Published on: December 13, 2022

“ಬಾನ್ ದನಿ’’

“ಬಾನ್ ದನಿ’’

ಸುದ್ದಿಯಲ್ಲಿ ಏಕಿದೆ? ಪಠ್ಯ ಬೋಧನೆ ಕಾರ್ಯಕ್ರಮವು ಡಿಸೆಂಬರ್ 12 ರಿಂದ ಫೆಬ್ರವರಿ 23, 2023 ರವರೆಗೆ ಆಕಾಶವಾಣಿಯಲ್ಲಿ ನಡೆಯಲಿದೆ.

ಮುಖ್ಯಾಂಶಗಳು

  • 1ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಠ್ಯ ಬೋಧನೆ ನಡೆಯಲಿದ, ಬಾನ್ ದನಿ ಕಾರ್ಯಕ್ರಮದ ಮೂಲಕ ಪಠ್ಯ ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
  • ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಆಕಾಶವಾಣಿಯ ಮೂಲಕ ಪಠ್ಯ ಬೋಧನೆಯ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬಿಡುಗಡೆ ಮಾಡಿದೆ.
  • ಆಕಾಶವಾಣಿಯಲ್ಲಿ ಸೋಮವಾರದಿಂದ ಗುರುವಾರದ ವರೆಗೆ ಮಧ್ಯಾಹ್ನ 2.35ರಿಂದ 3 ಗಂಟೆಯ ವರೆಗೆ ಪ್ರಸಾರಗೊಳ್ಳಲಿದೆ.
  • 13 ಆಕಾಶವಾಣಿ ಕೇಂದ್ರಗಳು ಮತ್ತು 3 ವಿವಿಧ ಭಾರತಿ ಎಫ್ಎಂ ಕೇಂದ್ರಗಳಲ್ಲಿ ಏಕಕಾಲದಲ್ಲಿ “ಬಾನ್ ದನಿ’ ಪ್ರಸಾರವಾಗಲಿದೆ.
  • ಜತೆಗೆ ಮೊಬೈಲ್, ಆಲ್ ಇಂಡಿಯಾ ರೇಡಿಯೋ , ಬೆಂಗಳೂರು ಯೂಟ್ಯೂಬ್ ಚಾನೆಲ್ ಹಾಗೂ ಪ್ರಸಾರಭಾರತಿ ನ್ಯೂಸ್ ಆನ್ಏರ್ನಲ್ಲೂ ಆಲಿಸಲು ಅವಕಾಶ ಕಲ್ಪಿಸಲಾಗಿದೆ.

ಉಪಯುಕ್ತ ಪಾಠಗಳು: 1ರಿಂದ 9ನೇ ತರಗತಿಗಳಿಗೆ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ, ಇಂಗ್ಲಿಷ್ ಕಲಿಕೆ ಒಳಗೊಂಡ ಸಾ ಮಾನ್ಯ ಪಾಠಗಳಿರಲಿವೆ. 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಗಣಿತ ವಿಷಯಗಳ ಪಾಠ ಇರಲಿದೆ. ಗುಣಾತ್ಮಕ

ಉದ್ದೇಶ

  • ಶಿಕ್ಷಣದ ಗುರಿ ಸಾಧನೆಯೊಂದಿಗೆ ಡಿಜಿಟಲ್ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಆಕಾಶವಾಣಿಯ ಮೂಲಕ ಬಾನ್‌ ದನಿ ಕಾರ್ಯಕ್ರಮದಡಿ ಶಾಲೆಗಳಲ್ಲಿ ರೇಡಿಯೋ ಪಾಠಗಳನ್ನು ಡಿಸೆಂಬರ್ 2022 ಯಿಂದ ಪ್ರಸಾರ ಮಾಡಲಾಗುತ್ತಿದೆ.