Published on: November 14, 2022

‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’

‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’

ಸುದ್ದಿಯಲ್ಲಿ ಏಕಿದೆ?

ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು ಆರ್ಥಿಕವಾಗಿ ಬಲವರ್ಧನೆ ಮಾಡುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ.

ಮುಖ್ಯಾಂಶಗಳು

  • ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ಮೇಲಿನ ಮಾಫಿಯಾದ ಹಿಡಿತ ತಪ್ಪಿಸಲು ಕುರಿ ಮತ್ತುಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ಚಿಂತನೆ ನಡೆಸಿದೆ.
  • ‘ನಾರಿ ಸುವರ್ಣ’ ಜತೆಗೆ ಬನ್ನೂರು, ಡೆಕ್ಕಣಿ, ಬಳ್ಳಾರಿ, ಯಳಗ, ಕೆಂಗುರಿ ಇತ್ಯಾದಿ ದೇಸಿ ತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ನಿಯೋಗ ವಿವರಿಸಿದೆ.

ಉದ್ದೇಶ

  • ಕುರಿ ತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮಾರುಕಟ್ಟೆಯಲ್ಲಿಮಾಂಸದ ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ ಸರಿದೂಗಿಸಲು ನೆರವಾಗುತ್ತದೆ.

ಯೋಜನೆಯ ವಿವರ:

  • ಅರ್ಹತೆ: ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 20,000 ಸದಸ್ಯರು ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.
  • ‘ತೆಲಂಗಾಣ ಮಾದರಿ’ ಯೋಜನೆ ಕುರಿಗಾಹಿಗಳಿಗೆ 20 ಕುರಿ ಮತ್ತುಒಂದು ಮೇಕೆ ನೀಡುವ ಯೋಜನೆಯಾಗಿದೆ.
  • 75 ಲಕ್ಷ ರೂಪಾಯಿ ಘಟಕ ವೆಚ್ಚದಲ್ಲಿಶೇಕಡ 50ರಷ್ಟು ಮೊತ್ತವನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ.
  • ಶೇಕಡ 25ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿನೀಡಲಿದೆ. ಉಳಿದ ಮೊತ್ತವನ್ನು ಫಲಾನುಭವಿ ವಂತಿಗೆಯಾಗಿ ನೀಡಬೇಕಿದೆ.
  • ಮಾರುಕಟ್ಟೆ ಪ್ರವೇಶ: ಗೋ ಹತ್ಯೆ ನಿಷೇಧದಿಂದ ಶೇ.5-10ರಷ್ಟು ಮಾಂಸಾಹಾರಿಗಳು ಕುರಿ ಮಾಂಸದತ್ತಹೊರಳಿದ್ದು, ಬೇಡಿಕೆಯೂ ಹೆಚ್ಚಿದೆ. ಕುರಿಗಾಹಿಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಲೆಂದು ಮಾರುಕಟ್ಟೆ ಪ್ರವೇಶಿಸಲಿದೆ.