ಜಾಂಬೂರಿ
ಜಾಂಬೂರಿ
ಸುದ್ದಿಯಲ್ಲಿ ಏಕಿದೆ? ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಅಂಡ್ ಗೈಡ್ಸ್ ಜಾಂಬೂರಿಯನ್ನು ಆಯೋಜಿಸಲಾಗಿದೆ.
ಮುಖ್ಯಾಂಶಗಳು
- ಇದೊಂದು ಅತ್ಯುತ್ತಮ ಕಾಲ ಸಂಗಮವಾಗಿದೆ.
- ರಾಜ್ಯದ 36 ಶೈಕ್ಷಣಿಕ ಜಿಲ್ಲೆಗಳಿಂದ ಹಾಗೂ ಇತರೆ ನೆರೆ ರಾಜ್ಯಗಳು ಮತ್ತು ಹೊರ ರಾಷ್ಟ್ರಗಳಿಂದ ಸುಮಾರು 50,000 ಸ್ಕೌಟ್ಸ್ ಅಂಡ್ ಗೈಡ್ಸ್ ಚಳಿವಳಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ.
- ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ
- ಧ್ಯೇಯ : ಏಕ ಭಾರತ ಶ್ರೇಷ್ಟ ಭಾರತ (ಸಂಸ್ಕೃತಿಯಿಂದ ಯುವ ಜನರ ಏಕತೆ)
ಗುರಿ
- ಯುವಜನತೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಗ್ರ ಏಕತೆಯನ್ನು ಸಾಧಿಸುವ ಗುರಿಯ್ಯನ್ನು ಹೊಂದಿದೆ. ಜಾಂಬೂರಿಯೂ ಬೇರೆ ಬೇರೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ವಿಶೇಷ ಜ್ಞಾನವನ್ನು ಗ್ರಹಿಸಲು, ಕೌಶಲ್ಯಗಳನ್ನು ಗಳಿಸಲು, ಸಂಪ್ರದಾಯ ಜೀವನ ಶೈಲಿಗಳನ್ನು ಪರಸ್ಪರ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯಗಳ ಸೂಕ್ಷ್ಮತೆಗಳಿಗೆ ಯುವ ಜನತೆ ಹೊಂದಿಕೊಳ್ಳುವ ಗುರಿಯನ್ನು ಪ್ರೆಅರಪಿಸುತ್ತದೆ.
ಚಟುವಟಿಕೆಗಳು
- ಸ್ಕಿಲ್ ಒ ರಾಮಾ, ಪಯೋನೀರಿಂಗ್ , ಸಾಂಸ್ಕೃತಿಕ ಸಂಜೆ, ಸಮುದ್ರತೀರ ಚಾರಣ, ಮ್ಯಾರೋಥನ್, ಯೋಗ ಧ್ಯಾನ, ಕೃಷಿಮೇಳ, ವಿಜ್ಞಾನ ಮೇಳ ಇನ್ನು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವಿರುತ್ತದೆ.
ಚರ್ಚೆಗಳು
- ಚರ್ಚೆಯು ಪ್ಯಾಟ್ರೋಲ್ ಇನ್ ಕೌನ್ಸಿಲ್ ಮತ್ತು ಸ್ಕೌಟ್ಸ್ ಗೈಡ್ ದಳಗಳ ನಾಯಕರ ಸಮ್ಮೇಳನಗಳ ಮೂಲಕ ನಡೆಯುತ್ತದೆ. ಈ ವೇದಿಕೆಯಲ್ಲಿ ಸ್ಕೌಟ್ಸ್ ಮತ್ತು ಗೈಡಗಳು/ ರೋವರ್ಸ್ – ರೆಂಜರ್ಸಗಳು ಚಳುವಳಿಯಲ್ಲಿ ಪ್ರಸ್ತುತ ಇರುವ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಮತ್ತು ಚಳುವಳಿಯ ವ್ಯಾಪ್ತಿಯನ್ನು ಹೇಗೆ ಹೆಚ್ಚಿಸಬೇಕೆಂಬುದನ್ನು ಚರ್ಚಿಸುತ್ತಾರೆ.
ಸ್ಕೌಟ್ ಚಳುವಳಿಯ ಆರಂಭ
- ಭಾರತದ ಸ್ಕೌಟ್ಸ್ ಅಂಡ್ ಗೈಡ್ಸ್ ಯುವ ಜನಾಂಗಕ್ಕಾಗಿ ಸ್ವಯಂ ಪ್ರೇರಿತವಾದ ರಾಜಕೀಯೇತರ, ಶೈಕ್ಷಣಿಕ ಸಂಸ್ಥೆಯಾಗಿದೆ.
