Published on: January 26, 2023

ಸುಪ್ರೀಂಕೋರ್ಟ್ ತೀರ್ಪುಗಳು

ಸುಪ್ರೀಂಕೋರ್ಟ್ ತೀರ್ಪುಗಳು


ಸುದ್ಧಿಯಲ್ಲಿ ಏಕಿದೆ? 74ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿಸುಪ್ರೀಂ ಕೋರ್ಟ್ ನಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪುಗಳು ಹಲವು ಭಾಷೆಗಳಿಗೆ ಭಾಷಾಂತರ ಮಾಡಲಾಗುವುದು.


ಮುಖ್ಯಾಂಶಗಳು

  • ಸುಪ್ರೀಂಕೋರ್ಟ್ ಪ್ರಮುಖ 1,268 ತೀರ್ಪುಗಳು ವಿವಿಧ ಭಾಷೆಗಳಲ್ಲಿಲಭ್ಯ ಇರುತ್ತವೆ.
  • 13 ಭಾಷೆಗಳಿಗೆ ಸುಪ್ರೀಂಕೋರ್ಟ್ ರಿಜಿಸ್ಟರಿ ತೀರ್ಪುಗಳನ್ನು ಭಾಷಾಂತರ ಮಾಡಿದೆ.
  • ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ. ಮರಾಠಿ ಸೇರಿದಂತೆ 13 ಭಾಷೆಗಳಿಗೆ ತೀ ರ್ಪುಗಳನ್ನು ಭಾಷಾಂತರ ಮಾಡಲಾಗಿದೆ.
  • ಹಿಂದಿ ಭಾಷೆಯಲ್ಲಿ1,091 ತೀರ್ಪುಗಳು ಲಭ್ಯ ಇವೆ. ಕನ್ನಡದಲ್ಲಿ17, ತಮಿಳುನಲ್ಲಿ 52, ತೆಲುಗಿನಲ್ಲಿ 28 ತೀರ್ಪುಗಳು ಲಭ್ಯವಿದ್ದು, ಮಲಯಾಳಂ ಭಾಷೆಯಲ್ಲಿ 36 ತೀರ್ಪುಗಳು ಇವೆ. ಸುಪ್ರೀಂ ಕೋರ್ಟ್ ವೆಬ್ಸೈಟ್ ನ ಲಭ್ಯವಿದೆ
  • ಪ್ರಾದೇಶಿಕ ಭಾಷೆಯಲ್ಲಿ ನ್ಯಾಯಾಲಯದ ತೀರ್ಪು ಲಭ್ಯವಾದರೆ ಸಾಮಾನ್ಯ ಜನರಿಗೆ ತುಂಬ ಅನುಕೂಲವಾಗಲಿದೆ. ಮುಖ್ಯವಾಗಿ ಯುವ ಜನತೆಗೆ ಹೆಚ್ಚಿನ ಸಹಾಯವಾಗಲಿದೆ
  • ಭಾರತ ಬಹುಭಾಷೆಯ ದೇಶ. ಇದು ನಮ್ಮ ಸಂಸ್ಕೃತಿಯ ವೈವಿಧ್ಯತೆಯ ಚೈತನ್ಯ. ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸಿ, ಪ್ರೋತ್ಸಾಹಿಸಲು ಕೇಂದ್ರ ಸರಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ವೈದ್ಯಕೀಯ, ಎಂಜಿನಿಯರಿಂಗ್‌ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವ ಕ್ರಮ ಕೈಗೊಳ್ಳಲಾಗಿದೆ