Published on: January 17, 2023

75ನೇ ಸೇನಾ ದಿನ

75ನೇ ಸೇನಾ ದಿನ


ಸುದ್ದಿಯಲ್ಲಿ ಏಕಿದೆ? ಜನೆವರಿ 15, ಭಾರತೀಯ ಸೇನೆಯ 75ನೇ ಸೇನಾ ದಿನ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಿತು. ರಾಷ್ಟ್ರಕ್ಕೇ ನಿಸ್ವಾರ್ಥ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಣೆ ಮಾಡಲಾಯಿತು


ಮುಖ್ಯಾಂಶಗಳು

  • ಸೇನೆಯ ಮುಖ್ಯಸ್ಥರಾದ ಜನರಲ್‌ ಮನೋಜ್‌ ಪಾಂಡೆ ಗೌರವ ನಮನ ಸಲ್ಲಿಸಿದರು.
  • ಸೇನಾ ಸಿಬ್ಬಂದಿ ಮತ್ತು ಘಟಕಗಳ ಶೌರ್ಯ ಮತ್ತು ಅರ್ಹ ಸೇವೆಯನ್ನು ಗುರುತಿಸಿ ಸೇನಾ ಮುಖ್ಯಸ್ಥರಿಂದ ಹಲವಾರು ಶೌರ್ಯ ಪ್ರಶಸ್ತಿಗಳು ಮತ್ತು ಘಟಕಗಳಿಗೆ ಶ್ಲಾಘನಪತ್ರಗಳನ್ನು ಸಹ ನೀಡಲಾಗುತ್ತದೆ.
  • ಬೆಂಗಳೂರಿನಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸುವುದು ದಕ್ಷಿಣ ಭಾರತದ ಜನರ ಶೌರ್ಯ, ತ್ಯಾಗ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸುವುದಾಗಿದೆ ಮತ್ತು ಇದು ಕರ್ನಾಟಕ ಮೂಲದ ಫೀಲ್ಡ್ ಮಾರ್ಷಲ್. ಕೆ ,ಎಂ. ಕಾರ್ಯಪ್ಪ ಅವರಿಗೆ ಸಲ್ಲಿಸುವ ಗೌರವದ ದ್ಯೋತಕವಾಗಿದೆ.

ಉದ್ದೇಶ:  ಇದು ರಾಷ್ಟ್ರದ ರಾಜಧಾನಿಯ ಹೊರಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳನ್ನು ನಡೆಸುವ ನಿರ್ಧಾರಕ್ಕೆ ಅನುಗುಣವಾಗಿದ್ದು, ನಾಗರಿಕರ ವ್ಯಾಪಕವಾಗಿ ತೋರ್ಪಡಿಸುವ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ಹೆಚ್ಚಿನ ಉದ್ದೇಶ ಹೊಂದಿದೆ.

ಸೇನಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮಗಳು

  • ರಾಷ್ಟ್ರ ನಿರ್ಮಾಣಕ್ಕೆ ಭಾರತೀಯ ಸೇನೆಯ ಬದ್ಧತೆಯನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಸರಣಿಯನ್ನು ದಕ್ಷಿಣ ಕಮಾಂಡ್‌ನ ಸೇನಾ ಘಟಕಗಳು ಮುಂದಿನ ಒಂದು ತಿಂಗಳ ಕಾಲ ಸಮಾಜದ ಎಲ್ಲಾ ವರ್ಗಗಳ ನಾಗರಿಕರ ಸಮಗ್ರ ಪಾಲ್ಗೊಳ್ಳುವಿಕೆಯೊಂದಿಗೆ ಆಯೋಜಿಸಲಾಗಿತ್ತು

“ದಕ್ಷಿಣ ಸ್ಟಾರ್ ವಿಜಯದ ಓಟ – 2022”:

