Published on: December 13, 2022
ಚುಟುಕು ಸಮಾಚಾರ – 13 DECEMBER 2022
ಚುಟುಕು ಸಮಾಚಾರ – 13 DECEMBER 2022
- ಪೊವೆಲ್ ನಿಧನಕ್ಕೆ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಎಎಫ್ಐ ಸಂತಾಪ ಸೂಚಿಸಿದೆ. ಒಲಿಂಪಿಯನ್ ಹಾಗೂ 1970ರ ಏಷ್ಯನ್ ಕ್ರೀಡಾಕೂಟದ 4X100 ಮೀ. ರಿಲೇನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದ ಕೆನೆತ್ ಪೊವೆಲ್ ಅವರು ಅಥ್ಲೆಟಿಕ್ಸ್ ವಲಯದಲ್ಲಿ ‘ದಿ ಜಂಟ್ಲ್ಮನ್ ಸ್ಪ್ರಿಂಟರ್’ ಎಂದೇ ಜನಪ್ರಿಯರಾಗಿದ್ದರು. 1965 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಈ ಗೌರವಕ್ಕೆ ಪಾತ್ರರಾದ ರಾಜ್ಯದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ 2018 ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
- ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ವರದಿಯಾಗಿದೆ. ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.ಝೀಕಾ ವೈರಸ್ ಹಗಲಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ವೈರಸ್ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ.
- ಸಂರಕ್ಷಿತ ಅರಣ್ಯ ಪ್ರದೇಶದ ನಿರ್ವಹಣೆಯನ್ನು ಉತ್ತಮಗೊಳಿಸುವುದಕ್ಕಾಗಿ ಸಿದ್ಧಪಡಿಸಲಾಗಿರುವ ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2021 ಅನ್ನು ರಾಜ್ಯಸಭೆ ಅಂಗೀಕರಿಸಿದೆ. ಮಸೂದೆಯಲ್ಲಿರುವ ಪರಿಕಲ್ಪನೆಗಳು: ‘ಸಂರಕ್ಷಣೆ’ ಹಾಗೂ ‘ನಿರ್ವಹಣೆ’
- ನಿತ್ಯ ಪಠ್ಯ ಬೋಧನೆ ಕಾರ್ಯಕ್ರಮವು ಡಿಸೆಂಬರ್ 12 ರಿಂದ ಫೆಬ್ರವರಿ 23, 2023 ರವರೆಗೆ ಆಕಾಶವಾಣಿಯಲ್ಲಿ ನಡೆಯಲಿದೆ. 1ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಠ್ಯ ಬೋಧನೆ ನಡೆಯಲಿದ್ದು , ಬಾನ್ ದನಿ ಕಾರ್ಯಕ್ರಮದ ಮೂಲಕ ಪಠ್ಯ ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