Published on: January 5, 2023

ಗಗನ್ ಯಾನ್

ಗಗನ್ ಯಾನ್

ಸುದ್ದಿಯಲ್ಲಿ ಏಕಿದೆ? ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)  2024 ರಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಮುಖ್ಯಾಂಶಗಳು

  • ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಹೊಸ ಸಾಧನೆಗಳನ್ನು ಮಾಡುತ್ತಿದೆ
  • ಗಗನ್ ಯಾನ್ 2022 ರಲ್ಲೇ ಸಾಕಾರವಾಗಬೇಕಿತ್ತು ಆದರೆ ಕೋವಿಡ್-19 ನಿಂದಾಗಿ ವಿಳಂಬವಾಗಿದೆ, 2024 ರಲ್ಲಿ ಎರಡು ಪ್ರಾಥಮಿಕ ಉಡಾವಣೆಗಳಾಗಲಿವೆ ಏಕೆಂದರೆ ಗಗನ್ ಯಾನ್ ರಾಕೆಟ್ ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ತೆರಳಿಂದತೆಯೇ ಸುರಕ್ಷಿತವಾಗಿ ವಾಪಸ್ಸಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.
  • ಮತ್ತೊಂದು ಪ್ರಯೋಗದಲ್ಲಿ ಮನುಷ್ಯರಿಲ್ಲದೇ ಕೇವಲ ರೋಬೋಟ್ ರಾಕೆಟ್ ನಲ್ಲಿರಲಿದ್ದು, ಎರಡೂ ಪ್ರಯೋಗಗಳು ಯಶಸ್ವಿಯಾದ ನಂತರ ಮೂರನೇ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಕಾರಗೊಳ್ಳಲಿದೆ.

ಗಗನ್ ಯಾನ್ ಮಿಷನ್

  • ಇಸ್ರೋ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ್ ಯಾನ್ ಮಿಷನ್ ಗೆ ಸಜ್ಜುಗೊಳ್ಳುತ್ತಿದೆ.
  • ಇದರ ಭಾಗವಾಗಿ ಇಸ್ರೋ ಮೊದಲು ಲೇಡಿ ರೋಬೋಟ್ ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಿದೆ. ‘ವ್ಯೋಮಮಿತ್ರ’ ಎಂಬ ಹೆಸರನ್ನು ಈ ರೋಬೋಟ್ ಗೆ ಇಡಲಾಗಿದೆ.
  • ವ್ಯೋಮ ಮಿತ್ರ ಎಂಬುದು ಸಂಸ್ಕೃತ ಶಬ್ದವಾಗಿದ್ದು, ವ್ಯೋಮ (ಬಾಹ್ಯಾಕಾಶ) ಮಿತ್ರ ಎಂದರೆ ಸ್ನೇಹಿತ ಎಂಬ ಅರ್ಥ ಇದೆ.
  • ಬಾಹ್ಯಾಕಾಶ ನೌಕೆಯಲ್ಲಿ ಗಗನ ಯಾತ್ರಿಗಳಳೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದ್ದೇನೆ, ಅವರನ್ನು ಗುರುತಿಸಿ, ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಲ್ಲೆ ಎಂದು ವ್ಯೋಮಮಿತ್ರ ತನ್ನನ್ನು ತಾನು ಪರಿಚಯ ಮಾಡಿಕೊಂಡಿದೆ.
  • ಮಾನವ ಕ್ರಿಯೆಗಳನ್ನು ಅನುಸರಿಸುವ ಸಾಮರ್ಥ್ಯವನ್ನು ಈ ರೋಬೋಟ್ ಹೊಂದಿದೆ. ಎಲ್ಲಾ ವ್ಯವಸ್ಥೆಗಳೂ ಸರಿ ಇದೆಯೇ ಎಂದು ಪರೀಕ್ಷಿಸಲು ಸಾಮರ್ಥ್ಯ ಹೊಂದಿದೆ.