Published on: December 7, 2022
ದಿವ್ಯಾಂಗರಿಗೆ ವಸತಿ ಯೋಜನೆಯಲ್ಲಿ ಮೀಸಲು
ದಿವ್ಯಾಂಗರಿಗೆ ವಸತಿ ಯೋಜನೆಯಲ್ಲಿ ಮೀಸಲು
ಸುದ್ದಿಯಲ್ಲಿ ಏಕಿದೆ?
ದಿವ್ಯಾಂಗರಿಗೆ ವಸತಿ ಯೋಜನೆಯಲ್ಲಿ ಶೇ.3 ರಷ್ಟು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಾಂಶಗಳು
- ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿಂದು ಆಯೋಜಿಸಿದ್ದ ವಿಶ್ವ ವಿಶೇಷ ಚೇತನರ ದಿನಾಚರಣೆ (ಡಿಸೆಂಬರ್ 3)ಯಲ್ಲಿಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಅವರು, ದಿವ್ಯಾಂಗರಿಗೆ 5 ಲಕ್ಷ ರೂ. ವರೆಗೆ ಸರ್ಕಾರಿ ವೆಚ್ಚದಲ್ಲಿ ಅರೋಗ್ಯ ಸೇವೆಒದಗಿಸುವ ವಿಮಾ ಯೋಜನೆ ಜಾರಿ ಮಾಡಲಾಗುವುದು ಎಂದರು.
- ದಿವ್ಯಾಂಗರ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂಬರುವ ಬಜೆಟ್ ನಲ್ಲಿ ವಿಶೇಷ ಅನುದಾನ ಒದಗಿಸಲಾಗುವುದು, ಬುದ್ಧಿಮಾಂದ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್ ಶಾಪ್ ಗಳನ್ನು ತೆರೆಯಲಾಗುವುದು ಮತ್ತು ವಿಶೇಷ ಚೇತನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ಮೂರು ಚಕ್ರಗಳ ಬೈಸಿಕಲ್ ವಿತರಿಸಲಾಗುವುದು.
-
ಬುದ್ದಿಮಾಂದ್ಯ, ಶ್ರವಣ ದೋಷವುಳ್ಳ, ಅಂಧ ಮಕ್ಕಳ ಸ್ಕಾಲರ್ ಶಿಪ್ ಗಳನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.