Published on: February 14, 2023
ಚುಟುಕು ಸಮಾಚಾರ – 14 ಫೆಬ್ರವರಿ 2023
ಚುಟುಕು ಸಮಾಚಾರ – 14 ಫೆಬ್ರವರಿ 2023
- ಜಗತ್ತಿನ ಅತೀ ದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಭಾರತದಲ್ಲಿ ತನ್ನ ಹೊಸ ಲಾಜಿಸ್ಟಿಕ್ಸ್ ಕೇಂದ್ರ ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ವಿಮಾನದ ಬಿಡಿಭಾಗಗಳಿಗಾಗಿ ಲಾಜಿಸ್ಟಿಕ್ಸ್ ಕೇಂದ್ರವನ್ನು ಸ್ಥಾಪಿಸಲು ಬೋಯಿಂಗ್ ಕೋ ಭಾರತದಲ್ಲಿ ಸುಮಾರು $ 24 ಮಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ
- ಬ್ರೆಜಿಲ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್, ಪ್ರಮುಖ ಜೈವಿಕ ಇಂಧನ ಉತ್ಪಾದಕರು ಮತ್ತು ಗ್ರಾಹಕರಂತೆ, ಮುಂದಿನ ಕೆಲವು ತಿಂಗಳುಗಳಲ್ಲಿ ಇತರ ಆಸಕ್ತ ದೇಶಗಳೊಂದಿಗೆ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಿವೆ.
- ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪಿಎಂ ವಿಕಾಸ್ ಯೋಜನೆಯನ್ನು ಘೋಷಿಸಿದರು.ದೇಶದ ಕುಶಲಕರ್ಮಿಗಳ ಸ್ಥಿತಿಯನ್ನು ಸುಧಾರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು. ನಾಲ್ಕು ವರ್ಷಗಳ ಹಿಂದೆ ಇದೆ ದಿನ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.