  • ಧೇಯಸೈನಿಕರಿಗಾಗಿ ಓಟ – ಸೈನಿಕರೊಂದಿಗೆ ಓಟ, ಇದರಲ್ಲಿ ದಕ್ಷಿಣ ಕಮಾಂಡ್ ವ್ಯಾಪ್ತಿಯ 18 ಕೇಂದ್ರಗಳಲ್ಲಿ ಸುಮಾರು 50,000 ಮಂದಿ ಭಾಗವಹಿಸಿದ್ದರು (ಜೈಸಲ್ಮೇರ್, ಅಹಮದಾಬಾದ್, ಜೋದ್‌ಪುರ್, ಭುಜ್ & ಅಲ್ವಾರ್, ಭೋಪಾಲ್, ಸಿಕಂದ್ರಾಬಾದ್, ಝಾನ್ಸಿ, ಗ್ವಾಲಿಯರ್, ಚೆನ್ನೈ, ಬೆಂಗಳೂರು, ಬೆಳಗಾವಿ, ವೆಲ್ಲಿಂಗ್ಟನ್ (ಟಿಎನ್), ಪುಣೆ, ನಾಸಿಕ್, ನಾಗ್ಪುರ, ಅಹಮದಾಬಾದ್ ಮತ್ತು ಮುಂಬೈ)
  • ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜದೊಂದಿಗೆ ಸಮನ್ವಯದಲ್ಲಿ ಭಾರತೀಯ ಸೇನೆಯ ರಾಷ್ಟ್ರದ ಬದ್ಧತೆಯನ್ನು ಪ್ರತಿಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು:-

ರಕ್ತದಾನ

  • ಧೇಯ: ರಕ್ತದಾನ ಮಾಡಿ – ಜೀವ ಉಳಿಸಿ :ಅಗತ್ಯವಿರುವ ರೋಗಿಗಳಿಗೆ 7,500 ಯೂನಿಟ್ ರಕ್ತವನ್ನು ಸಂಗ್ರಹಿಸಲು ಮತ್ತು 75,000ಸ್ವಯಂಪ್ರೇರಿತ ದಾನಿಗಳ ದತ್ತಾಂಶ ಸಂಗ್ರಹ.
  • ಭಾರತೀಯ ಸೇನೆಯಿಂದ 75 ದೂರದ /ಗಡಿ / ಅಭಿವೃದ್ಧಿಯಲ್ಲಿ ಹಿಂದುಳಿದ ಹಳ್ಳಿಗಳಲ್ಲಿ (ಧ್ಯೇಯ : ಗ್ರಾಮ ಸೇವೆ- ರಾಷ್ಟ್ರ ಸೇವೆ) ವೈದ್ಯಕೀಯ ಶಿಬಿರಗಳು, ಅಗ್ನಿಪಥ್ ಯೋಜನೆ ಜಾಗೃತಿ, ವೀರ ನಾರಿಯರು ಮತ್ತು ವೀರ ಮಾತಾಗಳ ಸನ್ಮಾನ, ಸ್ವಚ್ಚತಾ ಅಭಿಯಾನ, – ವಾಲಿಬಾಲ್ / ಖೋ ಖೋ / ಕಬಡ್ಡಿ ಆಟಗಳಿಗೆ ಮೂಲಸೌಕರ್ಯ ವೃದ್ಧಿ ಮತ್ತು ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು

