ಲಿ ಕೆಲಸ ಮಾಡಿದೆ.
- ನಿರ್ಮಾಣ: ಗುತ್ತಿಗೆದಾರ :ಎಲ್ ಆಂಡ್ ಟಿ ಸಂಸ್ಥೆ , ಉಪಗುತ್ತಿಗೆದಾರ : ಲಿಂಡನೆರ್ ಜರ್ಮನಿ ಕಂಪನಿ
ಮೂಲಸೌಕರ್ಯಗಳು
- ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಟರ್ಮಿನಲ್ 2 ನಿರ್ಮಾಣಗೊಂಡಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ ನಮ್ಮ ಮೆಟ್ರೋ ನಿಲ್ದಾಣ ರೂಪುಗೊಳ್ಳುತ್ತಿದೆ. ಸಬ ಅರ್ಬನ್ ರೈಲ್ವಯ್ ಮತ್ತು ಹಾಯ್ ಸ್ಪೀಡ್ ರೈಲ್ವೆ ಲಿಂಕಗೂ ಸಮರ್ಪಕ ಕನೆಕ್ಟಿವಿಟಿ ಹೊಂದಿದೆ.
- ಸಾಮರ್ಥ್ಯ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
ವಿಶೇಷತೆಗಳು:
- ಈ ಟರ್ಮಿನಲ್ 2 ವನ್ನು ‘ಗಾರ್ಡನ್ ಟರ್ಮಿನಲ್’ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದ್ದು, ಈ ಗಾರ್ಡನ್ ಬೆಂಗಳೂರನ್ನು ಭಾರತದ ಉದ್ಯಾನ ನಗರಿ ಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ.
- ಕನ್ನಡಮಯ ಒಳಾಂಗಣ :ಪ್ರಸ್ತುತ, ಗಾರ್ಡನ್ ಟರ್ಮಿನಲ್ನಲ್ಲಿನಿರ್ಮಾಣಗೊಂಡಿರುವ ಕೃತಕ ಉದ್ಯಾನದ ನಡುವೆ ರಾಜ್ಯದ ಸಾಂಸ್ಕೃತಿಕ ಪ್ರತಿಬಿಂಬವಾಗಿ ಕೆಲ ವಿನ್ಯಾಸಗಳನ್ನು ಮಾಡಲಾಗಿದ್ದು, ಒಳ ಮತ್ತು ಪ್ರವೇಶ ದ್ವಾರದಲ್ಲಿರಾಜ್ಯದ ಕಲಾವಿದರ ಶಿಲ್ಪಕಲಾ ಸ್ಮಾರಕಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ನಾಡಿನ ಸಂಸ್ಕೃತಿ ತೆರೆದಿಡುವ ಶಿಲ್ಪಕಲಾಕೃತಿಗಳಿಗೆ ಆದ್ಯತೆ ನೀಡಲಾಗಿದ್ದು, ಭರತನಾಟ್ಯದ ಸ್ಮಾರಕಗಳು ಗಮನ ಸೆಳೆಯಲಿವೆ. ಜತೆಗೆ, ನವರಸಗಳನ್ನು ಬಿಂಬಿಸುವ ಕಲಾಕೃತಿಗಳಿರಲಿವೆ.
ಕೆಂಪೇಗೌಡರ ಪ್ರಗತಿ ಪ್ರತಿಮೆ
- ಕೆಂಪೇಗೌಡರ ಪ್ರತಿಮೆ ಸಂಪೂರ್ಣ ಕಂಚಿನಿಂದ ಮಾಡಲಾಗಿದೆ 108 ಅಡಿ ಎತ್ತರ ಇದೆ.
- ಕೆಂಪೇಗೌಡರು ತಮ್ಮ ಜೀವನದ ಆಶಯಗಳನ್ನು ಸಾಕಾರಗೊಳಿಸಿದವರು. ಉದಾಹರಣೆ ಕೆರೆಗಳು ನಿರ್ಮಾಣ, ಪೇಟೆಗಳ ನಿರ್ಮಾಣ, ಮರ ನೆಟ್ಟಿರುವುದು ಹಾಗೂ ಅವರ ಕಾಲದಲ್ಲಿ ಮಾಡಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಪ್ರತಿಮೆಯ ಕೆಳಭಾಗದಲ್ಲಿ ಕಂಚಿನಿಂದ ರಚಿಸಲಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.
- ನಾಡಪ್ರಭು ಕೆಂಪೇಗೌಡರ ಹಿರಿಮೆ ಮತ್ತು ಅವರ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಸ್ಮಾರಕಗಳನ್ನು ನಿರ್ಮಿಸುವ ಮೂಲಕ ಯುವ ಪೀಳಿಗೆಗೆ ಶಿಕ್ಷಣ ನೀಡುವುದು ನಮಗೆ ಮುಖ್ಯವಾಗಿದೆ.
- ಕೆಂಪೇಗೌಡ ಪ್ರತಿಮೆ ಹೊಸ ದಾಖಲೆ ಸೃಷ್ಟಿಸಿದೆ. ಸ್ಟೇಟ್ ಆಫ್ ಪ್ರಾಸ್ಪರೆಟಿ ಹೆಸರಿನಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದೆ.