Published on: January 4, 2023
ಹಿಮಚಿರತೆ
ಹಿಮಚಿರತೆ
ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ (ಬಿಗ್ ಕ್ಯಾಟ್ಸ್) ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.
ಮುಖ್ಯಾಂಶಗಳು
- ಹಿಮಚಿರತೆಗಳ ಕುರಿತು ನಡೆದ ಮೊದಲ ಅಧ್ಯಯನದಲ್ಲಿ ಅವುಗಳ ಸಂಖ್ಯೆ ಏರಿಕೆಯಾಗಿರುವ ಮಹತ್ವದ ಅಂಶ ಬೆಳಕಿಗೆ ಬಂದಿದೆ.
- ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್-ಸ್ಪಿತಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸರ್ವೆಗಾಗಿ ನೇಮಕವಾಗಿದ್ದ ತಜ್ಞರ ತಂಡ ಈ ಕುರಿತು ಅಧ್ಯಯನ ನಡೆಸಿ ಇದೀಗ ಹಿಮಚಿರತೆಗಳ ಸಂಖ್ಯೆ ಏರಿಕೆಯಾಗಿರುವ ಕುರಿತು ಮಹತ್ವದ ಮಾಹಿತಿ ನೀಡಿದೆ.
- ಹಿಮಾಚಲ ಪ್ರದೇಶದ ಅರಣ್ಯ ಅಧಿಕಾರಿಗಳು ಈ ಅಧ್ಯಯನಕ್ಕೆ ಬರೊಬ್ಬರಿ ನಾಲ್ಕು ವರ್ಷಗಳನ್ನು ತೆಗೆದುಕೊಂಡಿದ್ದಾರೆ.
- ಹಿಮ ಚಿರತೆಗಳ ಸಂಖ್ಯೆಯ ಅಧ್ಯಯನವು ಟ್ರಯಲ್ ಮ್ಯಾಪಿಂಗ್, ಉಪಗ್ರಹ ಸಮೀಕ್ಷೆ, ಸೈನ್ ಸಮೀಕ್ಷೆ ಮತ್ತು ಇತರ ತಂತ್ರಗಳನ್ನು ಒಳಗೊಂಡಿದೆ. “ಈ ಪ್ರದೇಶದಲ್ಲಿ ಹಿಮಚಿರತೆಗಳ ಬೇಟೆಯ ವ್ಯಾಪ್ತಿ ಸಾಕಷ್ಟು ಇದೆ ಎಂದು ಅಧ್ಯಯನವು ಸೂಚಿಸುತ್ತದೆ.
- ‘ಸುರಕ್ಷಿತ ಹಿಮಾಲಯ ಪ್ರಾಜೆಕ್ಟ್’ ಅಡಿಯಲ್ಲಿ ಪರಿಸರ ಸಚಿವಾಲಯ ಮತ್ತು ಹಿಮಾಚಲ ವನ್ಯಜೀವಿ ಇಲಾಖೆಯು ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಮಾದರಿಯನ್ನು ಜಾರಿಗೆ ತರುತ್ತಿದೆ.
- ಅಧ್ಯಯನ : ಮೈಸೂರು ಮೂಲದ ನೇಚರ್ ಕನ್ಸರ್ವೇಶನ್ ಫೌಂಡೇಶನ್ (ಎನ್‌ಸಿಎಫ್) ಸಹಾಯದಿಂದ ಹಿಮಾಚಲ ಪ್ರದೇಶದ ವನ್ಯಜೀವಿಗಳ ಕುರಿತು ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದ್ದು, ಪ್ರಸ್ತುತ ಹಿಮ ಚಿರತೆಯ ಸಂಖ್ಯೆ 52 ರಿಂದ 73 ರ ನಡುವೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.