‘ವಿದ್ಯಾಂಜಲಿ’ ಯೋಜನೆ

  • ಇದರಲ್ಲಿ ಆರ್ಮಿ ಪಬ್ಲಿಕ್ ಶಾಲೆಗಳು 75 ಸರ್ಕಾರಿ / ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಅಂಗಸಂಸ್ಥೆ ಹೊಂದಿದ್ದು, ಪರಸ್ಪರ ಅನುಕೂಲವಾಗುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂಚಿಕೊಳ್ಳಲು ಮತ್ತು ವಿನಿಮಯ ಮಾಡಿಕೊಳ್ಳಲು ಕ್ರೀಡಾ ಮೂಲಸೌಕರ್ಯಗಳನ್ನು ವಿನಿಮಯ ಮಾಡಿಕೊಳ್ಳುವುದು, ಕ್ರೀಡಾಕೂಟಗಳನ್ನು ಆಯೋಜಿಸುವುದು ಮತ್ತು ಯೋಗ ಮತ್ತು ಇತರ ಮೃದು ಕೌಶಲ್ಯ (ಸಾಫ್ಟ್ ಸ್ಕಿಲ್ಸ್) ಗಳನ್ನು ಉತ್ತೇಜಿಸುವುದು.
  • ಜಲಮೂಲಗಳ ಪುನರುಜ್ಜೀವನ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ 75 ಅಮೃತ ಸರೋವರಗಳು / ಕೆರೆಗಳ (ಉದ್ದೇಶ: ಜಲ – ಜೀವನ್ ಸುರಕ್ಷಾ) ಸೃಷ್ಟಿ / ಪುನರುಜ್ಜೀವನದ ಕೆಲಸ.
  • ‘ವೃಕ್ಷಾರೋಪಣ’ (ಉದ್ದೇಶ : ಪರ್ಯಾವರಣ ಸುರಕ್ಷಾ) ದಕ್ಷಿಣ ಕಮಾಂಡ್ ಪ್ರದೇಶದಾದ್ಯಂತ ಹಸಿರು ಭಾರತಕ್ಕಾಗಿ 75,000 ಸಸಿಗಳನ್ನು ನೆಡುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು : ವಿಷಯ: “ಏಕ್ ಭಾರತ್ ಸರ್ವಶ್ರೇಷ್ಠ ಭಾರತ’

  • ಸೇನಾ ದಿನಾಚರಣೆಯ ವಾರದಲ್ಲಿ (2023ರ ಜನವರಿ 09-15ರವರೆಗೆ), ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಪ್ರದರ್ಶನ, ಬ್ಯಾಂಡ್ ಪ್ರದರ್ಶನಗಳು, ರಸಪ್ರಶ್ನೆ ಸ್ಪರ್ಧೆಗಳು, ಚಿತ್ರಕಲೆ ಮತ್ತು ಪ್ರಬಂಧ ಬರೆಯುವ ಸ್ಪರ್ಧೆಗಳು, ಸೈಕ್ಲಥಾನ್‌ಗಳು, ಶೌರ್ಯ ಪ್ರಶಸ್ತಿ ಪುರಸ್ಕೃತರಿಂದ ಉತ್ತೇಜನಕಾರಿ ಭಾಷಣಗಳು, ಪ್ರಸಿದ್ಧ ಯುದ್ಧಗಳ ಮರುಸೃಷ್ಟಿ ಪ್ರದರ್‍ಶನ, ಯುದ್ಧ ಸ್ಮಾರಕ/ಯುದ್ಧ ವಸ್ತು ಸಂಗ್ರಹಾಲಯಗಳಿಗೆ ಭೇಟಿ ಮತ್ತು “ಏಕ್ ಭಾರತ್ ಸರ್ವಶ್ರೇಷ್ಠ ಭಾರತ’ ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

ಆಚರಣೆ ಮತ್ತು ಇತಿಹಾಸ

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1859 ಏಪ್ರಿಲ್ 1 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿತ್ತು. ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಅಂದು ಫ್ರಾನ್ಸಿಸ್ ಬಟ್ಟರ್ ಅವರು ಕೆ.ಎಂ.ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜನವರಿ 15ರ ಸೇನಾ ದಿನ ದ ಪಥಸಂಚಲನ (ಪರೇಡ್), 1949ರ ಜನವರಿ 15ರಂದು ಬ್ರಿಟಿಷ್ ಉತ್ತರಾಧಿಕಾರಿಯನ್ನು ಬದಲಾಯಿಸಿ ಮೊದಲ ಬಾರಿಗೆ ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಅಧಿಕೃತವಾಗಿ ಅಧಿಕಾರವಹಿಸಿಕೊಂಡ ದಿನದ ಸಂಕೇತವಾಗಿದೆ.