ಸುದ್ಧಿ ಸಮಾಚಾರ :8 ಡಿಸೆಂಬರ್ 2022
ಸುದ್ಧಿ ಸಮಾಚಾರ :8 ಡಿಸೆಂಬರ್ 2022
-
ಸಂಚಾರ ನಿಯಮ ಉಲ್ಲಂಘಿಘಿಸುವ ವಾಹನ ಸವಾರರ ಮೇಲೆ ಕಣ್ಗಾವಲು ಇಡಲು ಪ್ರಮುಖ 50 ಜಂಕ್ಷನ್ಗಳಲ್ಲಿಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ಅನ್ನು ಜಾರಿ ಮಾಡಲಾಗಿದೆ.ವಾಹನ ದಟ್ಟಣೆ ಹೆಚ್ಚಿರುವ ಪ್ರಮುಖ ಜಂಕ್ಷನ್ಗಳಲ್ಲಿಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ಪಿಆರ್) ಕ್ಯಾಮೆರಾ ಅಳವಡಿಸಿದೆ.
- ಪ್ರತಿವರ್ಷವೂ ಡಿಸೆಂಬರ್ 7ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಸಂಪ್ರದಾಯದ ದಿನವಾಗಿ ಆಚರಿಸಲಾಗುತ್ತಿದೆ.
- ಟೈಮ್ ನಿಯತಕಾಲಿಕೆಯು “2022 ರ ಹೀರೋಸ್” ಇರಾನ್ನ ಮಹಿಳೆಯರು ಎಂದು ಘೋಷಿಸಿದೆ. ಇರಾನ್ನಲ್ಲಿ ಮಹಿಳೆಯರು ಘನತೆಯಿಂದ ಬದುಕುವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ನ ಮಹಿಳೆಯರು ಮುನ್ನಡೆಸುತ್ತಿರುವ ಆಂದೋಲನವು ಅವರು ವಿದ್ಯಾವಂತರು, ಉದಾರವಾದಿಗಳು, ಜಾತ್ಯತೀತರು ಮತ್ತು ದೈನಂದಿನ ಜೀವನವನ್ನು ನಡೆಸುವಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರು ಹಿಂದಿನ ತಲೆಮಾರಿನ ಮಹಿಳೆಯರಿಗಿಂತ ಬಹಳ ಭಿನ್ನರು.
- ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟೈಮ್ ನಿಯತಕಾಲಿಕೆಯು 2022ರ ಸಾಲಿನ ‘ವರ್ಷದ ವ್ಯಕ್ತಿ’ ಎಂದು ಘೋಷಿಸಲಾಗಿದೆ. ಪ್ರಜಾಪ್ರಭುತ್ವ ಮತ್ತು ದೇಶ ರಕ್ಷಣೆಯ ಪ್ರತೀಕವಾಗಿ ಅವರು ನಿಂತಿದ್ದಾರೆ. ರಷ್ಯಾದ ಅಪ್ರಚೋದಿತ ದಾಳಿಯ ವಿರುದ್ಧ ದೇಶದ ಹೋರಾಟವನ್ನು ಅವರು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ಈ ಗೌರವ ಜಗತ್ತಿನ ಆಗರ್ಭ ಸಿರಿವಂತ, ಅಮೆರಿಕದ ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರಿಗೆ ಸಂದಿತ್ತು.
- ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಮೀರಾಬಾಯಿ ಚಾನು, ಕೊಲಂಬಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲೂ ಬೆಳ್ಳಿ ಪದಕ ಗೆದ್ದಿದ್ದಾರೆ.
- ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು ತಕ್ಷಣದಿಂದ ಶೇ.0.35ರಷ್ಟು ಹೆಚ್ಚಿಸಿದೆ. ರೆಪೊ ದರವನ್ನು 35 ಮೂಲಾಂಶ, ಅಂದರೆ ಶೇ.6.25ಕ್ಕೆ ಹೆಚ್ಚಿಸಲು ಆರ್ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
- ಬಿಬಿಸಿಯು ಪ್ರಸಕ್ತ ವರ್ಷದ ‘100 ಪ್ರಭಾವಿ ಮಹಿಳೆ’ಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಜೋನಸ್, ಏರೋನಾಟಿಕಲ್ ಎಂಜಿನಿಯರ್ ಶಿರಿಷಾ ಬಂಡ್ಲಾ, ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಗೀತಾಂಜಲಿಶ್ರೀ ಹಾಗೂ ಸಮಾಜ ಸೇವಕಿ ಸ್ನೇಹಾ ಜವಳೆ ಸೇರಿ ನಾಲ್ವರು ಭಾರತೀಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಿರಿಷಾ ಬಂಡ್ಲಾ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸ್ನೇಹಾ ಜವಳೆ ಅವರು ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆ. ನಂತರ ಅವರು ಇದರ ವಿರುದ್ಧ ಹೋರಾಟ ಕೈಗೊಂಡಿದ್ದಾರೆ.
-
ಫೋಬ್ಸ್ ಏಷ್ಯಾ ಸಿದ್ಧಪಡಿಸಿರುವ ದಾನಿಗಳ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ಶಿವ ನಾಡರ್ ಮತ್ತು ಅಶೋಕ್ ಸೂಟ ಸ್ಥಾನ ಪಡೆದಿದ್ದಾರೆ. ಭಾರತ ಮೂಲದ ಮಲೇಷ್ಯಾ ಉದ್ಯಮಿ ಬ್ರಹ್ಮಲ್ ವಾಸುದೇವನ್ ಮತ್ತು ಅವರ ಪತ್ನಿ ಶಾಂತಿ ಕಂದಯ್ಯ ಅವರೂ ಈ ಪಟ್ಟಿಯಲ್ಲಿ ಇದ್ದಾರೆ.ಏಷ್ಯಾ–ಪ್ಯಾಸಿಫಿಕ್ ವಲಯದಲ್ಲಿ ದಾನ ಕಾರ್ಯದಲ್ಲಿ ವೈಯಕ್ತಿಕ ಬದ್ಧತೆಯನ್ನು ತೋರಿಸಿರುವವರ ಹೆಸರನ್ನು ಈ ಪಟ್ಟಿ ಒಳಗೊಂಡಿದೆ. ಅದಾನಿ ಅವರು ಜೂನ್ನಲ್ಲಿ ತಮಗೆ 60 ವರ್ಷ ತುಂಬಿದಾಗ ₹ 60 ಸಾವಿರ ಕೋಟಿಯನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ ಅಶೋಕ್ ಸೂಟ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳಿಗಾಗಿ ₹ 600 ಕೋಟಿ ನೀಡುವುದಾಗಿ ಹೇಳಿದ್ದಾರೆ