Published on: January 30, 2023

ಓಝೋನ್ ರಂಧ್ರ

ಓಝೋನ್ ರಂಧ್ರ


ಸುದ್ದಿಯಲ್ಲಿ ಏಕಿದೆ? ಜಾಗತಿಕ ತಾಪಮಾನ ಏರಿಕೆಯಂತಹ ಪರಿಸ್ಥಿತಿಯ ನಡುವೆಯೇ ವಿಜ್ಞಾನಿಗಳು ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.


ಮುಖ್ಯಾಂಶಗಳು

  • ಓಝೋನ್ ರಂಧ್ರವು ಮುಂದಿನ 43 ವರ್ಷಗಳಲ್ಲಿ ಅಂದರೆ 2066ರ ವೇಳೆಗೆ ಸಂಪೂರ್ಣವಾಗಿ ಮುಚ್ಚಿಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ತಜ್ಞರ ತಂಡ ಹೇಳಿದೆ.
  • ‘ಜಾಗತಿಕವಾಗಿ ಸದ್ಯ ಜಾರಿಯಲ್ಲಿರುವ ವಾಯುಮಾಲಿನ್ಯ ತಡೆ ನೀತಿಗಳು ಹೀಗೆ ಮುಂದುವರೆದರೆ 2066ರ ಹೊತ್ತಿಗೆ ಅಂಟಾರ್ಕ್ಟಿಕಾದ ಓಝೋನ್ ಪದರವು 1980ರ ಸ್ಥಿತಿಗೆ(ಓಜೋನ್ ರಂಧ್ರದ ಕಂಡುಬಂದ ಸಮಯ) ಮರಳಲಿದೆ. 2045ರ ಹೊತ್ತಿಗೆ ಆರ್ಕ್ಟಿಕ್‌ನಲ್ಲಿ ಮತ್ತು 2040ರ ಹೊತ್ತಿಗೆ ಜಗತ್ತಿನ ಇತರೆಡೆ ಓಝೋನ್ ಪದರ ಸಾಮಾನ್ಯ ಸ್ಥಿತಿಗೆ ಮರಳಲಿದೆ’

ಏನಿದು ಓಝೋನ್ ಪದರ?

  • ಭೂಮಿಯಿಂದ 20 ರಿಂದ 50 ಕಿ.ಮೀ ವರೆಗಿನ ಎತ್ತರದ ವಾತಾವರಣದ ಪದರವಾಗಿದೆ. ಮೂರು ಆಮ್ಲಜನಕ ಪರಮಾಣುದಿಂದ ರಚನೆಯಾಗಿರುವ ಈ ಓಝೋನ್ ಪದರವು ಸೂರ್ಯನಿಂದ ಹೊಮ್ಮುವ ಅಪಾಯಕಾರಿಯಾದ ಅತಿನೇರಳೆ ವಿಕಿರಣಗಳ ಬಹುಪಾಲನ್ನು ಹೀರಿಕೊಳ್ಳುತ್ತದೆ. ಓಝೋನ್ ಭೂಮಿಗೆ ರಕ್ಷಾ ಕವಚವಾಗಿದೆ. ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡದಲ್ಲಿರುವ ಪ್ರದೇಶ ಇದಾಗಿದೆ.

ಹೇಗೆ ಅಳೆಯಲಾಗುತ್ತದೆ?

  • ಓಜೋನ್ ಮೀಟರ್ ಅಥವಾ ಓಜೋನ್ ಮಾಪಕ

ಭೂಮಿಯ ರಕ್ಷಣೆಯಲ್ಲಿ ಅದರ ಪಾತ್ರವೇನು?

