Published on: November 30, 2022
ಧರಾವಿ ಮರು ಅಭಿವೃದ್ಧಿ ಯೋಜನೆ
ಧರಾವಿ ಮರು ಅಭಿವೃದ್ಧಿ ಯೋಜನೆ
ಸುದ್ದಿಯಲ್ಲಿ ಏಕಿದೆ?
259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ.
ಮುಖ್ಯಾಂಶಗಳು
- ಅದಾನಿ ಸಮೂಹ 5,069 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿದ್ದು, ಜಗತ್ತಿನಲ್ಲೇ ಅತಿ ದೊಡ್ಡ ಸ್ಲಮ್ನ ಮರು ಅಭಿವೃದ್ಧಿ ಇದಾಗಿದಾಗಿದೆ.
- ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರ ಕೆಲವೇ ವಾರಗಳಲ್ಲಿ ಯೋಜನೆಗೆ ಅನುಮೋದನೆ ನೀಡಲಿದೆ.
- 20,000 ಕೋಟಿ ರೂಪಾಯಿಗಳ ಯೋಜನೆಗೆ ಈ ಬಿಡ್ಡಿಂಗ್ ನಡೆದಿದ್ದು, ಯೋಜನೆಗೆ 7 ವರ್ಷಗಳ ಗಡುವು
ನೀಡಲಾಗಿದೆ.
ಏನಿದು ಯೋಜನೆ?
-
ಈಗ 2.5 ಚದರ ಕಿ.ಮೀ ನಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿರುವ 6.5 ಲಕ್ಷ ಸ್ಲಮ್ ಮಂದಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಇದಾಗಿದೆ. ಧಾರಾವಿ, ಜಗತ್ತಿನ ಅತಿ ದೊಡ್ಡ ಕೊಳೆಗೇರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.