Published on: December 21, 2022

‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್‌

‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್‌

ಸುದ್ದಿಯಲ್ಲಿ ಏಕಿದೆ? ಗ್ರೀನ್ ಟೀ ನಲ್ಲಿರುವ ಪ್ರಯೋಜನಗಳನ್ನು ಮತ್ತಷ್ಟು ಬಳಕೆ ಮಾಡಿಕೊಂಡಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋದಕರು, ಇದರಿಂದ ‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್‌’ನ್ನು ಅಭಿವೃದ್ಧಿಪಡಿಸಿದ್ದಾರೆ.

 ಮುಖ್ಯಾಂಶಗಳು

  • ಗ್ರೀನ್ ಟೀ ರೋಗನಿರೋಧಕ ಶಕ್ತಿ ಹೆಚ್ಚಿಸಲು, ತೂಕ ಕಡಿಮೆ ಮಾಡಲು, ಹೊಟ್ಟೆಗೆ ಸಂಬಧಿಸಿದ ರೋಗಗಳ ನಿವಾರಿಸಲು ಮತ್ತು ಸೋಂಕಿನಿಂದ ದೂರವಿಡುವ ಈ ಗ್ರೀನ್ ಟೀ ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ.
  • ಆಂಟಿಮೈಕ್ರೊಬಿಯಲ್ ಏರ್ ಫಿಲ್ಟರ್‌ಗಳನ್ನು ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (NABL) ನಲ್ಲಿ ಪರೀಕ್ಷಿಸಲಾಗಿದೆ. ಇದು 99.24 ಶೇಕಡಾ ದಕ್ಷತೆಯೊಂದಿಗೆ ಕೋವಿಡ್‌ನ ಡೆಲ್ಟಾ ರೂಪಾಂತರವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಿರುವುದನ್ನು ಖಚಿತಪಡಿಸಿದೆ.
  • ಕೋವಿಡ್ ಸಮಯದಲ್ಲಿ ನಡೆದ ಈ ಸಂಶೋಧನೆಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (SERB) ಮತ್ತು SERB-ತಂತ್ರಜ್ಞಾನ ಅನುವಾದ ಪ್ರಶಸ್ತಿಗಳು (SERB-TETRA) ಬೆಂಬಲ ನೀಡಿದ್ದು, ಈ ವರ್ಷ ಇದಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.

ಯಾವ ಪದಾರ್ಥಗಳಿಂದ ಅಭಿವೃದ್ಧಿ:

  • ಸಂಶೋಧಕರು ಗ್ರೀನ್ ಟೀ ಯಲ್ಲಿ ಕಂಡುಬರುವ ಪಾಲಿಫಿನಾಲ್‌ಗಳು ಮತ್ತು ಪಾಲಿಕಯಾನಿಕ್ ಪಾಲಿಮರ್‌ಗಳಂತಹ ಪದಾರ್ಥಗಳಿಂದ ‘ಜರ್ಮ್ ಕಿಲ್ಲರ್’ ಏರ್ ಫಿಲ್ಟರ್‌ನ್ನು ಅಭಿವೃದ್ಧಿಪಡಿಸಿದ್ದಾರೆ.

ಎಲ್ಲಿ  ಬಳಕೆ :

  • ಈ ಫಿಲ್ಟರ್‌ಗಳನ್ನು ಏರ್ ಕಂಡಿಷನರ್‌ಗಳು, ಸೆಂಟ್ರಲ್ ಡಕ್ಟ್‌ಗಳು ಮತ್ತು ಏರ್ ಪ್ಯೂರಿಫೈಯರ್‌ಗಳಲ್ಲಿ ಬಳಸಬಹುದಾಗಿದೆ.

ಇದರ ಪ್ರಯೋಜನಗಳು

  • ಈ ಜರ್ಮ್ ಕಿಲ್ಲರ್ ನಿರ್ದಿಷ್ಟ ಸ್ಥಳಧಲ್ಲಿ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಈ ಫಿಲ್ಟರ್ ಗಳು ಗಾಳಿಯಿಂದ ಹರಡುವ ರೋಗಕಾರಕಗಳಿಂದ ಉಂಟಾಗುವ ರೋಗಗಳನ್ನು ತಡೆಯಲಿದೆ.
  • ಇದು ವಾಯು ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ಮತ್ತು ಸಾಂಕ್ರಾಮಿಕ ರೋಗವಾಗಿರುವ ಕೊರೋನಾ ವೈರಸ್ ನಂತಹ ಗಾಳಿಯಿಂದ ಹರಡುವ ರೋಗಕಾರಕಗಳ ಹರಡುವಿಕೆಯನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
  • ಏರ್ ಫಿಲ್ಟರ್‌ಗಳ ನಿರಂತರ ಬಳಕೆಯು ಸೂಕ್ಷ್ಮಾಣುಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನೂ ನಾಶಪಡಿಸಲಿದೆ.
  • ಫಿಲ್ಟರ್‌ನ ರಂಧ್ರಗಳು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಮುಚ್ಚಿ, ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮಾಣುಗಳ ಪುನರುಜ್ಜೀವನದಿಂದ ಎದುರಾಗುವ ಸೋಂಕನ್ನೂ ಇದು ತಡೆಯಲಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)

  • ಇದು ವಿಜ್ಞಾನ, ಎಂಜಿನಿಯರಿಂಗ್, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ಸಾರ್ವಜನಿಕ, ಡೀಮ್ಡ್, ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಇದು ಬೆಂಗಳೂರಿನಲ್ಲಿದೆ.
  • 1909 ರಲ್ಲಿ ಜಮ್ಸೆಟ್ಜಿ ಟಾಟಾ ಅವರ ಬೆಂಬಲದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ಸ್ಥಳೀಯವಾಗಿ “ಟಾಟಾ ಇನ್ಸ್ಟಿಟ್ಯೂಟ್” ಎಂದು ಕರೆಯಲಾಗುತ್ತದೆ.
  • ಇದಕ್ಕೆ 1958 ರಲ್ಲಿ ವಿಶ್ವವಿದ್ಯಾನಿಲಯ ಸ್ಥಾನಮಾನ ನೀಡಲಾಯಿತು.