  • ಒಂದು ವೇಳೆ ಓಜೋನ್‌ನ ಈ ಫಿಲ್ಟರ್ ಇರದೇ ಇದ್ದರೆ ಇಷ್ಟು ಹೊತ್ತಿಗೆ ಭೂಮಿಯ ಜೀವಿಗಳೆಲ್ಲಾ ನಾಶವಾಗಿರುತ್ತಿದ್ದವು. ಇಂತಹ ಭೂಮಿಗೆ ಕವಚದಂತಿರುವ ಓಝೋನ್ ಪದರದಲ್ಲಿ ರಂಧ್ರ ಏರ್ಪಟ್ಟಿತ್ತು. ವಾಯುಮಂಡಲದಲ್ಲಿ ಅವ್ಯಾಹತವಾಗಿ ಪಸರಿಸುತ್ತಿರುವ ಹೊಗೆಯಲ್ಲಿನ ನೈಟ್ರೊಜನ್ ಕಣಗಳು ವಿಷಕಾರಿ ಓಝೋನ್ ಅನಿಲವನ್ನು ಉತ್ಪಾದಿಸುತ್ತವೆ. ಭೂಮಿಯ ಮೇಲೆ ಓಝೋನ್ ಪದರ ಆವರಿಸಿರುವುದರಿಂದ ಸೂರ್ಯನ ಉಗ್ರ ತಾಪ ನಮ್ಮನ್ನು ಬಾಧಿಸುತ್ತಿಲ್ಲ. ಓಝೋನ್‌ ಪದರದ ಹಾನಿಯಿಂದ ನೇರಳಾತೀತ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶ ಮಾಡಿ, ಮಾನವನ ದೇಹ ಹಾಗೂ ಜಲಚರ ಸೇರಿದಂತೆ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ಕಾರಣವಾಗುತ್ತದೆ.

ಓಜೋನ್ ಪದರ ಕ್ಷೀಣಿಸಲು ಕಾರಣವೇನು?

  • ಓಝೋನ್ ಪದರ ಕ್ಷೀಣಿಸಲು ಹವಾನಿಯಂತ್ರಣ ಸಾಧನಗಳು (ಎಸಿ), ಪ್ರಿಡ್ಜ್ ಮತ್ತು ಇತರೆ ಉತ್ಪನ್ನಗಳಿಂದ ಬಿಡುಗಡೆಯಾಗುವ ಅಪಾಯಕಾರಿ ರಾಸಾಯನಿಕಗಳು ಶೇ.99ರಷ್ಟು ಕಾರಣವಾಗಿವೆ. ಕೈಗಾರಿಕೋದ್ಯಮ, ಕಾರ್ಖಾನೆ, ವಾಹನಗಳಿಂದ ಬಿಡುಗಡೆಯಾಗುವ ಮಾರಕಕಾರಿ ಹೊಗೆಯಿಂದಾಗಿ ಓಝೋನ್ ಪದರು ಅಪಾಯಕ್ಕೆ ಸಿಲುಕಿದೆ. ಇಲ್ಲಿಂದ ಬಿಡುಗಡೆಯಾಗುವ ಕ್ಲೋರೋ ಫ್ಲೋರೋ ಕಾರ್ಬನ್ ಅನಿಲ ಓಝೋನ್ ಪದರಿಗೆ ರಂಧ್ರಮವನ್ನುಂಟು ಮಾಡುತ್ತಿದೆ.

ಓಜೋನ್ ರಂಧ್ರದಿಂದಾಗುವ ಹಾನಿ

  • ಓಝೋನ್ ಪದರಿಲ್ಲದೆ ಭೂಮಿಯಲ್ಲಿ ಬದುಕಲು ಸಾಧ್ಯವಿಲ್ಲ. ಓಝೋನ್ ಪದರಲ್ಲಿ ರಂಧ್ರ ಮತ್ತಷ್ಟು ರೂಪುಗೊಂಡರೆ ಇದು ಚರ್ಮದ ಕ್ಯಾನ್ಸರ್, ಕಣ್ಣಿನ ಪೊರೆಗಳಂತಹ ಕಾಯಿಲೆಗಳೊಂದಿಗೆ ಪರಿಸರ ಹಾನಿಯನ್ನು ಹೆಚ್ಚಿಸಲಿದೆ.