Published on: January 24, 2023
‘ನೋರೊ’ ಸೋಂಕು
‘ನೋರೊ’ ಸೋಂಕು
ಸುದ್ದಿಯಲ್ಲಿ ಏಕಿದೆ? ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆ ಸೃಷ್ಟಿಸುವ ನೋರೊ ವೈರಸ್ ಸೋಂಕು ಕೇರಳದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ತಗುಲಿದೆ.
ಮುಖ್ಯಾಂಶಗಳು
- ಕಕ್ಕನಾಡು ಬಳಿಯ ಶಾಲೆಯ 1 ಮತ್ತು 2ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಕಂಡುಬಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಲಕ್ಷಣಗಳು
- ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದೊಂದು ವೈರಲ್ ಸೋಂಕಾಗಿದ್ದು, ತೀವ್ರ ವಾಂತಿ ಮತ್ತು ಭೇದಿ ಕಾಡುತ್ತದೆ.
- ಹೇಗೆ ಹರಡುತ್ತದೆ ? ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುತ್ತದೆ.