Published on: January 11, 2023

ಹೈಡ್ರೋ ಜನ್ ಚಾಲಿತ ರೈಲು

ಹೈಡ್ರೋ ಜನ್ ಚಾಲಿತ ರೈಲು


ಸುದ್ದಿಯಲ್ಲಿ ಏಕಿದೆ? ಚೀನಾದಲ್ಲಿಇದೇ ಮೊದಲ ಬಾರಿಗೆ ಜಲಜನಕ (ಹೈಡ್ರೋ ಜನ್) ಆಧಾರಿತ ಸೆಮಿ ಹೈಸ್ಪೀಡ್ ಸ್ಪೀಡ್ ಪ್ಯಾಸೆಂಜರ್ ರೈಲು ಚಾಲನೆಗೊಂಡಿದೆ.


ಮುಖ್ಯಾಂಶಗಳು

ತಯಾರಕರು: ಚೆಂಗ್ಡುರೈಲ್ವೆ ಗ್ರೂಪ್ ಮತ್ತುಚಾಂಗ್ಚುನ್ ಸಿಆರ್ಆರ್ಸಿ ಜಂಟಿಯಾಗಿ ಹೈಡ್ರೋ ಜನ್ ಚಾಲಿತ ನಾಲ್ಕು ರೈಲುಗಳನ್ನು ಅಭಿವೃದ್ಧಿಪಡಿಸಿವೆ.

ವೇಗ : ಒಂದು ತಾಸಿಗೆ 160 ಕಿ,ಮೀ. ಸಾಮರ್ಥ್ಯ:  ಈ ರೈಲು 1,502 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ.

ಈ ರೈಲಿನ ವಿಶೇಷತೆಗಳು

  • ಒಮ್ಮೆ ಹೈಡ್ರೋ ಜನ್ ಇಂಧನ ಕೋಶವನ್ನು ಚಾರ್ಜ್ ಮಾಡಿದರೆ 600 ಕಿ.ಮೀ. ದೂರ ಕ್ರಮಿಸುತ್ತದೆ.
  • ಚಾಲಕ ರಹಿತವಾಗಿಯೂ ಚಾಲನೆಯಾಗುವ ಸ್ವಯಂ ಚಾಲಿತ ವ್ಯವಸ್ಥೆಹೊಂದಿದೆ.
  • ಅತ್ಯಾಧುನಿಕ ಮತ್ತುಸೂಕ್ಷ್ಮ ಸಂವೇದಿಕ, ನಿಗಾ ವ್ಯವಸ್ಥೆ, ಗರಿಷ್ಠಸುರಕ್ಷತಾ ವಿಧಾನಗಳು 5ಜಿ ಮೊಬೈಲ್ ನೆಟ್ವರ್ಕ್ ಗಳಿಂದ ಕೂಡಿದೆ.
  • ಹೈಡ್ರೋ ಜನ್ ಚಾಲಿತ ರೈಲನ್ನು ವಿದ್ಯುದೀಕರಣ ಆಗಿಲ್ಲದ ಮಾರ್ಗದಲ್ಲೂಬಳಬಹುದಾಗಿದೆ.
  • ಹೈಡ್ರೋ ಜನ್ ಇಂಧನ ಪರಿವರ್ತನೆ: ಹೈಡ್ರೋಜನ್ ಆಧಾರಿತ ಇಂಧನದಲ್ಲಿ ನೀರಿನಿಂದ ಜಲಜನಕ ಮತ್ತುಆಮ್ಲಜನಕಗಳ ವಿಘಟನೆ ವೇಳೆ ಉಂಟಾಗುವ ಎಲೆಕ್ಟ್ರೋ ಕೆಮಿಕಲ್ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಇಂಧನವಾಗಿ ಪರಿವರ್ತನೆ ಆಗುತ್ತದೆ. ಇದು ಗರಿಷ್ಠಮಟ್ಟದಲ್ಲಿಪರಿಸರಸ್ನೇಹಿ ಆಗಿದೆ.

ನಿಮಗಿದು ತಿಳಿದಿರಲಿ

  • ಇದು ಏಷ್ಯಾದಲ್ಲಿಮೊದಲ ಮತ್ತುವಿಶ್ವದಲ್ಲಿಎರಡನೇ ಹೈಡ್ರೋ ಜನ್ ರೈಲು ಕೂಡ ಆಗಿದೆ.
  • 2022ರ ಆಗಸ್ಟ್ ನಲ್ಲಿ ಜರ್ಮನಿಯಲ್ಲಿವಿಶ್ವದ ಮೊದಲ ಹೈಡ್ರೋ ಜನ್ ರೈಲು ಕಾರ್ಯಾರಂಭ ಮಾಡಿತ್ತು.