Published on: December 2, 2022

ಮೌರ್ಯರ ಬೆಟ್ಟ

ಮೌರ್ಯರ ಬೆಟ್ಟ

ಸುದ್ದಿಯಲ್ಲಿ ಏಕಿದೆ?

ಗಂಗಾವತಿ ತಾಲೂಕಿನ ಎಲ್ಲಾ ಸರಕಾರಿ ಶಾಲಾಮಕ್ಕಳನ್ನು ಮೌರ್ಯರ ಬೆಟ್ಟಕ್ಕೆ ಕರೆದೊಯ್ದು ಐತಿಹಾಸಿ ಸ್ಥಳದ ಬಗ್ಗೆ ಪೂರ್ಣ ಮಾಹಿತಿ ನೀಡುವ ವಿನೂತನ ಯೋಜನೆಯನ್ನು ತಾಲೂಕಿನ ಶ್ರೀ ರಾಮನಗರ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಕಿಕೊಂಡಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲೇ ಮೊದಲಾಗಿರುವ ಈ ಯೋಜನೆ ಗಂಗಾವತಿ(ಕಾರಟಗಿ, ಕನಕಗಿರಿ) ತಾಲೂಕಿನ ಸರಕಾರ ಶಾಲೆಗಳ ಮಕ್ಕಳಿಗಾಗಿಯೇ ರೂಪಿಸಲಾಗಿದೆ.
  • ಮೌರ್ಯರ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದೆ ಶಿಲಾಯುಗದ ಜನರು ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಸಾವಿರಾರು ಶಿಲಾಮನೆಗಳು ಮತ್ತು ಶಿಲಾ ಸಮಾಧಿಗಳಿದ್ದು ಇವುಗಳ ಇತಿಹಾಸ ಕಾಲಘಟ್ಟ ತಿಳಿಸಲು ಜಿಲ್ಲಾಡಳಳಿತ ಅನುಮತಿಯ ಮೇರೆಗೆ ಗಂಗಾವತಿ ತಾಲೂಕಿನ ಸರಕಾರಿ ಶಾಲೆಗಳ 5 ಸಾವಿರ 8 ನೇ ತರಗತಿ ಮಕ್ಕಳಿಗೆ ಮೌರ್ಯರ ಬೆಟ್ಟ ಪ್ರವಾಸ ಯೋಜನೆ ಆರಂಭಿಸಿದೆ.
  • 2021-22 ನೇ ಸಾಲಿನಲ್ಲಿ ಯುನೇಸ್ಕೋ ವಿಶ್ವಪರಂಪರಾ ಪ್ರದೇಶಗಳನ್ನು ಗುರುತಿಸುವ ಸ್ಥಳಗಳ ಪಟ್ಟಿಯಲ್ಲಿ ಮೌರ್ಯರ ಬೆಟ್ಟ ಸ್ಥಾನ ಪಡೆದಿದ್ದು ಯುನೇಸ್ಕೋ ಘೋಷಣೆ ಬಾಕಿ ಇದೆ.

ಉದ್ದೇಶ

  • ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇಲ್ಲಿನ ಪ್ರತಿಷ್ಠಿತ ಶ್ರೀರಾಮನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು 5 ಸಾವಿರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸದ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿದೆ.