Published on: November 17, 2022

ವೀಸಾ ಯೋಜನೆ

ವೀಸಾ ಯೋಜನೆ

ಸುದ್ದಿಯಲ್ಲಿ ಏಕಿದೆ?

 ವಾರ್ಷಿಕ 3000 ಭಾರತೀಯ ವೀಸಾ ಅನುಮತಿಗೆ ಬ್ರಿಟನ್‌ ಒಪ್ಪಿಗೆ ನೀಡಿದೆ. 

ಮುಖ್ಯಾಂಶಗಳು

  • ಬ್ರಿಟನ್‌–ಭಾರತ ವಲಸೆ ಮತ್ತು ಪ್ರಯಾಣ ಪಾಲುದಾರಿಕೆ ಬಲವರ್ಧನೆ ನಿಟ್ಟಿನಲ್ಲಿ ಭಾರತವು ವೀಸಾ ಯೋಜನೆಯ ಲಾಭ  ಪಡೆಯುತ್ತಿರುವ ಮೊದಲ ರಾಷ್ಟ್ರವೆಂದು ಬ್ರಿಟನ್‌ ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
  • ಉಭಯ ರಾಷ್ಟ್ರಗಳು ಹಿಂದಿನ ವರ್ಷ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.
  • ಈ ಯೋಜನೆಯಡಿ ಭಾರತದ 3000 ಸಾವಿರ ಯುವಕರು ಪ್ರತಿ ವರ್ಷ ಯುಕೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ.
  • 18–30 ವಯೋಮಿತಿಯ ಭಾರತೀಯ ಯುವಕರು ಜೀವನದಲ್ಲಿ ಒಮ್ಮೆ ಬ್ರಿಟನ್‌ನ ವೃತ್ತಿ ಹಾಗೂ ಸಾಂಸ್ಕೃತಿಕ ವಿನಿಮಯದ ಭಾಗವಾಗಲಿದ್ದಾರೆ.

2023ರ ಪ್ರಾರಂಭದಲ್ಲಿ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆಯಿದೆ.