Published on: February 27, 2023
ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ
ಸುದ್ದಿಯಲ್ಲಿ ಏಕಿದೆ? ಶಿವಮೊಗ್ಗದ ಸಮೀಪದ ಸೋಗಾನೆ ಗ್ರಾಮದ ಬಳಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯಾಂಶಗಳು
- ಏರಿಯಲ್ ವ್ಯೂನಲ್ಲಿ ಕಮಲಾಕೃತಿಯಲ್ಲಿ ಕಾಣುವ ವಿಮಾನ ನಿಲ್ದಾಣದ ಒಂದು ಭಾಗವನ್ನು ಹತ್ತಿರದಲ್ಲಿ ವೀಕ್ಷಿಸಿದಾಗಲೂ ಕಮಲದ ದಳಗಳು ಕಾಣುವ ರೀತಿ ವಿನ್ಯಾಸಗೊಳಿಸಲಾಗಿದೆ.
- ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕುವೆಂಪು ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.
- ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಈ ಏರ್ಪೋರ್ಟ್ನಲ್ಲಿ ಬಂದಿಳಿಯುವ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸುವುದು ವಿಶೇಷ.
- ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬೀದರ್(ಸದ್ಯಕ್ಕೆ ನಾಗರಿಕ ವಿಮಾನ ಓಡಾಡುತ್ತಿಲ್ಲ), ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ.
ವೆಚ್ಚ: 449.22 ಕೋಟಿ ವೆಚ್ಚ ವೆಚ್ಚವಾಗಿದ್ದು, ಮೂಲ ಸೌಕರ್ಯದ ವೆಚ್ಚ ಸೇರಿ ಒಟ್ಟು .600 ಕೋಟಿ ವ್ಯಯ ಮಾಡಲಾಗಿದೆ.
ವಿಶೇಷತೆಗಳು
- ರಾಜ್ಯದ 9ನೇ ಹಾಗೂ ದೇಶದ 148ನೇ ವಿಮಾನ ನಿಲ್ದಾಣ ಆಗಿದೆ. ರಾಜ್ಯದ ಎರಡನೇ ಅತಿ ಉದ್ದದ ರನ್ವೇ ಹೊಂದಿರುವ ಇದು, ಮಧ್ಯಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಗೂ ಪಾತ್ರವಾಗಿದೆ.
- 3,200 ಮೀಟರ್ ಉದ್ದದ ರನ್ ವೇ ಹೊಂದಿದೆ.
- ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಹೊರತುಪಡಿಸಿರೆ ರಾಜ್ಯದಲ್ಲೇ ಇದು ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ಏರ್ಪೋರ್ಟ್ ಆಗಿದೆ.
- ಇದರಿಂದ ಏರ್ಬಸ್ನಂತಹ ದೊಡ್ಡ ವಿಮಾನಗಳೂ ಇಲ್ಲಿ ಇಳಿಯುವುದು ಸಾಧ್ಯವಾಗಲಿದೆ. ಜೊತೆಗೆ ರಾತ್ರಿಯೂ ಇಲ್ಲಿ ವಿಮಾನಗಳನ್ನು ಲ್ಯಾಂಡ್ ಮಾಡಬಹುದಾದ ವ್ಯವಸ್ಥೆ ಇದೆ.
- 4,320 ಚದರಡಿ ವಿಸ್ತೀರ್ಣದ ಪ್ಯಾಸೆಂಜರ್ ಟರ್ಮಿನಲ್ ಅನ್ನು ಈ ಏರ್ಪೋರ್ಟ್ ಹೊಂದಿದೆ.
- ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.
ಹಿನ್ನೆಲೆ
- 2007ರಲ್ಲಿ ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಮೊದಲು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಿಂದ ಹಿಂದೆ ಸರಿದಿದ್ದರು. 2019ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಬೋಯಿಂಗ್ನಂತಹ ದೊಡ್ಡ ವಿಮಾನ ಇಳಿಯಲು ಅವಕಾಶ ಕಲ್ಪಿಸಿ, ರನ್ ವೇ ಉದ್ದವನ್ನು 2.05 ಕಿ.ಮೀ ಬದಲಿಗೆ, 3.20 ಕಿ.ಮೀ.ಗೆ ಹೆಚ್ಚಿಸಲಾಯಿತು. ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಲಾಯಿತು.