Published on: December 22, 2022
‘ಐಎನ್‌ಎಸ್ ವಾಗೀರ್’
‘ಐಎನ್‌ಎಸ್ ವಾಗೀರ್’
ಸುದ್ದಿಯಲ್ಲಿ ಏಕಿದೆ? ಸ್ಕಾರ್ಪೀನ್ ಸರಣಿಯ 5ನೇ ಜಲಾಂತರ್ಗಾಮಿ ನೌಕೆ ‘ಐಎನ್‌ಎಸ್ ವಾಗೀರ್’ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಮುಖ್ಯಾಂಶಗಳು
- 2020ರ ನ.16ರಂದು ಮೊದಲ ಬಾರಿ ಪ್ರಾರಂಭಿಸಲಾಯಿತು.
- ಸರಣಿಯ ಮೊದಲ ನಾಲ್ಕು ಜಲಾಂತರ್ಗಾಮಿಗಳು ಈಗಾಗಲೇ ಸೇವೆಯಲ್ಲಿವೆ. ಸರಣಿಯ ಕೊನೆಯ ಹಾಗೂ 6ನೇ ಜಲಾಂತರ್ಗಾಮಿ ನೌಕೆ ‘ಐಎನ್‌ಎಸ್ ವಾಗ್‌ಶೀರ್’ನ ಪ್ರಾಯೋಗಿಕ ಚಾಲನೆ ಇದೇ ಏಪ್ರಿಲ್ 20ರಂದು ಆರಂಭವಾಗಿದೆ.
ಉದ್ದೇಶ
- ಐಎನ್‌ಎಸ್ ವಾಗೀರ್ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕದನ ಸಾಮರ್ಥ್ಯ ಹೆಚ್ಚಳವಾಗಿದೆ. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾದ ಚಟುವಟಿಕೆಗಳು ಬೆದರಿಕೆಯಾಗಿ ಪರಿಣಮಿಸಿವೆ. ಹೀಗಾಗಿ ಕಡಲಗಡಿಯ ಮೇಲೆ ಭಾರತ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ವೇಗ ನೀಡಿದೆ.
ನೌಕೆ ಸಾಮರ್ಥ್ಯಗಳು
- ಉಳಿದ ನೌಕೆಗಳಿಗೆ ಹೋಲಿಸಿದರೆ, ಕಡಿಮೆ ಅವಧಿಯಲ್ಲಿ ಶಸ್ತ್ರಾಸ್ತ್ರ, ಸೆನ್ಸರ್ ಪರೀಕ್ಷೆಗಳು ಪೂರ್ಣ
- ಸಾಗರದಾಳದಲ್ಲಿ ಸ್ಫೋಟಕಗಳನ್ನು (ಮೈನ್‌ಗಳು) ಹಾಕುವ ಸಾಮರ್ಥ್ಯ
- ನೀರಿನಡಿಯಲ್ಲಿ ಜಲಾಂತರ್ಗಾಮಿ ನೌಕೆಗಳು ಮೇಲೆ ಮತ್ತು ನೀರಿನ ಮೇಲ್ಮೈನಲ್ಲಿ ಯುದ್ಧನೌಕೆಗಳ ಮೇಲೆ ದಾಳಿ ನಡೆಸುವ ಕ್ಷಿಪಣಿ ತಂತ್ರಜ್ಞಾನ ಇದೆ.
- ಗುಪ್ತಚರ ಮಾಹಿತಿ ಸಂಗ್ರಹಣೆ, ಸಾಗರದ ವ್ಯಾಪ್ತಿಯಲ್ಲಿ ನಿಗಾ ಇಡಲು ಸಹಾಯ ಮಾಡಿತ್ತದೆ
- ಎಲ್ಲ ವಾತಾವರಣದಲ್ಲೂ ಕಾರ್ಯಾಚರಣೆ ಸಾಮರ್ಥ್ಯ ಹೊಂದಿದೆ
- ದೀರ್ಘಾವಧಿಯವರೆಗೆ ನೀರಿನಾಳದಲ್ಲಿ ಕಾರ್ಯಾಚರಣೆ ಸಾಮರ್ಥ್ಯ ಹೊಂದಿದೆ
ತಂತ್ರಜ್ಞಾನ
- ಜಲಾಂತರ್ಗಾಮಿಯಲ್ಲಿ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ. ನೀರಿನಡಿಯಲ್ಲಿ ಗಾಳಿಯ ಸಹಾಯವಿಲ್ಲದೇ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ (ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಪ್ಲಾಂಟ್) ಈ ಜಲಾಂತರ್ಗಾಮಿಯ ಹೊಂದಿದೆ.
- ಸಾಗರದಲ್ಲಿ ಶಬ್ದ ನಿಗ್ರಹಿಸುವ ತಂತ್ರಜ್ಞಾನ, ವಿಕಿರಣ ಶಬ್ದ ಮಟ್ಟವನ್ನು ತಗ್ಗಿಸುವ ತಂತ್ರಜ್ಞಾನ ಬಳಸಲಾಗಿದೆ.
- ನೀರಿನಲ್ಲಿ ಕಾರ್ಯಾಚರಣೆ ನಡೆಸಲು ಅನುವಾಗುವ ವಿನ್ಯಾಸವಿದೆ.
- ನೌಕೆಯಲ್ಲಿ ಆಧುನಿಕ ಉಪಕರಣಗಳು, ಶಸ್ತ್ರಾಸ್ತ್ರ, ಸೆನ್ಸರ್, ಟಾರ್ಪೆಡೋ, ಆಧುನಿಕ ಕ್ಷಿಪಣಿಗಳಿವೆ.
- ಈ ಸರಣಿಯ ಜಲಾಂತರ್ಗಾಮಿಗಳು ಬೆದರಿಕೆಗಳನ್ನು ನಿಷ್ಫಲಗೊಳಿಸುವ ತಂತ್ರಗಾರಿಕೆಯಲ್ಲಿ ಮುಂದಿವೆ.
ಒಪ್ಪಂದ
- ಅಕ್ಟೋಬರ್ 2005 ರಲ್ಲಿ ಫ್ರಾನ್ಸ್ ನ ನೇವಲ್ ಗ್ರೂಪನೊಂದಿಗೆ75 ಶತಕೋಟಿ ಡಾಲರ್ ಒಪ್ಪಂದದಡಿ ಆರು ಸ್ಕ್ಯಾರ್ಪಿನ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗುತ್ತಿದೆ.
- ಮೊದಲ ಜಲಾಂತರ್ಗಾಮಿ ಐಎನ್ಎಸ ಕಲ್ವರಿಯನ್ನು ಡಿಸೆಂಬರ್ 2017, ಎರಡನೆಯ ಐಎನ್ಎಸ ಖಂಡೇರಿ ಸೆಪ್ಟೆಂಬರ್ 2019 , ಮೂರನೆಯದು ಐಎನ್ಎಸ ಕಾರಂಜ್ ಮಾರ್ಚ್ 2021 ರಲ್ಲಿ ಮತ್ತು ನಾಲ್ಕನೆಯದು ಐಎನ್ಎಸ ವೇಲಾ ನವೆಂಬರ್ 2021 ರಲ್ಲಿ ಸೇವೆ ಗೆ ಸೇರ್ಪಡೆಗೊಂಡಿತ್ತು