Published on: February 20, 2023
ಚುಟುಕು ಸಮಾಚಾರ – 20 ಫೆಬ್ರವರಿ 2023
ಚುಟುಕು ಸಮಾಚಾರ – 20 ಫೆಬ್ರವರಿ 2023
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಫೆಬ್ರವರಿ 20 ರಂದು ತ್ರಿಪದಿ ಕವಿ ಸರ್ವಜ್ಞ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದೆ. ಇದು 503 ನೇ ಜಯಂತಿಯಾಗಿದೆ
- ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ಚಿರತೆಯ ಅಸಹನೆಯ ವರ್ತನೆಗೆ ಸಿಡಿವಿ ರೋಗ ಕಾರಣ ಎಂದು ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ. ಸಿಡಿವಿಯನ್ನು ಕ್ಯಾನೈನ್ ಮೊರ್ಬಿಲ್ಲಿವೈರಸ್ ಎಂದೂ ಕರೆಯುತ್ತಾರೆ. ಇದು ಮಾಂಸಾಹಾರಿ ಪ್ರಾಣಿಗಳಲ್ಲಿ ‘ದಿಗ್ಭ್ರಮೆ’ ಮತ್ತು ‘ಭಯ ಕಳೆದುಕೊಳ್ಳುವಂತೆ ನರಗಳ ಮೇಲೆ ಪರಿಣಾಮ ಬೀರುತ್ತದೆ
- ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದ12 ಚಿರತೆಗಳನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಕುನೊ ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ಸರ್ಕಾರಗಳ ನಡುವಿನ ತಿಳುವಳಿಕೆ ಒಪ್ಪಂದದ (ಎಂಒಯು) ಆಧಾರದ ಮೇಲೆ ಚೀತಾ ಮರುಪರಿಚಯ ಯೋಜನೆಯ ಭಾಗವಾಗಿ ಚಿರತೆಗಳನ್ನು ಭಾರತಕ್ಕೆ ತರಲಾಗಿದೆ.
- ಉಲ್ಕಾಶಿಲೆಗಳ ಸಮೂಹವು ಚಂದ್ರನ ಮೇಲಿನ ಕಪ್ಪು ಭಾಗ (ಬಸಾಲ್ಟ್)ದ ಇರುವಿಕೆ ಪತ್ತೆ ಮಾಡಲು ನೆರವು ನೀಡುತ್ತದೆ ಎಂದು ಇಸ್ರೋ ಹೇಳಿದೆ. ಇಸ್ರೋ ಪ್ರಕಾರ, ಅಹಮದಾಬಾದ್ ಮೂಲದ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್ಎಲ್), ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ನ ವಿಜ್ಞಾನಿಗಳ ತಂಡವು ಪ್ರಾಚೀನ ಚಂದ್ರನ ಬಸಾಲ್ಟಿಕ್ (ಕಪ್ಪು ಭಾಗ) ಉಲ್ಕೆಗಳ ವಿಶಿಷ್ಟ ಗುಂಪನ್ನು ಕಂಡುಹಿಡಿದಿದೆ.
- ಇಂದೋರ್ ನಲ್ಲಿ ನಡೆದ ಜಿ-20 ಕೃಷಿ ಪ್ರತಿನಿಧಿಗಳ ಸಭೆಯಲ್ಲಿ ಆಹಾರ ಭದ್ರತೆ, ಪೌಷ್ಟಿಕಾಂಶ, ಸುಸ್ಥಿರ ಕೃಷಿ ಮತ್ತು ಕೃಷಿ ಸಾಗಣಿಕೆ ವ್ಯವಸ್ಥೆ ಕುರಿತಂತೆ ಚರ್ಚೆ ನಡೆಯಿತು.
- ಭಾರತದ ವರುಣ್ ತೋಮರ್ ಅವರು ಕೈರೊದಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್ (10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗ) ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.