- ಅಂಚಿನಲ್ಲಿರುವ ತಳಿಗಳ ಪಟ್ಟಿ: ಅಪರೂಪದ ವನ್ಯಮೃಗಗಳು. ಇವುಗಳ ಚರ್ಮ, ಮೂಳೆ ಮತ್ತು ದೇಹದ ಭಾಗಗಳಿಗೆ ಹೆಚ್ಚು ‘ಬೇಡಿಕೆ’ ಇರುವುದರಿಂದ ಇವುಗಳ ಪ್ರಾಣಕ್ಕೆ ಸಂಚಕಾರ ಇದ್ದೇ ಇರುತ್ತದೆ. ಹಾಗಾಗಿ IUCN ರೆಡ್ ಲಿಸ್ಟ್‌ನಲ್ಲಿ ಈ ಪ್ರಾಣಿಯನ್ನು ದುರ್ಬಲ ಎಂದು ಪಟ್ಟಿ ಮಾಡಲಾಗಿದೆ.
ಹಿಮ ಚಿರತೆ
- ಔನ್ಸ್ ಎಂದೂ ಕರೆಯಲ್ಪಡುವ, ದೊಡ್ಡ ಉದ್ದನೆಯ ಕೂದಲಿನ ಏಷ್ಯನ್ ಬೆಕ್ಕು, ಫೆಲಿಡೆ ಕುಟುಂಬದಲ್ಲಿ ಪ್ಯಾಂಥೆರಾ ಉನ್ಸಿಯಾ ಅಥವಾ ಉನ್ಸಿಯಾ ಉನ್ಸಿಯಾ ಎಂದು ವರ್ಗೀಕರಿಸಲಾಗಿದೆ.
- ವೈಜ್ಞಾನಿಕ ಹೆಸರು : ಫೆಲಿಡೆ
- ಜೀವಿತಾವಧಿ: ಕಾಡಿನಲ್ಲಿ: 10 ರಿಂದ 13 ವರ್ಷಗಳು, ಪ್ರಾಣಿಸಂಗ್ರಹಾಲಯಗಳಲ್ಲಿ: ಅವರು 22 ವರ್ಷಗಳವರೆಗೆ ಬದುಕುತ್ತವೆ .
- ಸಂತಾನಾಭಿವೃದ್ದಿ: ಜನವರಿಯಿಂದ ಮಾರ್ಚ್
- ಗರ್ಭಾವಸ್ಥೆಯ ಅವಧಿ :93 -110 ದಿನಗಳು
- ಹಿಮ ಚಿರತೆಯು ಒಂದು ಮಧ್ಯಮ ಗಾತ್ರದ ದೊಡ್ಡ ಬೆಕ್ಕು, ಇದು ಹೆಚ್ಚಾಗಿ ಮಧ್ಯ ಹಾಗೂ ದಕ್ಷಿಣ ಏಷ್ಯಾದ ಬೆಟ್ಟಗಳ ಸಾಲುಗಳಲ್ಲಿ ಕ೦ಡುಬರುತ್ತದೆ.
- ಇದು ಆದಷ್ಟು ಮರೆಯಲ್ಲಿದ್ದು ರಹಸ್ಯವಾಗಿಯೇ ಜೀವನ ನಡೆಸುತ್ತವೆ ಅನ್ನೋದು ವಿಶೇಷ.
- ಈ ಹಿಮ ಚಿರತೆಗಳ ಪ್ರಮುಖ ಪ್ರದೇಶವೆಂದರೆ ಟ್ರಾನ್ಸ್-ಹಿಮಾಲಯನ್ ಪ್ರದೇಶದ ಶೀತ ಮರುಭೂಮಿ. ಈ ಹಿಮಚಿರತೆ ವಾಸಿಸೋದು ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರ್ವತ ಶ್ರೇಣಿಗಳಲ್ಲಿ ಮಾತ್ರ. ಈ ಹಿಂದೆ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ ಹಿಮಚಿರತೆಗಳ ಉಪಸ್ಥಿತಿ ಇದೀಗ ಲಾಹೌಲ್-ಸ್ಪಿತಿಯಿಂದ ನೆರೆಯ ಕಿನ್ನೌರ್ ಮತ್ತು ಪಾಂಗಿ ಪ್ರದೇಶಗಳಿಗೂ ವಿಸ್ತರಿಸಿದೆ.