Published on: January 12, 2023
‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ (ಇಆರ್ಬಿಎಸ್)
‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ (ಇಆರ್ಬಿಎಸ್)
ಸುದ್ದಿಯಲ್ಲಿ ಏಕಿದೆ? ಭೂಮಿಯ ಸುತ್ತ 38 ವರ್ಷಗಳ ಕಾಲ ಸುತ್ತು ಹಾಕಿದ್ದ, ನಿಷ್ಕ್ರಿಯ ಉಪಗ್ರಹವು ನಿರೀಕ್ಷೆಯಂತೇ ಭೂಮಿಗೆ ಬಿದ್ದಿದೆ ಎಂದು ನಾಸಾ ತಿಳಿಸಿದೆ.
ಮುಖ್ಯಾಂಶಗಳು
- ಉಪಗ್ರಹವು ಅಲಾಸ್ಕಾದಿಂದ ಕೆಲವು ನೂರು ಮೈಲುಗಳಷ್ಟು ದೂರದ ಬೇರಿಂಗ್ ಸಮುದ್ರಕ್ಕೆ ಬಿದ್ದಿದೆ ಎಂದು ರಕ್ಷಣಾ ಇಲಾಖೆ ದೃಢಪಡಿಸಿತು.
- ಅದರ ಅವಶೇಷಗಳಿಂದ ಯಾರಿಗೂ ಹಾನಿಯಾಗಿಲ್ಲ.
ಉಪಗ್ರಹದ ಮಾಹಿತಿ :
- 1984ರಲ್ಲಿ ಈ ಉಪಗ್ರವನ್ನು ವಿಶೇಷವಾಗಿ ಕಕ್ಷೆಗೆ ಸೇರಿಸಲಾಗಿತ್ತು.
- ತೂಕ: 2,450 ಕಿಲೋ ಗ್ರಾಂ
- ಇಆರ್ಬಿಎಸ್ ಎಂದು ಕರೆಯಲಾಗುವ ‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್ ಮೂಲಕ ನಭಕ್ಕೆ ಹಾರಿಸಲಾಗಿತ್ತು.
- ಅದರ ನಿರೀಕ್ಷಿತ ಜೀವಿತಾವಧಿಯು ಎರಡು ವರ್ಷಗಳಷ್ಟೇ ಆಗಿದ್ದವು.
- ಆದರೆ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ, ಅಲ್ಲಿಯ ವರೆಗೂ ಓಝೋನ್ ಮತ್ತು ವಾತಾವರಣದ ಇತರ ಮಾಪನಗಳನ್ನು ಮಾಡುತ್ತಲೇ ಇತ್ತು.
- ಭೂಮಿಯು ಸೂರ್ಯನಿಂದ ಹೀರಿಕೊಳ್ಳುವ ಶಕ್ತಿ ಮತ್ತು ಹೊರಸೂಸುವ ಶಕ್ತಿಯನ್ನು ಅಧ್ಯಯನ ಮಾಡುವ ಉಪಗ್ರಹವನ್ನು ‘ಅರ್ತ್‌ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್’ ಎನ್ನಲಾಗುತ್ತದೆ. ಅದನ್ನೇ ಈ ಉಪಗ್ರಹವೂ ಮಾಡಿತ್ತು.
- ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್ ಅವರು ಚಾಲೆಂಜರ್ ನೌಕೆಯ ‘ರೋಬೋಟ್ ಆರ್ಮ್’ ಎಂಬ ಸಾಧನ ಬಳಸಿ ಇಆರ್ಬಿಎಸ್ ಅನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು.
- ಅದೇ ಕಾರ್ಯಾಚರಣೆಯಲ್ಲಿ ಅಮೆರಿಕದ ಮಹಿಳಾ ಗಗನಯಾನಿ ಕ್ಯಾಥರಿನ್ ಸುಲ್ಲಿವನ್ ಅವರು ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದರು. ಇಬ್ಬರು ಮಹಿಳಾ ಗಗನಯಾತ್ರಿಗಳು ಒಟ್ಟಿಗೆ ಬಾಹ್ಯಾಕಾಶಕ್ಕೆ ಹಾರಿದ್ದು ಅದೇ ಮೊದಲ ಬಾರಿಯೂ ಆಗಿತ್ತು.