- ಸ್ಥಾಪಿಸಿದವರು :1907 ರಲ್ಲಿ ಲಾರ್ಡ್ ಬೇಡೆನ್ ಪೊವೆಲ್
- ಚಳುವಳಿಯ ಉದ್ದೇಶ: ಯುವಜನಾಂಗವು ಸ್ಥಳೀಯ, ರಾಷ್ಟ್ರೀಯ, ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಜವಾಬ್ದಾರಿಯುತ ಸದಸ್ಯರಾಗಿ, ದೈಹಿಕ, ಭೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳ ಪರಿಪೂರ್ಣ ಅಭಿವೃದ್ದಿಗಾಗಿ ಶರ್ಮಿಸುವುದು.
ಭಾರತದಲ್ಲಿ ಸ್ಕೌಟ್ಸ್
- ಆರಂಭ : 1909
- ಪ್ರಾರಂಭಿಸಿದವರು : ಕ್ಯಾಪ್ಟನ್ ಟಿ ಹೆಚ್. ಬೇಕರ್
- ಮೊದಲ ಸ್ಕೌಟ್ಸ್ ಯುವತಿಯರ ತಂಡವು 1911 ರಲ್ಲಿ ಜಬ್ಬಲ್ ಪುರದಲ್ಲಿ ಪ್ರಾರಂಭವಾಯಿತು.
- ಸ್ವಾತಂತ್ರ್ಯ ನಂತರ ಭಾರತದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗಳನ್ನು ಒಂದಾಗಿ ನವೆಂಬರ್ 7 , 1950 ರಲ್ಲಿ “ದಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್” ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು.
ಕರ್ನಾಟದಲ್ಲಿ ಸ್ಕೌಟ್ಸ್
- 1917 ರಲ್ಲಿ ಸ್ಕೌಟ್ಸ್ ಚಳುವಳಿಯು ಗಂಡು ಮಕ್ಕಳಿಗಾಗಿ ಬಾಯ್ಸ್ ಸ್ಕೌಟ್ ಆಫ್ ಮೈಸೂರು ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು.
- ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಸ್ಥೆಯ ಪೋಷಕರಾಗಿದ್ದರು.
- ಯುವರಾಜರಾಗಿದ್ದ ಕಂಠೀರವ ನರಸಿಂಹ ರಾಜ ಒಡೆಯರ್ ಮುಖ್ಯ ಸ್ಕೌಟ್ ಆಗಿ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವ್ರು ಮುಖ್ಯ ಕಬ್ ಆಗಿ ಸೇವೆ ಸಲ್ಲಿಸಿದ್ದರು.
- 1927 ರಲ್ಲಿ ಮೈಸೂರು ಮಹಾರಾಣಿಯಾಗಿದ್ದ ಶ್ರೀಮತಿ ವಾಣಿವಿಲಾಸ ಅಮ್ಮಣ್ಣಿಯವರು ಚೀಫ್ ಗೈಡ್ ಆಗಿ ಗೈಡ್ ಚಳುವಳಿಯನ್ನು ಆರಂಭಿಸಿದರು. ಕರ್ನಾಟಕ ಸಂಸ್ಥೆಯು ಕರ್ನಾಟಕ ದರ್ಶನ ದಂತಹ ಹೊಸ ಕಾರ್ಯಕ್ರಮಗಳನ್ನು ಒಳಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆ : ಕರ್ನಾಟಕ ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ ಕರಾವಳಿ ಜಿಲ್ಲೆಯಾಗಿದೆ. ಮಂಗಳೂರು ನಗರ ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಮಂಗಳೂರಿನ ರಾಸಾಯನಿಕ ಗೊಬ್ಬರ ಕಾರ್ಖಾನೆ (ಎಂಸಿಎಫ್) ನಮ್ಮ ರಾಜ್ಯದ ಏಕೈಕ ರಾಸಾಯನಿಕ ಗೊಬ್ಬರ ಉತ್ಪಾದನಾ ಘಟಕವಾಗಿದೆ.
ಮೂಡಿಬಿದಿರೆ : ಜೈನಕಾಶಿ ಎಂಬ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿ ವಿಶ್ವ ಪ್ರಸಿದ್ದಿ ಪಡೆದಿರುವ ಸಾವಿರ ಕಂಬದ ಬಸದಿ(ತ್ರಿಭುವನ ಚೂಡಾಮಣಿ) ಮತ್ತು ಮಲ್ಲಿನಾಥ ಬಸದಿಗಳಿವೆ. ಭೂತಕೋಲ ಅಥವಾ ದೈವಶಕ್ತಿ ಆರಾಧನೆಯಂತಹ ವಿಶಿಷ್ಟವಾದ ಸಂಪ್ರದಾಯ ಆಚರಣೆಯಲ್ಲಿದೆ. ಕಂಬಳ ಅಥವಾ ಕೋಣಗಳ ಸ್ಪರ್ಧಾತ್ಮಕ ಓಟ ಜನಪ್ರಿಯ ಜಾನಪದ ಕ್ರೀಡೆಯಾಗಿದೆ. ಇದು ಅನೇಕ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿಂದ ಕೂಡಿದ್ದು ವಿದ್ಯಾಕಾಶಿಯಾಗಿ ಹೆಸರುವಾಸಿಯಾಗಿದೆ.