Published on: January 9, 2023
ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಸುದ್ದಿಯಲ್ಲಿ ಏಕಿದೆ? ಏಲಕ್ಕಿ ನಗರಿ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾವೇಶ ನಡೆಯಿತು. ಸಕ್ಕರೆ ನಾಡು ಮಂಡ್ಯದಲ್ಲಿ ಮುಂದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
ಮುಖ್ಯಾಂಶಗಳು
- ಗಡಿನಾಡು ಮತ್ತು ಗಡಿಯಾಚೆ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿಪ್ರಾಧಿಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಅಲ್ಲಿನ ಶಾಲೆ, ಕನ್ನಡ ಕೇಂದ್ರಗಳ ಅಭಿವೃದ್ಧಿಗೆ 25 ಕೋಟಿ ರೂ. ಕೊಡಲಾಗಿದೆ. ಆ ಭಾಗದ ಜನರ ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಈ ವರ್ಷ 100 ಕೋಟಿ ರೂ. ಕೊಡಲಾಗುವುದು.
ಸಮ್ಮೇಳನದ ನಿರ್ಣಯಗಳು
1) ಕನ್ನಡ ಸಮಗ್ರ ಭಾಷಾ ಅಭಿವೃದ್ಧಿವಿಧೇಯಕ ಸುಗ್ರಿವಾಜ್ಞೆ ಮೂಲಕ ಜಾರಿಗೆ ಬರಬೇಕು
2) ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಮಹಾಜನ ವರದಿ ಸುಪ್ರೀಂಕೋರ್ಟ್ನಲ್ಲಿವಿಚಾರಣೆ ಹಂತದಲ್ಲಿದೆ; ನ್ಯಾಯಾಲಯದ ತೀರ್ಪಿನಂತೆ ಸೂಕ್ತಕ್ರಮವನ್ನು ಸರ್ಕಾರ ಕೈಗೊ ಳ್ಳಬೇಕು
3) ಕನ್ನಡ ಹೋರಾಟಗಾರರ ಮೇಲಿನ ಮೊಕದಮ್ಮೆಗಳನ್ನು ಹಿಂಪಡೆಯಬೇಕು
4) ಕನ್ನಡ ಭಾಷೆಯ ಮೇಲಿನ ಹಿಂದಿ ಹೇರಿಕೆಗೆ ಖಂಡನೆ
5) ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಕಸಾಪ ಸಹಯೋಗದೊಂದಿಗೆ ನೆರವೇರಿಸಬೇಕು.
6) ವಲಸಿಗರು ಕನ್ನಡ ಕಲಿಯಲು ಕನ್ನಡ ಕಲಿಸುವ ಅಭಿಯಾನ ಶುರು ಮಾಡಲಾಗುವುದು.