Published on: July 29, 2021

ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್

ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್

ಸುದ್ಧಿಯಲ್ಲಿ ಏಕಿದೆ ?  ದೇಶದ ಎಂಟು ರಾಜ್ಯಗಳ 14 ಕಾಲೇಜುಗಳು ಐದು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಬೋಧನೆ ಮಾಡಲಿವೆ. ತಮಿಳು, ತೆಲುಗು, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಯಲ್ಲಿ ಈ ಕಾಲೇಜುಗಳು ಎಂಜಿನಿಯರಿಂಗ್ ಕೋರ್ಸ್‌ ನಡೆಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಹಿನ್ನಲೆ

  • ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಮಾಹಿತಿ ನೀಡಿದ್ದಾರೆ.
  • ‘ಎಂಜಿನಿಯರಿಂಗ್ ಕೋರ್ಸ್‌ಗಳ ಪಠ್ಯಗಳನ್ನು ಭಾರತದ 11 ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಟೂಲ್ ಅನ್ನು ಸರ್ಕಾರವು ಅಭಿವೃದ್ಧಿಪಡಿಸಿದೆ’

ನೂತನ ಶಿಕ್ಷಣ ನೀತಿಯ ಹೊಸ ಯೋಜನೆಗಳು

  • ವಿದ್ಯಾ ಪ್ರವೇಶ್’: ಮೊದಲ ಹಂತದ ಶಾಲಾ ಶಿಕ್ಷಣ ಪ್ರವೇಶಕ್ಕೆ ಪೂರ್ವಬಾವಿಯಾಗಿ ಮಕ್ಕಳಿಗೆ ಆಟ ಆಧಾರಿತ ಮೂರು ತಿಂಗಳ ಕೋರ್ಸ್‌, ‘ವಿದ್ಯಾ ಪ್ರವೇಶ್’ ಅನ್ನು ಪ್ರಧಾನಿ ಘೋಷಿಸಿದರು.
  • ‘ಶೈಕ್ಷಣಿಕ ಬ್ಯಾಂಕ್’ : ಶೈಕ್ಷಣಿಕ ಅಂಕಗಳ ‘ಶೈಕ್ಷಣಿಕ ಬ್ಯಾಂಕ್’ ಅನ್ನು ಪ್ರಧಾನಿ ಘೋಷಿಸಿದರು. ‘ಕೋರ್ಸ್ ಮಧ್ಯದಲ್ಲಿ ವಿದ್ಯಾರ್ಥಿಯು ತನ್ನ ಇಚ್ಛೆಯ ವಿಷಯಗಳನ್ನು ಬದಲಿಸಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ. ಹೀಗೆ ವಿಷಯ ಮತ್ತು ಕೋರ್ಸ್ ಬದಲಿಸಿದಾಗ ವಿದ್ಯಾರ್ಥಿಯ ಶೈಕ್ಷಣಿಕ ಮೌಲ್ಯಮಾಪನವನ್ನು ನಡೆಸಲು ಶೈಕ್ಷಣಿಕ ಬ್ಯಾಂಕ್ ನೆರವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇದನ್ನು ರೂಪಿಸಲಾಗಿದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಅಲ್ಲದೆ, ವಿದ್ಯಾರ್ಥಿ ತನ್ನ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಈ ವ್ಯವಸ್ಥೆ ನೀಡಲಿದೆ’
  • ಸಫಲ್’: ವಿದ್ಯಾರ್ಥಿಗಳ ಪರೀಕ್ಷೆಯ ವ್ಯವಸ್ಥೆಯನ್ನು ಬದಲಿಸುವ ‘ಕಲಿಕಾಮಟ್ಟ ವಿಶ್ಲೇಷಣೆಗಾಗಿ ವ್ಯವಸ್ಥಿತ ಮೌಲ್ಯಮಾಪನ-ಸಫಲ್’ ವ್ಯವಸ್ಥೆಯನ್ನೂ ಪ್ರಧಾನಿ ಘೋಷಿಸಿದರು.
  • ನಿಶಿತಾ 0’: ‘ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಇದಕ್ಕೆ ಶಿಕ್ಷಕರನ್ನು ಸಿದ್ಧಪಡಿಸಲು ಎನ್‌ಸಿಎಇಆರ್‌ಟಿ ‘ನಿಶಿತಾ 2.0’ ಎಂಬ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ. ಶಿಕ್ಷಕರಿಗೆ ಬೇಕಿರುವ ತರಬೇತಿ ಇದರಲ್ಲಿ ದೊರೆಯಲಿದೆ. ತರಬೇತಿ ಪಡೆದ ಶಿಕ್ಷಕರು ತಮ್ಮ ಶಿಕ್ಷಣ ಇಲಾಖೆಗೆ, ತಮ್ಮ ಅಗತ್ಯಗಳ ಬಗ್ಗೆ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ
  • ಸಂಜ್ಞಾ ಭಾಷೆಗೆ ಭಾಷಾ ವಿಷಯದ ಮಾನ್ಯತೆ ನೀಡಲಾಗಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೂ ಸಂಜ್ಞಾ ಭಾಷೆಯನ್ನು, ಒಂದು ಭಾಷೆಯಾಗಿ ಕಲಿಸಲು ಅವಕಾಶವಿದೆ. ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಲಿಕೆಗಾಗಿ ಸಂಜ್ಞಾಭಾಷೆಯನ್ನು ಅವಲಂಬಿಸಿದ್ದಾರೆ. ಈ ಹೊಸ ವ್ಯವಸ್ಥೆಯು ಭಾರತೀಯ ಸಂಜ್ಞಾ ಭಾಷೆಗೆ ಉತ್ತೇಜನ ನೀಡಲಿದೆ. ಇದರಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