Published on: December 19, 2022
ಫಿಫಾ ವಿಶ್ವಕಪ್ 2022
ಫಿಫಾ ವಿಶ್ವಕಪ್ 2022
ಸುದ್ದಿಯಲ್ಲಿ ಏಕಿದೆ? ದೋಹಾದಲ್ಲಿ ನಡೆದ ಫುಟ್ ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಅರ್ಜೆಂಟೀನಾ ವಿಶ್ವ ಚಾಂಪಿಯನ ಆಯಿತು. ಕತಾರ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊರೊಕ್ಕೊ ತಂಡವನ್ನು ಸೋಲಿಸಿ ಕ್ರೊಯೇಷಿಯಾ 3ನೇ ಸ್ಥಾನಕ್ಕೇರಿದೆ.
ಮುಖ್ಯಾಂಶಗಳು
- ಫಿಫಾ ವಿಶ್ವಕಪ್ ನವೆಂಬರ್ 2022ಕ್ಕೆ ಕತಾರ್ನ ಅಲ್ ಖೋರಾ ಮೈದಾನದಲ್ಲಿ ವರ್ಣರಂಜಿತ ಸಮಾರಂಭದೊಂದಿಗೆ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಗಿತ್ತು.
- ಫಿಫಾ ವಿಶ್ವಕಪ್ ಕತಾರ್ 2022 ವಿಶ್ವದಾದ್ಯಂತ ಟಿವಿ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದೆ ಎಂದು ವರದದಿಯಾಗಿದೆ. ಅದರಲ್ಲಿಯೂ ಭಾರತದಲ್ಲಿ ಇದೇ ಮೊದಲು ಫುಟ್ಬಾಲ್ ಇಷ್ಟೊಂದು ಸಂಖ್ಯೆಯಲ್ಲಿ ವೀಕ್ಷಿಸಿದ್ದು, ಅದರಲ್ಲಿಯೂ ಟಿವಿ ಗಿಂತ ಡಿಜಿಟಲ್ ಮಾಧ್ಯಮದ ವೀಕ್ಷಣೆ ಹೆಚ್ಚಳವಾಗಿದೆ.
- ಫೈನಲ್ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಅರ್ಜೆಂಟೀನಾ ತಂಡ ಮೂರನೇ ಬಾರಿ ಫಿಫಾ ವಿಶ್ವಕಪ್ ಗೆದ್ದುಕೊಂಡಿದೆ. ಇದಕ್ಕೂ ಮುನ್ನ 1978 ಹಾಗೂ 1986ರಲ್ಲಿ ಅರ್ಜೆಂಟೀನಾ ತಂಡ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.
- ಕ್ರಿಸ್ಟಿಯಾನೋ ರೊನಾಲ್ಡೊ: ಪೋರ್ಚುಗಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದಾಖಲೆ ಪುಸ್ತಕಕ್ಕೆ ಮತ್ತೊಂದು ದಾಖಲೆಯನ್ನು ಸೇರಿಸಿದ್ದಾರೆ. ಸ್ಟಾರ್ ಆಟಗಾರ 2022ರ ಫುಟ್ಬಾಲ್ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 65ನೇ ನಿಮಿಷದಲ್ಲಿ ಘಾನಾ ವಿರುದ್ಧ ಗೋಲು ಗಳಿಸುವ ಮೂಲಕ ರೊನಾಲ್ಡೊ ವಿಶ್ವದಾಖಲೆ ನಿರ್ಮಿಸಿದರು. ಅವರು ಈಗ ಐದು ವಿಭಿನ್ನ ಫುಟ್ಬಾಲ್ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರರಾಗಿದ್ದಾರೆ. ಇವರು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದಿದ್ದಾರೆ.
- ಟ್ರೋಫಿ:ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ದೀಪಿಕಾ ಪಡುಕೋಣೆ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲಿದ್ದಾರೆ FIFA ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತಿಯರು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
- FIFA ವಿಷ್ವಕಪ್ ಟ್ರೋಫಿಯನ್ನು 18-ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಇದು175 ಕೆಜಿ ತೂಕವಿದೆ.
ಅಗ್ರ ನಾಲ್ಕು ತಂಡಗಳು
- ಚಾಂಪಿಯನ್ಸ್: ಅರ್ಜೆಂಟೀನಾ
- ರನ್ನರ್ ಅಪ್: ಫ್ರಾನ್ಸ್
- ಮೂರನೇ ಸ್ಥಾನ: ಕ್ರೊಯೇಷ್ಯಾ
- ನಾಲ್ಕನೇ ಸ್ಥಾನ:ಮೊರಾಕೊ
ಪ್ರಶಸ್ತಿಗಳು
- 2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 440 ದಶಲಕ್ಷ ಡಾಲರ್ ಮೊತ್ತದ ನಗದು ಬಹುಮಾನವನ್ನು ನೀಡಲಾಗಿದೆ. ಚಾಂಪಿಯನ್ಸ್ ಅರ್ಜೆಂಟೀನಾ ತಂಡಕ್ಕೆ 42 ದಶಲಕ್ಷ ಡಾಲರ್ ನಗದು ಬಹುಮಾನ ನೀಡಲಾಗಿದೆ.
- ಗೋಲ್ಡನ್ ಬೂಟ್: ಕೈಲಿಯನ್ ಎಂಬಾಪೆ (ಫ್ರಾನ್ಸ್)
- ಗೋಲ್ಡನ್ ಬಾಲ್:ಲಿಯೊನೆಲ್ ಮೆಸ್ಸಿ (ಅರ್ಜೆಂಟೀನಾ)
- ಗೋಲ್ಡನ್ ಗ್ಲೌಸ್:ಎಮಿಲಿಯಾನೊ ಮಾರ್ಟಿನೆಝ್ (ಅರ್ಜೆಂಟೀನಾ)
- ಫಿಫಾ ವಿಶ್ವಕಪ್ ಉದಯೋನ್ಮುಖ ಆಟಗಾರ: ಎನ್ಝೊ ಫೆರ್ನಾಂಡ್ಜ್ (ಅರ್ಜೆಂಟೀನಾ)
- ಫಿಫಾ ಫೈರ್ ಪ್ಲೇ ಪ್ರಶಸ್ತಿ: ಇಂಗ್ಲೆಂಡ್
- 2026ರಲ್ಲಿ ನಡೆಯುವ 22ನೇ ಆವೃತ್ತಿಯ ಫಿಫಾ ವಿಶ್ವ ಕಪ್ ಟೂರ್ನಿಗೆ, ಅಮೆರಿಕಾ, ಕೆನಡಾ ಹಾಗೂ ಮೆಕ್ಸಿಕೊ ಆತಿಥ್ಯ ವಹಿಸಲಿವೆ.