Published on: January 6, 2023
ಚುಟುಕು ಸಮಾಚಾರ – 6 ಜನವರಿ 2023
ಚುಟುಕು ಸಮಾಚಾರ – 6 ಜನವರಿ 2023
- ಏಲಕ್ಕಿ ನಗರವೆಂದೆ ಪ್ರಸಿದ್ಧಿಯಾಗಿರುವ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2023 ಜನೇವರಿ 6,7 ಮತ್ತು 8 ರಂದು ನಡೆಯಲಿದೆ. ಸಮ್ಮೇಳನಾಧ್ಯಕ್ಷರು : ಡಾ ದೊಡ್ಡರಂಗೇಗೌಡ
- ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ್ ದರ್ಶನ್ ಯೋಜನೆ ಆರಂಭಿಸಿದ್ದು, ಈ ಸ್ವದೇಶ್ ದರ್ಶನ್ 2.0 ಯೋಜನೆಗೆ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿವೆ.
- ಒಡಿಶಾ ಸಿಎಂ ನವೀನ್ ಪಟ್ನಾಯಕ್ ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂನ್ನು ರೂರ್ಕೆಲಾದಲ್ಲಿ ಉದ್ಘಾಟಿಸಿದ್ದಾರೆ. ಕ್ರೀಡಾಂಗಣಕ್ಕೆ ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಮ್ (ಬಿಎಂಹೆಚ್ಎಸ್) ಎಂದು ನಾಮಕರಣ ಮಾಡಲಾಗಿದೆ. ಕ್ರೀಡಾಂಗಣದ ವಿನ್ಯಾಸ: ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರ್ಗಳು ಸಿದ್ಧಪಡಿಸಿದ್ದಾರೆ.
- ‘ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳನ್ನು ಆರಂಭಿಸುವ ಮತ್ತು ನಿರ್ವಹಿಸುವ’ ಕರಡು ನಿಯಮಗಳು :ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ಅನ್ನು ಆರಂಭಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ದ ಒಪ್ಪಿಗೆ ಪಡೆಯಬೇಕಾಗುತ್ತದೆ ಮತ್ತು ಆರಂಭಿಕ ಅನುಮೋದನೆಯು 10 ವರ್ಷಗಳವರೆಗೆ ಮಾತ್ರ ಇರುತ್ತದೆ. ದೇಶದಲ್ಲಿ ಕ್ಯಾಂಪಸ್ಗಳನ್ನು ಹೊಂದಿರುವ ವಿದೇಶಿ ವಿಶ್ವವಿದ್ಯಾಲಯಗಳು ಪೂರ್ಣ ಅವಧಿಯ ಕೋರ್ಸ್ ಗಳನ್ನು ಭೌತಿಕ ಕ್ರಮದಲ್ಲಿ ಮಾತ್ರ ನೀಡಬಹುದು. ಆನ್ಲೈನ್ ಅಥವಾ ದೂರಶಿಕ್ಷಣಕ್ಕೆ ಅವಕಾಶ ಇಲ್ಲ.ಈ ವಿಶ್ವವಿದ್ಯಾಲಯಗಳು ತಮ್ಮದೇ ಆದ ಪ್ರವೇಶ ಪ್ರಕ್ರಿಯೆ ಮತ್ತು ಶುಲ್ಕ ರಚನೆಯನ್ನು ರೂಪಿಸಲು ಸ್ವಾತಂತ್ರ್ಯವನ್ನುಹೊಂದಿವೆ